ಅಕ್ರಮ ಮರಳು ಗಣಿಗಾರಿಕೆ ಮಾಡಿದರೆ ಜೈಲು!

ಬೆಂಗಳೂರು, ಡಿ. 19 : ಕರ್ನಾಟಕದಲ್ಲಿ ಹೊರ ಮರಳು ನೀತಿ ಜಾರಿಗೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಸೋಮವಾರದಿಂದಲೇ ಜಾರಿಯಾಗುವಂತೆ ನೂತನ ಮರಳು ನೀತಿ ಜಾರಿಗೆ ಬಂದಿದೆ. ಅಕ್ರಮವಾಗಿ ಮರಳು ಗಣಿಗಾರಿಕೆ ಅಥವ ಸಾಗಣೆ ಮಾಡುವವರಿಗೆ 2 ವರ್ಷ ಜೈಲು ಶಿಕ್ಷೆ ಮತ್ತು 25 ಸಾವಿರ ದಂಡ ವಿಧಿಸಲು ಇದರಲ್ಲಿ ಅವಕಾಶ ಕಲ್ಪಿಸಲಾಗಿದೆ.

ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ, ದೇಶದ ಗಣಿ ಮತ್ತು ಖನಿಜ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರಾಜ್ಯದಲ್ಲಿ ಮರಳು ಗಣಿಗಾರಿಕೆಗೆ ಪ್ರತ್ಯೇಕ ನಿಯಮಾವಳಿ ರೂಪಿಸಲಾಗಿದೆ. ಒಟ್ಟು 22 ಪುಟಗಳಷ್ಟಿರುವ ನಿಯಮಾವಳಿಗಳ ಬಗ್ಗೆ ಸೋಮವಾರ ಅಧಿಸೂಚನೆ ಹೊರಡಿಸಲಾಗಿದೆ ಎಂದರು. [ಮರಳು ದಂಧೆಗೆ ಕಡಿವಾಣ]

tb jayachandra

ನೂತನ ಮರಳು ನೀತಿಯಂತೆ ಅಕ್ರಮ ಮರಳು ಗಣಿಗಾರಿಕೆ ಅಥವಾ ಸಾಗಣೆ ಮಾಡುವವರಿಗೆ ಎರಡು ವರ್ಷದವರೆಗೂ ಜೈಲು ಶಿಕ್ಷೆ ಹಾಗೂ 25 ಸಾವಿರ ರೂ. ವರೆಗೂ ದಂಡ ವಿಧಿಸಲು ಅವಕಾಶವಿದೆ. ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಮಾತ್ರ ಮರಳು ಗಣಿಗಾರಿಕೆ ಮತ್ತು ಸಾಗಣೆಗೆ ಈ ನಿಯಮ ಅವಕಾಶ ನೀಡಲಿದೆ ಎಂದರು. ಹೊಸ ಮರಳು ನೀತಿ ಸೋಮವಾರದಿಂದ ಅನ್ವಯವಾಗುವಂತೆ ಜಾರಿಗೆ ಬಂದಿದೆ ಎಂದು ಹೇಳಿದರು.

ನೂತನ ನೀತಿಯಂತೆ ಮರಳು ಗಣಿಗಾರಿಕೆ ನಿರ್ವಹಣೆ ಮತ್ತು ಮೇಲ್ವಿಚಾರಣೆಗೆ ತಾಲೂಕು ಮಟ್ಟದಲ್ಲಿ ಉಪ ವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಪ್ರತ್ಯೇಕ ಎರಡು ಮರಳು ನಿರ್ವಹಣಾ ಸಮಿತಿಗಳನ್ನು ರಚಿಸಲಾಗಿದೆ. ಈ ಎರಡು ಸಮಿತಿಗಳು ಮರಳು ಗಣಿಗಾರಿಕೆ ಸಂಬಂಧ ಪರವಾನಗಿ, ಗುತ್ತಿಗೆ ನೀಡುತ್ತವೆ. ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳುತ್ತವೆ ಎಂದರು.

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಮರಳು ನಿರ್ವಹಣಾ ಸಮಿತಿ ರಚನೆ ಮಾಡಲಾಗಿದೆ. ತಾಲೂಕು ಸಮಿತಿಯ ಶಿಫಾರಸಿನ ಮೇರೆಗೆ ಜಿಲ್ಲಾ ಸಮಿತಿ ಮರಳು ಗಣಿಗಾರಿಕೆ ಬಗ್ಗೆ ಅಂತಿಮ ತೀರ್ಮಾನಗಳನ್ನು ಕೈಗೊಳ್ಳಬೇಕು. ತಾಲೂಕು ಸಮಿತಿ ತಿಂಗಳಿಗೊಮ್ಮೆ, ಜಿಲ್ಲಾ ಸಮಿತಿ ಎರಡು ತಿಂಗಳಿಗೊಮ್ಮೆ ಸಭೆ ಸೇರಿ ಮರಳು ಗಣಿಗಾರಿಕೆ ಬಗ್ಗೆ ಚರ್ಚಿಸುತ್ತೆವೆ ಎಂದು ಮಾಹಿತಿ ನೀಡಿದರು.

ತಾಲೂಕು ನಿರ್ವಹಣಾ ಸಮಿತಿಯಲ್ಲಿ ತಹಶೀಲ್ದಾರ್‌, ತಾಲೂಕು ಪಂಚಾಯತ್‌ ಕಾರ್ಯ ನಿರ್ವಾಹಕ ಅಧಿಕಾರಿ, ಪೊಲೀಸ್‌ ಇನ್ಸ್‌ಪೆಕ್ಟರ್‌, ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್‌, ವಲಯ ಅರಣ್ಯಾಧಿಕಾರಿ, ತಾಲೂಕು ಸಮಾಜ ಕಲ್ಯಾಣಾಧಿಕಾರಿ, ಕಂದಾಯ ನಿರೀಕ್ಷಕರು, ಸಂಬಂಧಪಟ್ಟ ಪಂಚಾಯತ್‌ ಪಿಡಿಒ ಸದಸ್ಯರಾಗಿದ್ದು, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂಗರ್ಭ ಪರಿಣತರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ ಎಂದರು.

ಯಂತ್ರಕ್ಕೆ ನಿಷೇಧ : ಸೇತುವೆ ಇರುವ ಕಡೆ ನದಿ ದಡದ ಎರಡೂ ದಿಕ್ಕಿನಲ್ಲಿ ಕನಿಷ್ಠ (ಕೆಳಕ್ಕೆ 500 ಮೀಟರ್‌ ಮತ್ತು ಮೇಲ್ಭಾಗಕ್ಕೆ 250 ಮೀಟರ್‌) ದೂರದಲ್ಲಿ ಮರಳು ಗಣಿಗಾರಿಕೆ ನಿಷೇಧಿಸಲಾಗಿದೆ. ಜೆಸಿಬಿ, ಟ್ರ್ಯಾಕ್ಟರ್‌ ಸೇರಿದಂತೆ ಯಾವುದೇ ಯಂತ್ರೋಪಕರಣಗಳನ್ನು ನದಿ ದಡದಿಂದ 10 ಮೀಟರ್‌ ಅಂತರದಲ್ಲಿ ಮರಳು ಗಣಿಗಾರಿಕೆಗೆ ಮತ್ತು ಸಾಗಣೆಗೆ ಬಳಸುವಂತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+