ಕರ್ನಾಟಕದಲ್ಲಿ ನಿರ್ಭಯಾ ಕೇಂದ್ರ ಸ್ಥಾಪನೆ: ಬಜೆಟ್‌ನಲ್ಲಿ ಘೋಷಣೆಯಾಗಲಿದೆಯೇ?
ಬೆಂಗಳೂರು, ಜು.3: ರಾಜ್ಯದ ಮಹಿಳಾ ಠಾಣೆಗಳನ್ನು ನಿರ್ಭಯ ಕೇಂದ್ರಗಳನ್ನಾಗಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸುತ್ತಿದೆ, ನಿರ್ಭಯಾ ನಿದೀಯನ್ನು ಸದ್ಬಳಕೆ ಮಾಡು ದೃಷ್ಟಿಯಿಂದ ಈ ಕ್ರಮ ಕೈಗೊಳ್ಳುತ್ತಿದೆ. ಈ ಬಜೆಟ್‌ನಲ್ಲಿ ಘೋಷಣೆ ಮಾಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಠಾಣೆಗಳ ಪೊಲೀಸರ ಜತೆಗೆ ನಿರ್ಭಯಾ ಕೇಂದ್ರದಲ್ಲಿ ಮಹಿಳೆಯರ ಪ್ರಕರಣಗಳ ವಿಶೇಷ ನಿರ್ವಹಣೆಗಾಗಿ ವಕೀಲರು, ವೈದ್ಯರು, ಮನೋತಜ್ಞರು, ಮಕ್ಕಳ ತಜ್ಞರು, ಮಹಿಳಾ ವಿಷಯಗಳ ಕೌನ್ಸಿಲರ್‌ಗಳನ್ನು ನೇಮಕ ಮಾಡಲಾಗುತ್ತಿದೆ.
ಮೊದಲ ಹಂತದಲ್ಲಿ ಬೆಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿರುವ ಮಹಿಳಾ ಠಾಣೆಗಳನ್ನು ನಿರ್ಭಯಾ ಕೇಂದ್ರಗಳಾಗಿ ಪರಿವರ್ತಿಸಲಾಗುತ್ತಿದೆ. ಬಳಿಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ತಲಾ ಒಂದು ಮಹಿಳಾ ಪೊಲೀಸ್ ಠಾಣೆಗಳನ್ನು ರ್ನಿಯಾ ಕೇಂದ್ರವನ್ನಾಗಿಸಲು ಉದ್ದೇಶಿಸಲಾಗಿದೆ.

ಪ್ರತಿಯೊಂದು ನಿರ್ಭಯಾ ಕೇಂದ್ರ ಸ್ಥಾಪನೆಗೆ ತಲಾ 2 ಕೋಟಿ ರೂ.ವನ್ನು ಮೀಸಲಿಡಲಾಗುತ್ತಿದೆ. ಕೇಂದ್ರ ಸರ್ಕಾರದ ಶೇ.60ರಷ್ಟು ಹಾಗೂ ರಾಜ್ಯ ಸರ್ಕಾರ ಶೇ.40ರಷ್ಟು ಅನುದಾನದಿಂದ ಯೋಜನೆ ಜಾರಿ ಮಾಡಲಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸಂತ್ರಸ್ತರಿಗೆ ಮಾರ್ಗದರ್ಶನ, ನೈತಿಕ ಬೆಂಬಲ, ಪರಿಸ್ಥಿತಿ ಎದುರಿಸುವ ಸ್ಥೈರ್ಯ, ಕಾನೂನಾತ್ಮಕ ಹೋರಾಟಗಳ ಕುರಿತು ನಿರ್ಭಯಾ ಕೇಂದ್ರ ನೆರವಾಗಲಿದೆ. ಪ್ರಕರಣದ ತನಿಖೆ ಮತ್ತು ವಿಚಾರಣೆ ಸಂದರ್ಭದಲ್ಲಿ ಸಂತ್ರಸ್ತರು ಯಾವುದೇ ರೀತಿಯ ಸಮಸ್ಯೆ, ತೊಳಲಾಟಗಳಿಗೆ ಸಿಲುಕದಂತೆ ವಿಚಾರಣೆಗೆ ನಿಗದಿತ ದಿನಾಂಕದಿಂದ ಹಾಜರಾಗುವುದು, ಪ್ರಕರಣಗಳ ಸಂಬಂಧ ನ್ಯಾಯಾಲಯದ ಆದೇಶ ಪಾಟಲನೆಯನ್ನೂ ಕೂಡ ನಿರ್ಭಯಾ ಕೇಂದ್ರಗಳು ನಿರ್ವಹಿಸಲಿದೆ ಎಂದು ತಿಳಿದುಬಂದಿದೆ.












Click it and Unblock the Notifications