ಮೈಸೂರು: ಖಾಸಗಿ ಆರೋಗ್ಯ ವಿಮಾ ಸಂಸ್ಥೆ ಆರೋಗ್ಯ ಶಿಬಿರಕ್ಕೆ ಸಂಸದ ಯದುವೀರ್ ಚಾಲನೆ: 950ಕ್ಕೂ ಹೆಚ್ಚು ಮಂದಿಗೆ ಸೌಲಭ್ಯ

ಮೈಸೂರು: ಮೈಸೂರಿನಲ್ಲಿ ಖಾಸಗಿ ಆರೋಗ್ಯ ವಿಮಾ ಸಂಸ್ಥೆಯು ಆಯೋಜಿಸಿದ್ದ ಮೂರು ದಿನಗಳ ಸಮುದಾಯ ಆರೋಗ್ಯ ಶಿಬಿರಕ್ಕೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ಅವರು ಚಾಲನೆ ನೀಡಿದ್ದರು. ಬುಧವಾರಕ್ಕೆ ಈ ಶಿಬಿರ ಯಶಸ್ವಿಯಾಗಿ ಮುಕ್ತಾಯಗೊಮಡಿದೆ. ಈ ಶಿಬಿರದಿಂದ 950ಕ್ಕೂ ಹೆಚ್ಚು ಜನರು ಮುನ್ನೆಚ್ಚರಿಕೆ ಆರೋಗ್ಯ ತಪಾಸಣೆ ಮತ್ತು ವೈದ್ಯಕೀಯ ಸಲಹೆಗಳ ಪ್ರಯೋಜನ ಪಡೆದುಕೊಂಡಿದ್ದಾರೆ.

ಶಿಬಿರಕ್ಕೆ ಅತ್ಯುತ್ತಮ ಸ್ಪಂದನೆ ದೊರೆತಿತ್ತು. ನಾರಾಯಣ ಹೆಲ್ತ್, ವಾಸನ್ ಐ ಕೇರ್ ಮತ್ತು ಅವಂತ್ ಬಿಕೆಜಿ ಆಸ್ಪತ್ರೆಯ ಸಹಯೋಗದೊಂದಿಗೆ ನಡೆದ ಶಿಬಿರದಲ್ಲಿ ಸಂಸದರು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ವೈದ್ಯಕೀಯ ಸೌಲಭ್ಯಗಳನ್ನು ವೀಕ್ಷಿಸಿದರು. ಜೊತೆಗೆ ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿದರು.

Mysuru Health Camp

ಈ ವೇಳೆ ಮಾತನಾಡಿದ ಸಂಸದರು, "ಭಾರತದಲ್ಲಿ ನಾವು ಯಾವಾಗಲೂ 'ರೋಗ ಬಂದು ಬಳಲುವುದಕ್ಕಿಂತ ಬಾರದಂತೆ ತಡೆಯುವುದೇ ಮೇಲು' (Prevention is better than cure) ಎಂಬ ತತ್ವವನ್ನು ಅನುಸರಿಸಿಕೊಂಡು ಬಂದಿದ್ದೇವೆ. ಈ ಖಾಸಗಿ ಆರೋಗ್ಯ ವಿಮಾನ ಸಂಸ್ಥೆ ಆಯೋಜಿಸಿದ ಈ ಕಾರ್ಯಕ್ರಮವು ಅದೇ ತತ್ವವನ್ನು ಆಧರಿಸಿದೆ. ಮೈಸೂರಿನಂತಹ ನಗರದಲ್ಲಿ ಇಂತಹ ಆರೋಗ್ಯ ಶಿಬಿರಗಳು ಸಾರ್ವಜನಿಕರಿಗೆ ಅಪಾರ ಪ್ರಯೋಜನವನ್ನು ನೀಡುತ್ತವೆ. ಈ ಸಂಸ್ಥೆಯು ಪ್ರತಿಯೊಬ್ಬ ವ್ಯಕ್ತಿಗೂ ಅಗತ್ಯವಿರುವ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ನಮಗೆ ಯಾವ ಸಮಯದಲ್ಲಿ ಎಂತಹ ಆರೋಗ್ಯ ಸಮಸ್ಯೆ ಎದುರಾಗುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಆದ್ದರಿಂದ ನಾಗರಿಕರು ಸೂಕ್ತ ಆರೋಗ್ಯ ವಿಮಾ ರಕ್ಷಣೆ ಹೊಂದುವುದು ಅತ್ಯಂತ ಮುಖ್ಯ ಎಂದು ಸಲಹೆ ನೀಡಿದರು.

ಆರೋಗ್ಯಕರ ಜೀವನ ನಡೆಸಿದರೆ ದೇಶದ ಪ್ರಗತಿ

ಆರೋಗ್ಯ ರಕ್ಷಣೆಯ ಪ್ರಾಮುಖ್ಯತೆ ಕುರಿತು ವಿವರಿಸಿದ ಯದುವೀರ್ ಅವರು, ಪ್ರತಿಯೊಬ್ಬ ನಾಗರಿಕನೂ ತನಗೆ ವಿಮೆ ಮಾಡಿಸಿಕೊಳ್ಳುವ ಮೂಲಕ ದೇಶದ ಬೆಳವಣಿಗೆಗೆ ಕೊಡುಗೆ ನೀಡಬೇಕು. ಸಂಕಷ್ಟದ ಸಮಯದಲ್ಲಿ ವಿಮೆಯು ಆಸರೆಯಾಗಿ ನಿಲ್ಲುತ್ತದೆ. ಈ ವ್ಯವಸ್ಥೆಯ ಪ್ರಾಮುಖ್ಯತೆಯನ್ನು ನಾವು ಗುರುತಿಸಬೇಕು. 'ವಿಕಸಿತ ಭಾರತ' ಎಂಬುದು ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಾಗಿದೆ. ಜನರು ಆರೋಗ್ಯಕರ ಜೀವನವನ್ನು ನಡೆಸಿದರೆ ಮಾತ್ರ ಇದನ್ನು ಸಾಧಿಸಲು ಸಾಧ್ಯ. ನಾಗರಿಕರು ಬಲವಾದ ಆರ್ಥಿಕ ಭದ್ರತೆಯೊಂದಿಗೆ ಉತ್ತಮ ಆರೋಗ್ಯವನ್ನು ಹೊಂದಿರಬೇಕೆಂಬುದು ನಮ್ಮ ಆಶಯ. ಭವಿಷ್ಯದಲ್ಲಿ ಇಂತಹ ಇನ್ನೂ ಅನೇಕ ಕಾರ್ಯಕ್ರಮಗಳು ನಡೆಯಬೇಕೆಂದು ಅವರು ಆಶಿಸಿದರು.

331 ಜನರಿಗೆ ಹೆಚ್ಚಿನ ತಪಾಸಣೆಗೆ ಶಿಫಾರಸು

ಮೂರು ದಿನಗಳ ಶಿಬಿರದಲ್ಲಿ ತಪಾಸಣೆಗೊಳಪಟ್ಟ ಶೇ.34 ರಷ್ಟು ಅಂದರೆ 331 ಜನರಿಗೆ ಹೆಚ್ಚಿನ ವೈದ್ಯಕೀಯ ಚಿಕಿತ್ಸೆ/ತಪಾಸಣೆಯ ಅಗತ್ಯವಿದೆ ಎಂದು ಸಲಹೆ ನೀಡಲಾಯಿತು. ಇದು ರೋಗ ತಡೆಗಟ್ಟುವಿಕೆ ಮತ್ತು ಆರಂಭಿಕ ಹಂತದಲ್ಲೇ ಕಾಯಿಲೆ ಪತ್ತೆಹಚ್ಚುವಿಕೆಯ ಪ್ರಾಮುಖ್ಯತೆಯನ್ನು ಎತ್ತಿಹಿಡಿಯುತ್ತದೆ.

ಶಿಬಿರದಲ್ಲಿ ಏನೆಲ್ಲ ತಪಾಸಣೆ...?

ಇನ್ನೂ ತಪಾಸಣೆಯ ಪ್ರಮುಖ ಅಂಶಗಳನ್ನು ನೋಡುವುದಾದರೆ 41 ಜನರನ್ನು ಪರೀಕ್ಷಿಸಿ ಕಣ್ಣಿನ ಪೊರೆಗೆ ಸಂಬಂಧಿಸಿದ ಚಿಕಿತ್ಸೆಯ ಅಗತ್ಯವಿದೆ ಎಂದು ಗುರುತಿಸಲಾಯಿತು. 49 ಜನರಿಗೆ ಹೃದಯಸಂಬಂಧಿ ತಪಾಸಣೆಗೆ ಶಿಫಾರಸು ಮಾಡಲಾಯಿತು. ಅಲ್ಲದೆ 45 ವರ್ಷಕ್ಕಿಂತ ಮೇಲ್ಪಟ್ಟ ಗಮನಾರ್ಹ ಸಂಖ್ಯೆಯ ಮಹಿಳೆಯರಲ್ಲಿ ಮೂಳೆ ಸಾಂದ್ರತೆಗೆ (Bone density) ಸಂಬಂಧಿಸಿದ ಸಮಸ್ಯೆಗಳು ಕಂಡು ಬಂದವು.

ಆರೋಗ್ಯ ಸಮಸ್ಯೆಗಳು ಕಂಡು ಬಂದ ವ್ಯಕ್ತಿಗಳಿಗೆ ವೈದ್ಯಕೀಯ ಸಲಹೆ ಹಾಗೂ ಮುಂದಿನ ಸೂಕ್ತ ಚಿಕಿತ್ಸೆಯ ಕುರಿತು ಮಾರ್ಗದರ್ಶನ ನೀಡಲಾಯಿತು. ಈ ಶಿಬಿರವು ಒಂದೇ ಸೂರಿನಡಿ ವಿವಿಧ ತಪಾಸಣೆ ಮತ್ತು ತಜ್ಞ ವೈದ್ಯರ ಸಲಹೆಗಳನ್ನು ಪಡೆಯಲು ಮೈಸೂರಿನ ನಿವಾಸಿಗಳಿಗೆ ಅವಕಾಶ ಮಾಡಿಕೊಟ್ಟಿತು.

ಖಾಸಗಿ ಆರೋಗ್ಯ ವಿಮಾನ ಸಂಸ್ತೆ (ಸ್ಟಾರ್ ಹೆಲ್ತ್ ಅಂಡ್ ಅಲೈಡ್ ಇನ್ಶೂರೆನ್ಸ್) ಕರ್ನಾಟಕದ ಬಿಸಿನೆಸ್ ಹೆಡ್ ಆದಿತ್ಯ ಓಂಪ್ರಕಾಶ್ ಬಿಯಾನಿ ಮಾತನಾಡಿ, "ಆರೋಗ್ಯಕರ ಮೈಸೂರು, ಆರೋಗ್ಯಕರ ಕರ್ನಾಟಕ ಮತ್ತು ಆರೋಗ್ಯಕರ ರಾಷ್ಟ್ರವನ್ನು ನಿರ್ಮಿಸುವ ನಮ್ಮ ಪ್ರಯತ್ನಕ್ಕೆ ಬೆಂಬಲ ನೀಡಿದ ಯದುವೀರ್ ಒಡೆಯರ್ ಅವರಿಗೆ ನಾವು ಕೃತಜ್ಞರಾಗಿದ್ದೇವೆ. ಸ್ಟಾರ್ ಹೆಲ್ತ್‌ನಲ್ಲಿ, ರೋಗ ತಡೆಗಟ್ಟುವಿಕೆ, ಆರಂಭಿಕ ಹಂತದಲ್ಲೇ ಕಾಯಿಲೆ ಪತ್ತೆಹಚ್ಚುವಿಕೆ ಮತ್ತು ಸೂಕ್ತ ಚಿಕಿತ್ಸೆಯನ್ನು ಉತ್ತೇಜಿಸುವ ಮೂಲಕ ವಿಮೆಯನ್ನು ಮೀರಿದ ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನು ನಿರ್ಮಿಸುವುದು ನಮ್ಮ ಗುರಿ ಎಂದು ತಿಳಿಸಿದರು.

ದೇಶದ ಬೆಳವಣಿಗೆಗೆ ಆರೋಗ್ಯಕರ ಸಮಾಜವೇ ತಳಹದಿ ಎಂಬ ಸರ್ಕಾರದ 'ವಿಕಸಿತ ಭಾರತ'ದ ಕನಸಿಗೆ ನಾವೂ ಬದ್ಧರಾಗಿದ್ದೇವೆ. ಮೈಸೂರಿನ ಜನರಿಂದ ದೊರೆತ ಸ್ಪಂದನೆ ಅತ್ಯಂತ ಪ್ರೋತ್ಸಾಹದಾಯಕವಾಗಿದೆ ಮತ್ತು ಶಿಬಿರದಲ್ಲಿ ಪತ್ತೆಯಾದ ಆರೋಗ್ಯ ಸಮಸ್ಯೆಗಳು ನಿಯಮಿತ ತಪಾಸಣೆ ಹಾಗೂ ಸಕಾಲಿಕ ವೈದ್ಯಕೀಯ ಚಿಕಿತ್ಸೆ ಪಡೆಯುವಂತೆ ಅವರು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+