ಫೆ 23-24: ಮೈಸೂರಿನಲ್ಲಿ ಸಾಮೂಹಿಕ ಉದ್ಯೋಗ ಮೇಳ

ಸ್ಥಳ ಎಲ್ಲಿ?: ನಗರದ ಮಹಾರಾಜ ಕಾಲೇಜು ಮೈದಾನ.
ಕಂಪನಿಗಳು ಎಷ್ಟು?: 200ಕ್ಕೂ ಹೆಚ್ಚು ಖಾಸಗಿ ಕಂಪನಿಗಳು.
ಎಷ್ಟು ಮಂದಿಗೆ ಉದ್ಯೋಗಾವಕಾಶ?: 12,000 ಕ್ಕೂ ಹೆಚ್ಚು ಮಂದಿಗೆ ಉದ್ಯೋಗಾವಕಾಶ.
ಎಲ್ಲ ಜಿಲ್ಲೆಗಳವರೂ ಭಾಗವಹಿಸಬಹುದಾ?: ರಾಜ್ಯದ ಎಲ್ಲ ಜಿಲ್ಲೆಗಳ ಉದ್ಯೋಗಾರ್ಥಿಗಳು ಈ ಮೇಳದ ಪ್ರಯೋಜನ ಪಡೆಯಬಹುದು.
ಉದ್ಯೋಗಾರ್ಹತೆ ಏನು?: ಎಸ್ಎಸ್ಎಲ್ ಸಿ, ಪಿಯುಸಿ ಸೇರಿದಂತೆ ನಾನಾ ಪದವಿ, ತಾಂತ್ರಿಕ ಶಿಕ್ಷಣ ಪಡೆದವರು ತಮ್ಮ ಅದೃಷ್ಟ ಪರೀಕ್ಷಿಸಬಹುದು.
ಸರಕಾರದ ಪಾತ್ರವೇನು?: ದಕ್ಷ ಜಿಲ್ಲಾಧಿಕಾರಿ ಸಿ ಶಿಖಾ ನೇತೃತ್ವದಲ್ಲಿ 2000 ಅಧಿಕಾರಿಗಳು ಮತ್ತು ಸಿಬ್ಬಂದಿ ನೆರವಿನೊಂದಿಗೆ 22 ಸಮಿತಿಗಳು ಮೇಳದ ಉಸ್ತುವಾರಿ ವಹಿಸಿವೆ. ಜನ ಸ್ಪಂದನಾ ಟ್ರಸ್ಟ್ ಸಾಥ್ ನೀಡಲಿದೆ. (ಒನ್ಇಂಡಿಯಾದಿಂದ ಉದ್ಯೋಗ ಹುಡುಕಾಟ ಸೇವೆ)
ಕಂಪನಿಗಳು ಯಾವುವು? : ಬಿಎಂ, ವಿಪ್ರೋ, ಇನ್ಫೋಸಿಸ್, ನಿಯೋನ್ ಐಟಿ, ಕಿರ್ಲೋಸ್ಕರ್, ಹಿಂದೂಜಾ, ಗ್ಲೋಬಲ್ ಸಲ್ಯೂಷನ್ಸ್, ಜೆಕೆ ಟೈರ್, ರಿಲಯನ್ಸ್, ಬಿಗ್ ಬಜಾರ್ ಸೇರಿದಂತೆ ರಾಷ್ಟ್ರಮಟ್ಟದ ಕಂಪನಿಗಳು.
ಬೆಂಗಳೂರಿನ ಹೈಟೆಕ್ ಮಹೀಂದ್ರಾ ಕಂಪನಿಯಲ್ಲಿ 2000 ಹುದ್ದೆ, 108 ಆಂಬ್ಯುಲೆನ್ಸ್ ಬೆಂಗಳೂರು, ವಿಕ್ರಂ ಆಸ್ಪತ್ರೆಯಿಂದ 400ಕ್ಕೂ ಹೆಚ್ಚು ನರ್ಸಿಂಗ್ ಹುದ್ದೆ, ಜಿ4ಎಸ್ ಸೆಕ್ಯೂರಿಟಿ ಸಂಸ್ಥೆಯಲ್ಲಿ 1,000ಕ್ಕೂ ಹೆಚ್ಚು ಹುದ್ದೆ, ಶಾಹಿ ಎಕ್ಸ್ ಪೋರ್ಟ್ಸ್ ಸೇರಿದಂತೆ ಇತರೆ ರಫ್ತು ಕಂಪನಿಗಳಿಗೆ 3 ಸಾವಿರಕ್ಕೂ ಹೆಚ್ಚು ಮಂದಿ ಬೇಕಾಗಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ನೇಮಕಾತಿ ಪತ್ರ: ಫೆ. 23 ರಂದು ಬೆಳಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ವಿ ಶ್ರೀನಿವಾಸ ಪ್ರಸಾದ್ ಅವರು ಮೇಳವನ್ನು ಉದ್ಘಾಟಿಸಲಿದ್ದಾರೆ. ಫೆ. 24ರಂದು ಸಮಾರೋಪದ ವೇಳೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಶಸ್ವಿಯಾದ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಲಿದ್ದಾರೆ.
ಮೂಲ ದಾಖಲೆಗಳನ್ನು ತಪ್ಪದೆ ತನ್ನಿ: ಒಬ್ಬ ಅಭ್ಯರ್ಥಿ ಕನಿಷ್ಠ 10 ಕಂಪನಿಗಳ ನೇಮಕ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಮಯಾವಕಾಶ ಇರುತ್ತದೆ. ಹಾಗಾಗಿ ಮೂಲ ದಾಖಲಾತಿಗಳ ಕನಿಷ್ಠ 10 ಪ್ರತಿಗಳೊಂದಿಗೆ ಉದ್ಯೋಗಾರ್ಥಿಗಳು ಸಿದ್ಧವಾಗಿ ಬರಬೇಕು. ನಮ್ಮ ಕಡೆಯಿಂದ, ನಿಮಗೊಂದು ಹೃತ್ಪೂರ್ವಕ All the Best!












Click it and Unblock the Notifications