ವೈಯಕ್ತಿಕ ಟ್ವಿಟರ್ ಖಾತೆ ತೆರೆದ ನಿಖಿಲ್ ಕುಮಾರಸ್ವಾಮಿ

ಬೆಂಗಳೂರು, ಮೇ 29 : ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಟ್ವಿಟರ್‌ಗೆ ಬಂದಿದ್ದಾರೆ. ಜನರ ಜೊತೆ ನಿರಂತರ ಸಂಪರ್ಕದಲ್ಲಿರಲು ವೈಯಕ್ತಿಕ ಟ್ವಿಟರ್ ಖಾತೆ ತೆರೆದಿದ್ದೇನೆ ಎಂದು ಹೇಳಿದ್ದಾರೆ.

Recommended Video

      30% ಕೊರೋನಾಗೆ ಖರ್ಚಾಗಿದೆ ಇನ್ನೂ 800 ಕೋಟಿ ಇದ್ಯಂತೆ | BC Patil | Oneindia Kannada

      ಶುಕ್ರವಾರ ನಿಖಿಲ್ ಕುಮಾರಸ್ವಾಮಿ ಈ ಕುರಿತು ತಮ್ಮ ಫೇಸ್ ಬುಕ್ ಪುಟ Nikhil Gowdaದಲ್ಲಿ ಪೋಸ್ಟ್ ಹಾಕಿದ್ದಾರೆ. "ಇನ್ನು ಮುಂದೆ ನಿಮ್ಮೆಲ್ಲರ ಜೊತೆ ನಿರಂತರವಾಗಿ ಸಂಪರ್ಕದಲ್ಲಿರಲು ವೈಯಕ್ತಿಕ ಟ್ವಿಟರ್ ಖಾತೆಗೆ ಚಾಲನೆ ನೀಡಿದ್ದು ನನ್ನ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣವಾದ ಟ್ವಿಟರ್ ಮೂಲಕವೂ ಹಂಚಿಕೊಳ್ಳಲಿದ್ದೇನೆ" ಎಂದು ತಿಳಿಸಿದ್ದಾರೆ.

      "ಸಮಾಜಮುಖಿಯಾಗಿರುವ ಆರೋಗ್ಯಪೂರ್ಣ ಚರ್ಚೆಯಲ್ಲಿ ಪಾಲ್ಗೊಳ್ಳೋಣ" ಎಂದು ಜನರಿಗೆ ತಮ್ಮ ಟ್ವಟರ್ ಖಾತೆ ಫಾಲೋ ಮಾಡಲು ಜೆಡಿಎಸ್ ಯುವ ಘಟಕದ ಅಧ್ಯಕ್ಷರಾಗಿರುವ ನಿಖಿಲ್ ಕುಮಾರಸ್ವಾಮಿ ಆಹ್ವಾನ ನೀಡಿದ್ದಾರೆ. ಫೇಸ್‌ ಬುಕ್‌ನಲ್ಲಿ ಈಗಾಗಲೇ ಅವರು ಸಕ್ರಿಯರಾಗಿದ್ದಾರೆ.

      @Nikhil_Kumar_k ಖಾತೆಯಲ್ಲಿ ನಿಖಿಲ್ ಕುಮಾರಸ್ವಾಮಿ 13 ಜನರನ್ನು ಫಾಲೋ ಮಾಡುತ್ತಿದ್ದಾರೆ. ಜೆಡಿಎಸ್ ಪಕ್ಷದ ಖಾತೆ, ತಾತ ಎಚ್. ಡಿ. ದೇವೇಗೌಡ ಮತ್ತು ತಂದೆ ಎಚ್. ಡಿ. ಕುಮಾರಸ್ವಾಮಿ ಅವರ ಟ್ವಿಟರ್ ಖಾತೆ ಇದರಲ್ಲಿ ಸೇರಿದೆ. ಸದ್ಯ ಈ ಖಾತೆಗೆ 2,700ಕ್ಕೂ ಅಧಿಕ ಹಿಂಬಾಲಕರಿದ್ದಾರೆ.

      ಟ್ವಿಟರ್‌ನಲ್ಲಿ ಸಕ್ರಿಯ

      ಟ್ವಿಟರ್‌ನಲ್ಲಿ ಸಕ್ರಿಯ

      2015ರಲ್ಲಿ ಟ್ವಿಟರ್‌ಗೆ ಸೇರಿದ ನಿಖಿಲ್, 2016ರಲ್ಲಿ @Nikhil_Kumar_k ಅಕೌಂಟ್‌ನಿಂದ ಹಲವು ಟ್ವೀಟ್ ಮಾಡಿರುವ ನಿಖಿಲ್ ಕುಮಾರಸ್ವಾಮಿ ಬಳಿಕ ಎರಡು ವರ್ಷ ಟ್ವಿಟರ್‌ನಿಂದ ಬಿಡುವು ಪಡೆದುಕೊಂಡಿದ್ದರು. 2018ರಲ್ಲಿ ಮತ್ತೆ ಕೆಲವು ಟ್ವೀಟ್‌ಗಳನ್ನು ಮಾಡಿದ್ದಾರೆ. 2019ರಲ್ಲಿಯೂ ಕೆಲವು ಟ್ವೀಟ್‌ಗಳಿವೆ. ಈಗ ಇದೇ ಖಾತೆಯಲ್ಲಿ ಸಕ್ರಿಯರಾಗುವ ಸುಳಿವನ್ನು ನೀಡಿದ್ದಾರೆ.

      ಅಂಬರೀಶ್ ಜೊತೆಗಿನ ಫೋಟೋ ಟ್ವೀಟ್

      ಮೇ 29ರ ಶುಕ್ರವಾರ ರೆಬಲ್ ಸ್ಟಾರ್ ಅಂಬರೀಶ್ ಹುಟ್ಟು ಹಬ್ಬ. ಅಂಬರೀಶ್ ಜೊತೆಗಿರುವ ಫೋಟೋವನ್ನು ಟ್ವೀಟ್ ಮಾಡಿರುವ ನಿಖಿಲ್ ಕುಮಾರಸ್ವಾಮಿ, "ಅಂಬರೀಶ್ ಅವರ ಜನ್ಮದಿನವಾದ ಇಂದು ಅವರನ್ನು ಗೌರವಪೂರ್ವಕವಾಗಿ ಸ್ಮರಿಸೋಣ" ಎಂದು ಹೇಳಿದ್ದಾರೆ.

      ಕನ್ನಡಿಗ, ನಟ, ಅಧ್ಯಕ್ಷ

      ಕನ್ನಡಿಗ, ನಟ, ಅಧ್ಯಕ್ಷ

      ನಿಖಿಲ್ ಕುಮಾರಸ್ವಾಮಿ ರಾಜಕಾರಣದ ಜೊತೆ ಸಿನಿಮಾ ರಂಗದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಟ್ವಿಟರ್ ಖಾತೆಯಲ್ಲಿ ಕನ್ನಡಿಗ, ಸ್ಯಾಂಡಲ್ ವುಡ್ ನಟ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ಎಂದು ಬಯೋ ಬರೆದಿದ್ದಾರೆ. ಹುಟ್ಟಿದ ದಿನಾಂಕ ಮತ್ತು ಟ್ವಿಟರ್‌ಗೆ ಸೇರಿದ ದಿನಾಂಕವೂ ಇದೆ.

      65 ಟ್ವೀಟ್‌ ಮಾಡಿದ್ದಾರೆ

      65 ಟ್ವೀಟ್‌ ಮಾಡಿದ್ದಾರೆ

      @Nikhil_Kumar_k ಖಾತೆಯಿಂದ ಇದುವರೆಗೂ ನಿಖಲ್ ಕುಮಾರಸ್ವಾಮಿ 65 ಟ್ವೀಟ್ ಮಾಡಿದ್ದಾರೆ. 13 ಜನರನ್ನು ಅವರು ಫಾಲೋ ಮಾಡುತ್ತಿದ್ದು, 2700ಕ್ಕೂ ಅಧಿಕ ಹಿಂಬಾಲಕರು ಇದ್ದಾರೆ. ಎಚ್. ಡಿ. ಕುಮಾರಸ್ವಾಮಿ, ಎಚ್. ಡಿ. ದೇವೇಗೌಡ ಈಗಾಗಲೇ ಟ್ವಿಟರ್‌ನಲ್ಲಿ ಸಕ್ರಿಯರಾಗಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+