ಮೋದಿ ಆಗಮನದ ದಿನವೇ '#ನಮ್ಮ ಕರ್ನಾಟಕ ಫಸ್ಟ್' ಟ್ವಿಟ್ಟರಿನಲ್ಲಿ ಟ್ರೆಂಡಿಂಗ್
ಬೆಂಗಳೂರು, ಫೆಬ್ರವರಿ 4: ಬಿಜೆಪಿಯ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಿದ್ದಾರೆ. ಇದೇ ಸಂದರ್ಭದಲ್ಲಿ ಕರ್ನಾಟಕದ ಜನರು ಮತ್ತು ಕಾಂಗ್ರೆಸಿಗರು ಪ್ರಧಾನಿಗೆ ಪ್ರತ್ಯುತ್ತರ ನೀಡಿದ್ದಾರೆ.
'ನಮ್ಮ ಕರ್ನಾಟಕ ಫರ್ಸ್ಟ್' (#NammaKarnatakaFirst) ಹ್ಯಾಷ್ ಟ್ಯಾಗ್ ಬಳಸಿ ಕರ್ನಾಟಕದ ಸಾಧನೆಗಳನ್ನು ಟ್ವಿಟ್ಟರಿನಲ್ಲಿ ಕಾಂಗ್ರೆಸಿಗರು ಮತ್ತು ಜನರು ತೆರೆದಿಟ್ಟಿದ್ದಾರೆ. ಇದೀಗ ಈ ಹ್ಯಾಷ್ ಟ್ಯಾಗ್ ದೇಶದಲ್ಲೇ ಟ್ರೆಂಡ್ ಆಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷದ ಸಚಿವರೂ 'ನಮ್ಮ ಕರ್ನಾಟಕ ಫರ್ಸ್ಟ್' ಹ್ಯಾಷ್ ಟ್ಯಾಗ್ ಹಾಕಿ ಟ್ವೀಟ್ ಮಾಡಿದ್ದಾರೆ.

ಕರ್ನಾಟಕ ದೇಶದಲ್ಲೇ ಹೂಡಿಕೆ ಆಕರ್ಷಿಸುವಲ್ಲಿ ನಂಬರ್ 1 ಆಗಿದೆ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿಯೂ ಕರ್ನಾಟಕ ನಂಬರ್ 1 ಎಂದು ಕಾಂಗ್ರೆಸ್‌ನ ಸೋಷಿಯಲ್ ಮೀಡಿಯಾ ಹೆಡ್ ರಮ್ಯಾ, ರಾಜ್ಯದ ಐಟಿ ಬಿಟಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ, ಪೌರಾಡಳಿತ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಈಶ್ವರ್ ಖಂಡ್ರೆ, ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಕೋಆರ್ಡಿನೇಟರ್ ಹಸೀಬಾ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಹಲವರು ಟ್ವೀಟ್ ಮಾಡುತ್ತಿದ್ದಾರೆ.












Click it and Unblock the Notifications