ನೆಲಮಂಗಲ-ಹಾಸನ ರಸ್ತೆ ಟೋಲ್ ದರ ಏರಿಕೆ, ವಿವರಗಳು
ಬೆಂಗಳೂರು, ಸೆಪ್ಟೆಂಬರ್ 01; ಬೆಂಗಳೂರು-ಹಾಸನ ನಡುವೆ ಸಂಚಾರ ನಡೆಸುವ ವಾಹನ ಸವಾರರಿಗೆ ಈ ಮಾಹಿತಿ. ಶುಕ್ರವಾರದಿಂದಲೇ ಜಾರಿಗೆ ಬರುವಂತೆ ನೆಲಮಂಗಲ ದೇವಿಹಳ್ಳಿ ಎಕ್ಸ್‌ಪ್ರೆಸ್ ವೇ ಪ್ರೈವೇಟ್ ಲಿಮಿಟೆಡ್ ಟೋಲ್ ಶುಲ್ಕವನ್ನು ಏರಿಕೆ ಮಾಡಿದೆ. ಪರಿಷ್ಕೃತ ಶುಲ್ಕ ಸಂಗ್ರಹವನ್ನು ಶುಕ್ರವಾರ ಮಧ್ಯರಾತ್ರಿಯಿಂದಲೇ ಸಂಗ್ರಹ ಮಾಡಲಾಗುತ್ತಿದೆ.
ನೆಲಮಂಗಲ ದೇವಿಹಳ್ಳಿ ಎಕ್ಸ್‌ಪ್ರೆಸ್ ವೇ ಪ್ರೈವೇಟ್ ಲಿಮಿಟೆಡ್ ಪ್ರಕಟಣೆ ಮೂಲಕ ಈ ಮಾಹಿತಿ ನೀಡಿದೆ. ರಾಷ್ಟ್ರೀಯ ಹೆದ್ದಾರಿ-75 (ಹಳೇ ಸಂಖ್ಯೆ 48)ರ ನೆಲಮಂಗಲ- ದೇವಿಹಳ್ಳಿ ಸೆಕ್ಷನ್‌ನಲ್ಲಿ ಕಿಮೀ 28.200 ರಿಂದ 110.000 ವರೆಗಿನ ರಾಷ್ಟ್ರೀಯ ಹೆದ್ದಾರಿ ಬಳಕೆಯ ಶುಲ್ಕವನ್ನು ಏರಿಕೆ ಮಾಡಲಾಗಿದೆ ಎಂದು ಹೇಳಿದೆ. ಎನ್‌ಹೆಚ್‌ಎಐನ ದಿನಾಂಕ 14/8/2023ರಂದು ಈ ಶುಲ್ಕ ಪರಿಷ್ಕರಣೆಗೆ ಅನುಮೋದನೆಯನ್ನು ನೀಡಿದೆ. ಪರಿಷ್ಕರಿಸಲ್ಪ ಟೋಲ್ ಶುಲ್ಕಗಳು 1ನೇ ಸೆಪ್ಟೆಂಬರ್ 2023ರಿಂದ ಟೋಲ್ ಪ್ಲಾಜಾಗಳಲ್ಲಿ ಜಾರಿಯಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಹೊಸ ದರಗಳು ದೊಡ್ಡಕರೇನಹಳ್ಳಿ ಟೋಲ್, ಕಾರಬೈಲು ಟೋಲ್ ಪ್ಲಾಜಾದಲ್ಲಿ ಅನ್ವಯವಾಗುತ್ತವೆ. 1) ಸ್ಥಳೀಯ ಸಂಚಾರ (ಕಾರು/ ಜೀಪ್ /ವ್ಯಾನ್)ಗೆ ಮಾಸಿಕ ಪಾಸ್ ಶುಲ್ಕ ಪ್ಲಾಜಾದಿಂದ 10-20 ಕಿ. ಮೀ. ಸುತ್ತಳತೆಯಲ್ಲಿರುವ ವ್ಯಕ್ತಿಗಳಿಗೆ ರೂ. 150/ ರೂ. 300 ಇದ್ದು, ಸ್ಥಳೀಯ ಎಲ್‌ಸಿಎ/ ಟ್ರಕ್‌ಗಳಿಗಾಗಿ ರಿಯಾಯ್ತಿ ಶುಲ್ಕವು ಪ್ರತಿ ಪ್ರವೇಶಕ್ಕೆ ಕ್ರಮ ಬದ್ಧವಾಗಿ ರೂ. 15 / ರೂ. 25 ಇರುತ್ತದೆ. ಶಾಲಾ ವಿದ್ಯಾರ್ಥಿಗಳ ಶಾಲಾ ಬಸ್ ಗಳಿಗಾಗಿ ಮಾಸಿಕ ಶುಲ್ಕ ರೂ. 1,000 ಎಂದು ಹೇಳಿದೆ.
ನೂತನ ಟೋಲ್ ಶುಲ್ಕಗಳು ಹೀಗಿವೆ
* ಕಾರು/ ವ್ಯಾನ್/ ಜೀಪ್/ ಎಲ್‌ಎಂವಿ. ಒಂದು ಪ್ರಯಾಣದ ಶುಲ್ಕ 55 ರೂ., ಒಂದು ದಿನದಲ್ಲಿ ಅನೇಕ ಪ್ರಯಾಣಕ್ಕಾಗಿ 85 ರೂ. ಮತ್ತು ತಿಂಗಳಿನಲ್ಲಿ 60 ಸಿಂಗಲ್ ಪ್ರಯಾಣಗಳಿಗೆ ಮಾಸಿಕ ಪಾಸ್ ರೂ. 1720 ರೂ.ಗಳು.
* ಲಘು ವಾಣಿಜ್ಯ ವಾಹನ (ಎಲ್‌ಸಿವಿ). ಒಂದು ಪ್ರಯಾಣದ ಶುಲ್ಕ 100 ರೂ., ಒಂದು ದಿನದಲ್ಲಿ ಅನೇಕ ಪ್ರಯಾಣಕ್ಕಾಗಿ 150 ರೂ. ಮತ್ತು ತಿಂಗಳಿನಲ್ಲಿ 60 ಸಿಂಗಲ್ ಪ್ರಯಾಣಗಳಿಗೆ ಮಾಸಿಕ ಪಾಸ್ ರೂ. 3005 ಗಳು.
* ಟ್ರಕ್/ ಬಸ್. ಒಂದು ಪ್ರಯಾಣದ ಶುಲ್ಕ 200 ರೂ., ಒಂದು ದಿನದಲ್ಲಿ ಅನೇಕ ಪ್ರಯಾಣಕ್ಕಾಗಿ 300 ರೂ. ಮತ್ತು ತಿಂಗಳಿನಲ್ಲಿ 60 ಸಿಂಗಲ್ ಪ್ರಯಾಣಗಳಿಗೆ ಮಾಸಿಕ ಪಾಸ್ ರೂ. 6010 ಗಳು.
* ಮಲ್ಟಿ ಆಕ್ಸೆಲ್ ವೆಹಿಕಲ್ (2 ಆಕ್ಸೆಲ್), ಬೃಹತ್ ನಿರ್ಮಾಣ ಯಂತ್ರೋಪಕರಣ ಅಥವಾ ಅರ್ಥಮೂವಿಂಗ್ ಸಾಧನ. ಒಂದು ಪ್ರಯಾಣದ ಶುಲ್ಕ 320 ರೂ., ಒಂದು ದಿನದಲ್ಲಿ ಅನೇಕ ಪ್ರಯಾಣಕ್ಕಾಗಿ 485 ರೂ. ಮತ್ತು ತಿಂಗಳಿನಲ್ಲಿ 60 ಸಿಂಗಲ್ ಪ್ರಯಾಣಗಳಿಗೆ ಮಾಸಿಕ ಪಾಸ್ ರೂ. 9665 ಗಳು.
* ದಿನಾಂಕ 19/7/2019 ಮತ್ತು 29/11/2019ರಂದು ಭಾರತ ಸರ್ಕಾರ ಹೊರಡಿಸಿರುವ ನಿರ್ದೇಶನದ ಸುತ್ತೋಲೆಯ ಪ್ರಕಾರ ದಿನಾಂಕ 15/12/2019 ರಿಂದ ಎಲ್ಲಾ ಎನ್‌ಎಚ್‌ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯವಾಗಿದೆ ಮತ್ತು ದಿನಾಂಕ 15/5/2020ರ ಭಾರತ ಸರ್ಕಾರದ ಗೆಜೆಟ್ ಅಧಿಸೂಚನೆ ದಿನಾಂಕ 4/12/2020ರ ಎನ್ಎಚ್‌ಎಐ ಪತ್ರದ ಪ್ರಕಾರ ಫಾಸ್ಟ್ ಟ್ಯಾಗ್ ಇಲ್ಲದ ವಾಹನಗಳು ಮತ್ತು ಮಾನ್ಯವಿಲ್ಲದ ಅಥವಾ ಕಾರ್ಯರಹಿತ ಫಾಸ್ಟ್ ಟ್ಯಾಗ್ ಹೊಂದಿರುವ ವಾಹನಗಳು ಫಾಸ್ಟ್ ಟ್ಯಾಗ್ ಪಥದಲ್ಲಿ ಚಲಿಸಲು ಎರಡರಷ್ಟು ಟೋಲ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
* ಅನುಮತಿಸುವ ಲೋಡ್‌ಗಿಂತ ಹೆಚ್ಚು ಲೋಡ್ ಮಾಡಲಾದ ವಾಹನಗಳು, ಗರಿಷ್ಠ ಅನುಮತಿಸುವ GVW (ಒಟ್ಟು ವಾಹನದ ತೂಕ) ಗಿಂತ ಹೆಚ್ಚಿನ ಲೋಡ್ ಶೇಕಡಾವಾರು ಆಧಾರದ ಮೇಲೆ ಅನ್ವಯವಾಗುವ ಬಳಕೆದಾರ ಶುಲ್ಕದ 10 ಪಟ್ಟು ವರೆಗೆ ಪಾವತಿಸಲು ಜವಾಬ್ದಾರರಾಗಿರುತ್ತಾರೆ.












Click it and Unblock the Notifications