ಇಂದು ಯುವ ದಸರಾಗೆ ಪ್ರಭುದೇವ ಚಾಲನೆ: ವಾಸುಕಿ ವೈಭವ್, ಚಂದನ್ ಶೆಟ್ಟಿ ಶೋ ಯಾವಾಗ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಮಹೋತ್ಸವದ ಕಳೆಗಟ್ಟಿದ್ದು, ಯುವಜನತೆಯ ಅಚ್ಚು ಮೆಚ್ಚಿನ ಯುವ ದಸರಾ 2026 ಕಾರ್ಯಕ್ರಮಕ್ಕೆ ಇಂದಿನಿಂದ (ಅಕ್ಟೋಬರ್ 13) ಅದ್ದೂರಿ ಚಾಲನೆ ದೊರೆಯಲಿದೆ.

ಉತ್ತನಹಳ್ಳಿಯ ಜ್ವಾಲಾಮುಖಿ ತ್ರಿಪುರ ಸುಂದರಿ ದೇವಸ್ಥಾನದ ಸಮೀಪವಿರುವ ವಿಶಾಲ ಮೈದಾನದಲ್ಲಿ ಅಕ್ಟೋಬರ್ 17ರವರೆಗೆ ಐದು ದಿನಗಳ ಕಾಲ ಸತತ ಸಂಗೀತ, ನೃತ್ಯ ಹಾಗೂ ಮನರಂಜನೆಯ ಮಹಾಪೂರವೇ ಹರಿಯಲಿದೆ.

Mysuru Yuva Dasara 2026 Schedule Prabhu Deva to Inaugurate Today Complete Artist Lineup List

ಇಂದು ಸಂಜೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ನಟ, ನಿರ್ದೇಶಕ ಹಾಗೂ ನೃತ್ಯ ಸಂಯೋಜಕ ಇಂಡಿಯನ್ ಮೈಕಲ್ ಜಾಕ್ಸನ್ ಎಂದೇ ಖ್ಯಾತಿಯಾಗಿರುವ ಪ್ರಭುದೇವ ಅವರು ಯುವ ದಸರಾ ಕಾರ್ಯಕ್ರಮವನ್ನ ಉದ್ಘಾಟಿಸಲಿದ್ದಾರೆ. ಐದು ದಿನಗಳ ಈ ಸಂಗೀತ ಸಂಭ್ರಮದಲ್ಲಿ ಬಾಲಿವುಡ್, ಕಾಲಿವುಡ್ ಹಾಗೂ ಸ್ಯಾಂಡಲ್‌ವುಡ್‌ನ ಖ್ಯಾತ ಗಾಯಕರು, ಸಂಗೀತ ನಿರ್ದೇಶಕರು ಮತ್ತು ಸ್ಟಾರ್ ಕಲಾವಿದರು ಹೆಜ್ಜೆ ಹಾಕಲಿದ್ದಾರೆ.

ಯುವ ದಸರಾ 2026: ದಿನವಾರು ಕಾರ್ಯಕ್ರಮದ ವಿವರ ಇಲ್ಲಿದೆ

ಅಕ್ಟೋಬರ್ 13 (ಉದ್ಘಾಟನಾ ದಿನ): ಮ್ಯೂಸಿಕಲ್ ನೈಟ್

ಇಂದು ಸಂಜೆ ಪ್ರಭುದೇವ ಅವರಿಂದ ಉದ್ಘಾಟನೆಗೊಂಡ ಬಳಿಕ, ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ಮತ್ತು ತಂಡದಿಂದ ಸಂಗೀತ ರಸಸಂಜೆ ಮೂಡಿಬರಲಿದೆ. ಈ ತಂಡದಲ್ಲಿ ಖ್ಯಾತ ಗಾಯಕರಾದ ನಕಾಶ್ ಅಜೀಜ್, , ಸಾಯಿ ವಿಘ್ನೇಶ್, ಅನನ್ಯ ಭಟ್, ಮಂಗ್ಲಿ, ವಾಸುಕಿ ವೈಭವ್, ಜಸ್ಕರನ್ ಸಿಂಗ್ ಹಾಗೂ ಐಶ್ವರ್ಯ ರಂಗರಾಜನ್ ಅವರು ತಮ್ಮ ಗಾಯನದ ಮೂಲಕ ಯುವಕರನ್ನ ರಂಜಿಸಲಿದ್ದಾರೆ.

ಅಕ್ಟೋಬರ್ 14: ಶಂಕರ್-ಎಹ್ಸಾನ್-ಲಾಯ್ ಜಾದೂ

ಎರಡನೇ ದಿನದಂದು ಬಾಲಿವುಡ್‌ನ ಪ್ರಸಿದ್ಧ ಸಂಗೀತ ತ್ರಯರಾದ ಶಂಕರ್ ಮಹದೇವನ್, ಎಹ್ಸಾನ್ ನೂರಾನಿ ಮತ್ತು ಲಾಯ್ ಮೆಂಡೋನ್ಸಾ ಅವರು ವೇದಿಕೆ ಏರಲಿದ್ದಾರೆ. ತಮ್ಮ ಕಂಠಸಿರಿ ಹಾಗೂ ಅದ್ಭುತ ಸಂಗೀತ ಸಂಯೋಜನೆಯ ಮೂಲಕ ಮೈಸೂರಿನ ಜನತೆಯನ್ನ ಮಂತ್ರಮುಗ್ಧರನ್ನಾಗಿಸಲು ಈ ತಂಡ ಸಜ್ಜಾಗಿದೆ.

ಅಕ್ಟೋಬರ್ 15: ಸಿದ್ ಶ್ರೀರಾಮ್ ಲೈವ್ ಕನ್ಸರ್ಟ್

ಯುವಜನತೆಯ ನೆಚ್ಚಿನ ಗಾಯಕ, ಸಿದ್ ಶ್ರೀರಾಮ್ ಗುರುವಾರದ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದಾರೆ. ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸತತ ಹಿಟ್ ಹಾಡುಗಳನ್ನ ನೀಡಿರುವ ಇವರ ಲೈವ್ ಕನ್ಸರ್ಟ್ ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಯುವಕರು ಸೇರುವ ನಿರೀಕ್ಷೆಯಿದೆ.

ಅಕ್ಟೋಬರ್ 16: ಸ್ಯಾಂಡಲ್‌ವುಡ್ ನೈಟ್

ಶುಕ್ರವಾರದ ಸಂಜೆ ಸಂಪೂರ್ಣವಾಗಿ ಕನ್ನಡ ಚಿತ್ರರಂಗದ ಕಲಾವಿದರಿಗೆ ಮೀಸಲಾಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ವೇದಿಕೆಯಲ್ಲಿ ಹೆಜ್ಜೆ ಹಾಕಲಿದ್ದಾರೆ. ಜೊತೆಗೆ ಗಾಯಕರಾದ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ಚಂದನ್ ಶೆಟ್ಟಿ, ಆಲ್ ಓಕೆ ಮತ್ತು ಅನುರಾಧಾ ಭಟ್ ಅವರು ಕನ್ನಡದ ಹಿಟ್ ಹಾಡುಗಳ ಮೂಲಕ ರಂಜಿಸಲಿದ್ದಾರೆ.

ಅಕ್ಟೋಬರ್ 17: ಸಮಾರೋಪ ಸಮಾರಂಭ

ಐದು ದಿನಗಳ ಕಾಲ ನಡೆಯುವ ಈ ಸಂಗೀತ ಹಬ್ಬಕ್ಕೆ ಶನಿವಾರ ತೆರೆಬೀಳಲಿದ್ದು, ಅಂದು ಖ್ಯಾತ ಗಾಯಕಿ ಜಾಸ್ಮಿನ್ ಸ್ಯಾಂಡ್ಲಾಸ್ ಅವರು ಸಮಾರೋಪದ ಸಂಗೀತ ಸಂಜೆಯನ್ನ ನಡೆಸಿಕೊಡಲಿದ್ದಾರೆ.

ಒಟ್ಟಾರೆಯಾಗಿ, ಈ ಬಾರಿಯ ಮೈಸೂರು ಯುವ ದಸರಾ 2026 ಹಿಂದೆಂದಿಗಿಂತಲೂ ಹೆಚ್ಚು ಅದ್ದೂರಿಯಾಗಿ ಮೂಡಿಬರುತ್ತಿದ್ದು, ಕರುನಾಡಿನಾದ್ಯಂತ ಯುವಜನರು ಈ ಸಂಗೀತ ಮೇಳದಲ್ಲಿ ಪಾಲ್ಗೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+