Namma Metro: ಮೆಟ್ರೋದಲ್ಲಿ ಸಿಕ್ಕ ಚಿನ್ನದುಂಗುರವನ್ನು ವಾಪಾಸ್ ಕೊಟ್ಟ ಗೋಲ್ಡನ್ ಗರ್ಲ್ಸ್ ಗೆ ಬಾರೀ ಮೆಚ್ಚುಗೆ
ಬೆಂಗಳೂರು, ನವೆಂಬರ್ 29: ಇತ್ತೀಚಿನ ದಿನಗಳಲ್ಲಿ ನಮ್ಮ ಮೆಟ್ರೋ ಅಲ್ಲಿ ಓಡಾಟ ಮಾಡುವ ಜನರ ಸಂಖ್ಯೆ ಜಾಸ್ತಿ ಆಗ್ತಿದೆ. ನೂಕು ನುಗ್ಗಲು ಮಧ್ಯೆ ಮೆಟ್ರೋ ಒಳಗಡೆ ಹೋಗೋದೇ ಕಷ್ಟವಪ್ಪ ಅಂತ ಪ್ರಯಾಣಿಕರು ಆಗಾಗ ಕಿಡಿ ಕಾರುತ್ತಾ ಇರುತ್ತಾರೆ. ಈ ಮಧ್ಯೆ ಬ್ಯಾಂಕ್ ಎಂಪ್ಲಾಯಿ ಒಬ್ಬರು 30 ಸಾವಿರಕ್ಕೂ ಅಧಿಕ ಚಿನ್ನದ ಉಂಗುರವನ್ನು ಕಳೆದು ಕೊಂಡಿದ್ದಾರೆ..
ಸೋಮವಾರ ಹೊತ್ತಿಗೆ ಬ್ಯಾಂಕ್ ಉದ್ಯೋಗಿ ದಿವ್ಯಾ ಎನ್ನುವವರು ಬ್ಯಾಂಕ್ ಹೋಗುವ ಸಂದರ್ಭದಲ್ಲಿ ಚಿನ್ನದ ಉಂಗುರ ಕಳೆದು ಕೊಂಡಿರುವುದು ಆಕೆಗೆ ಗೊತ್ತಾಗುತ್ತೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಹೊಸಕೋಟೆ ಶಾಖೆಯಲ್ಲಿ ಅಸೋಸಿಯೇಟ್ ಆಗಿ ದಿವ್ಯಾ ಪ್ರಿಯದರ್ಶಿನಿ ಕೆಲಸ ಮಾಡುತ್ತಾ ಇರುತ್ತಾರೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೆಟ್ರೋ ನಿಲ್ದಾಣದಿಂದ ಬೆನ್ನಿಗಾನಹಳ್ಳಿ ನಿಲ್ದಾಣಕ್ಕೆ ಮೆಟ್ರೋದಲ್ಲಿ ಪ್ರಯಾಣಿಸಿ ಅಲ್ಲಿಂದ ತಮ್ಮ ಕಚೇರಿಗೆ ಬಸ್‌ನಲ್ಲಿ ಹೋಗಿದ್ದಾರೆ. ಈ ವೇಳೆ ಚಿನ್ನದ ಉಂಗುರ ದಿವ್ಯಾ ಕಳೆದು ಕೊಳ್ತಾರೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೆಟ್ರೋ ನಿಲ್ದಾಣದಿಂದ ಹೊರಡುವಾಗ ಉಂಗುರ ಮಿಸ್ ಆಗಿರೋದು ಆಕೆಗೆ ಗೊತ್ತಾಗಿದೆ, ಗೊತ್ತಾದ ತಕ್ಷಣ ಕೂಡಲೇ ಕಂಟ್ರೋಲರ್ ರೂಂಗೆ ದಿವ್ಯಾ ಮಾಹಿತಿ ಕೊಡ್ತಾರೆ. ಚಿನ್ನದ ಉಂಗುರ ಸಿಕ್ಕಿದ ತಕ್ಷಣ ಅದನ್ನ ಸಹಾಯಕ ಸುರಕ್ಷತಾ ಅಧಿಕಾರಿಗೆ ಹೋಮ್ ಗಾರ್ಡ್ಸ್ ಒಪ್ಪಿಸಿ ಇರುತ್ತಾರೆ.

ಸೋಮವಾರ ಸಂಜೆ 6.45ರ ಸುಮಾರಿಗೆ ಬೆನ್ನಿಗಾನಹಳ್ಳಿ ಮೆಟ್ರೊ ನಿಲ್ದಾಣದ 2ನೇ ಪ್ಲಾಟ್‌ಫಾರ್ಮ್‌ನಲ್ಲಿ ರೈಲು ನಿಂತಾಗ ರೈಲಿನ ಲೇಡಿಸ್ ಕೋಚ್ ಬಳಿ ಉಂಗುರ ಬಿದ್ದಿತ್ತು ಆ ಉಂಗುರವನ್ನು ಗಮನಿಸಿದ ಹೋಂಗಾರ್ಡ್‌ಗಳಾದ ಶಿಲ್ಪಾ ಜಿ ಆರ್ ಮತ್ತು ಈಶ್ವರಮ್ಮ ಅವರು ಬಿಎಂಆರ್‌ಸಿಎಲ್ ಸಹಾಯಕ ಸುರಕ್ಷತಾ ಅಧಿಕಾರಿ ಕೆಎನ್ ರಾಜಣ್ಣ ಅವರಿಗೆ ಅದನ್ನು ಹಸ್ತಾಂತರಿಸಿದ್ರು.
ಇದೀಗ ಆ ಉಂಗುರವನ್ನ ದಿವ್ಯಾರಿಗೆ ಹಸ್ತಾಂತರ ಮಾಡಲಾಗಿದ್ದುಹೋಮ್ ಗಾರ್ಡ್ಸ್ ಪ್ರಮಾಣಿಕತೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. 30 ಸಾವಿರಕ್ಕೂ ಅಧಿಕ ಬೆಲೆ ಬಾಳುವ ಗೋಲ್ಡ್ ರಿಂಗ್ ವಾಪಾಸ್ ಕೊಟ್ಟ ಗೋಲ್ಡನ್ ಗರ್ಲ್ಸ್ ಕೆಲಸಕ್ಕೆ ಬಾರೀ ಶ್ಲಾಘನೆ ವ್ಯಕ್ತವಾಗಿದೆ. ಒಟ್ಟಿನಲ್ಲಿ ಇತ್ತೀಚಿಗೆ ಒಂದಿಲ್ಲೊಂದು ವಿಚಾರದಲ್ಲಿ ಮೆಟ್ರೋ ಸುದ್ದಿಯಲ್ಲೇ ಇರುತ್ತಿದ್ದು ಸದ್ಯ ಮೆಟ್ರೋ ಸಿಬ್ಬಂದಿಯ ಪ್ರಾಮಾಣಿಕತೆಗೆ ಎಲ್ಲಾ ಕಡೆ ಹೊಗಳಿಕೆಯ ಮಹಾಪೂರ ಹರಿದು ಬರ್ತಿದೆ.












Click it and Unblock the Notifications