ಬೆಂಗಳೂರು-ಮೈಸೂರು ಮೆಮು ರೈಲು ಸಂಚಾರಕ್ಕಿದ್ದ ಅಡೆತಡೆ ನಿವಾರಣೆ

Recommended Video

      ಬೆಂಗಳೂರು-ಮೈಸೂರು ಮೆಮು ರೈಲು ಸಂಚಾರಕ್ಕಿದ್ದ ಅಡೆತಡೆ ನಿವಾರಣೆ | Oneindia Kannada

      ಬೆಂಗಳೂರು, ಸೆಪ್ಟೆಂಬರ್ 24 : ಮೈಸೂರು-ಬೆಂಗಳೂರು ನಡುವೆ ವಿದ್ಯುತ್ ಚಾಲಿತ ರೈಲು ಸಂಚಾರ ಆರಂಭಿಸಲು ಇದ್ದ ಅಡೆತಡೆ ನಿವಾರಣೆಯಾಗಿದೆ. ನವೆಂಬರ್ ಅಂತ್ಯದ ವೇಳೆಗೆ 220 ಕೆವಿ ಹೊಸ ವಿದ್ಯುತ್ ಮಾರ್ಗ ನಿರ್ಮಾಣವಾಗಲಿದ್ದು, ರೈಲು ಸಂಚಾರಕ್ಕೆ ಅನುಕೂಲವಾಗಲಿದೆ.

      ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್) ಮೈಸೂರು-ಬೆಂಗಳೂರು ರೈಲು ಸೇವೆಗೆ ವಿದ್ಯುತ್ ಒದಗಿಸಲು 4 ಕಿ.ಮೀ.ಗಳ ಹೊಸ ಮಾರ್ಗವನ್ನು ನಿರ್ಮಾಣ ಮಾಡಲಿದೆ. ತುಬಿನಕೆರೆಯಿಂದ ಮಂಡ್ಯದ ಯಲಿಯೂರು ಸಬ್ ಸ್ಟೆಷನ್‌ ತನಕ ಮಾರ್ಗ ನಿರ್ಮಾಣವಾಗಲಿದೆ.

      ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ಮಾರ್ಗ ನಿರ್ಮಾಣ ಮಾಡುವಾಗ ಜಮೀನು ಹೊಂದಿರುವ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಸೂಚನೆ ನೀಡಲಾಗಿದೆ.

      New line to feed power to Bengaluru Mysuru MEMU rail

      ಬೆಂಗಳೂರು-ಮೈಸೂರು ಮಾರ್ಗದಲ್ಲಿ ಮೇನ್ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ (ಮೆಮು) ರೈಲುಗಳನ್ನು ಓಡಿಸಲು ಇಲಾಖೆ ಮುಂದಾಗಿದೆ. ಆದರೆ, ಅದಕ್ಕೆ ವಿದ್ಯುತ್ ಅಗತ್ಯವಿದೆ. ವಿದ್ಯುತ್ ಮಾರ್ಗ ನಿರ್ಮಾಣಕ್ಕಾಗಿ ರೈಲ್ವೆ ಇಲಾಖೆ 2007ರಲ್ಲಿಯೇ ಕೆಪಿಟಿಸಿಎಲ್‌ಗೆ 13.09 ಕೋಟಿ ನಗದನ್ನು ಜಮಾ ಮಾಡಿತ್ತು.

      ಆದರೆ, ಬೆಂಗಳೂರು-ಮೈಸೂರು ನಡುವಿನ ಜೋಡಿ ಮಾರ್ಗ ಈಗ ಪೂರ್ಣಗೊಂಡಿದೆ. ವಿದ್ಯುತ್ ಮಾರ್ಗ ನಿರ್ಮಾಣಕ್ಕೆ ಪ್ರಸ್ತುತ ಮಾರುಕಟ್ಟೆ ದರವನ್ನು ನೀಡಿ ಎಂದು ರೈತರು ಪಟ್ಟು ಹಿಡಿದಿದ್ದರು. ಆದ್ದರಿಂದ, ಮಾರ್ಗ ನಿರ್ಮಾಣ ಕಾರ್ಯ ಸ್ಥಗಿತಗೊಂಡಿತ್ತು.

      ಈಗ ಪರಿಹಾರ ನೀಡಲು ಒಪ್ಪಿಗೆ ನೀಡಲಾಗಿದೆ. ಹೊಸ ಮಾರ್ಗ ನಿರ್ಮಾಣ ಕಾರ್ಯ ತಕ್ಷಣ ಆರಂಭವಾಗಲಿದ್ದು, ನವೆಂಬರ್ ಅಂತ್ಯದ ವೇಳೆಗೆ ಪೂರ್ಣವಾಗಲಿದೆ. 23 ಕಂಬಗಳನ್ನು ಹಾಕಬೇಕಾಗಿದೆ. 6 ಕಂಬಗಳನ್ನು ಈಗಾಗಲೇ ಹಾಕಲಾಗಿದೆ.

      ತುಬಿನಕೆರೆ- ಯಲಿಯೂರು ನಡುವೆ ವಿದ್ಯುತ್ ಮಾರ್ಗ ಮುಕ್ತಾಯವಾದರೆ ಬೆಂಗಳೂರು-ಮೈಸೂರು ನಡುವೆ ಮೆಮು ರೈಲು ಸಂಚಾರ ಆರಂಭವಾಗಲಿದೆ. ಇದರಿಂದಾಗಿ ಬೆಂಗಳೂರು-ಮೈಸೂರ ನಡುವಿನ ಸಂಚಾರದ ಅವಧಿ 30 ನಿಮಿಷ ಕಡಿಮೆಯಾಗಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+