ಮೈಸೂರು ದಸರಾ 2019; ಟೂರ್ ಪ್ಯಾಕೇಜ್ ಘೋಷಿಸಿದ ಕೆಎಸ್ಆರ್‌ಟಿಸಿ

ಬೆಂಗಳೂರು, ಸೆಪ್ಟೆಂಬರ್ 19 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮೈಸೂರು ದಸರಾ ಪ್ರಯುಕ್ತ ವಿಶೇಷ ಟೂರ್ ಪ್ಯಾಕೇಜ್‌ ಘೋಷಣೆ ಮಾಡಿದೆ. ಸೆಪ್ಟೆಂಬರ್ 29ರಿಂದ ಅಕ್ಟೋಬರ್ 13ರ ತನಕ ಈ ಪ್ಯಾಕೇಜ್‌ನಲ್ಲಿ ಜನರು ಪ್ರವಾಸವನ್ನು ಕೈಗೊಳ್ಳಬಹುದಾಗಿದೆ.

2019ನೇ ಸಾಲಿನ ಮೈಸೂರು ದಸರಾ ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 8ರ ಆಚರಣೆ ಮಾಡಲಾಗುತ್ತದೆ. ಮೈಸೂರು ದಸರಾ ವೀಕ್ಷಣೆಗೆ ಬರುವ ಜನರು ಮೈಸೂರು ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಲು ಅನುಕೂಲವಾಗುವಂತೆ ಪ್ರವಾಸಿ ಪ್ಯಾಕೇಜ್‌ ಘೋಷಣೆ ಮಾಡಲಾಗಿದೆ.

ಕೆಎಸ್ಆರ್‌ಟಿಸಿಯ ವೇಗದೂತ, ರಾಜಹಂಸ, ಐರಾವತ, ಐರಾವತ ಕ್ಲಬ್ ಕ್ಲಾಸ್ ಬಸ್‌ಗಳ ಮೂಲಕ ಈ ಪ್ರವಾಸವನ್ನು ಕೈಗೊಳ್ಳಬಹುದು. ಒಂದು ದಿನದ ವಿಶೇಷ ಪ್ರವಾಸಿ ಪ್ಯಾಕೇಜ್ ಇದಾಗಿದ್ದು, ವಿವಿಧ ದರಗಳನ್ನು ನಿಗದಿ ಮಾಡಲಾಗಿದೆ.

ದಸರಾ ವಿಶೇಷ ಪ್ಯಾಕೇಜ್‌ಗೆ ಕೆಎಸ್ಆರ್‌ಟಿಸಿ ಗಿರಿ ದರ್ಶಿನಿ, ಜಲ ದರ್ಶಿನಿ, ದೇವ ದರ್ಶಿನಿ ಮುಂತಾದ ಹೆಸರುಗಳನ್ನು ಇಡಲಾಗಿದೆ. ಪ್ರತಿ ವರ್ಷವೂ ದಸರಾ ಸಂದರ್ಭದಲ್ಲಿ ಕೆಎಸ್ಆರ್‌ಟಿಸಿ ಪ್ರವಾಸಿಗರನ್ನು ಸೆಳೆಯಲು ವಿಶೇಷ ಟೂರ್ ಪ್ಯಾಕೇಜ್ ಘೋಷಣೆ ಮಾಡುತ್ತದೆ.

ಗಿರಿ ದರ್ಶಿನಿ ಪ್ಯಾಕೇಜ್ ವಿವರಗಳು

ಗಿರಿ ದರ್ಶಿನಿ ಪ್ಯಾಕೇಜ್ ವಿವರಗಳು

'ಗಿರಿ ದರ್ಶಿನಿ' ಪ್ಯಾಕೇಜ್‌ನಲ್ಲಿ ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ನಂಜನಗೂಡು, ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಬಹುದು. ವಯಸ್ಕರಿಗೆ 350 ರೂ. ಮತ್ತು ಮಕ್ಕಳಿಗೆ 175 ರೂ. ದರವನ್ನು ನಿಗದಿ ಮಾಡಲಾಗಿದೆ.

ಜಲ ದರ್ಶಿನಿ ಪ್ಯಾಕೇಜ್ ವಿವರ

ಜಲ ದರ್ಶಿನಿ ಪ್ಯಾಕೇಜ್ ವಿವರ

'ಜಲ ದರ್ಶಿನಿ' ಪ್ಯಾಕೇಜ್‌ನಲ್ಲಿ ಬೈಲುಕುಪ್ಪೆ ಗೋಲ್ಡನ್ ಟೆಂಪಲ್, ದುಬಾರೆ ಅರಣ್ಯ ನಿಸರ್ಗಧಾಮ, ರಾಜಾಸೀಟ್, ಹಾರಂಗಿ ಜಲಾಶಯ ಮತ್ತು ಕೆ. ಆರ್. ಎಸ್‌ ಗೆ ಭೇಟಿ ನೀಡಬಹುದಾಗಿದೆ. ವಯಸ್ಕರಿಗೆ 375, ಮಕ್ಕಳಿಗೆ 190 ರೂ. ದರವನ್ನು ನಿಗದಿಪಡಿಸಲಾಗಿದೆ.

ದೇವ ದರ್ಶಿನಿ ಪ್ಯಾಕೇಜ್

ದೇವ ದರ್ಶಿನಿ ಪ್ಯಾಕೇಜ್

'ದೇವ ದರ್ಶಿನಿ' ಪ್ಯಾಕೇಜ್ ಅಡಿ ನಂಜನಗೂಡು, ಬ್ಲಫ್, ಮುಡುಕುತೊರೆ, ತಲಕಾಡು, ಸೋಮನಾಥಪುರ ಹಾಗೂ ಶ್ರೀರಂಗಪಟ್ಟಣಕ್ಕೆ ಭೇಟಿ ನೀಡಬಹುದಾಗಿದೆ. ವಯಸ್ಕರಿಗೆ 275 ರೂ. ಮತ್ತು ಮಕ್ಕಳಿಗೆ 140 ರೂ. ದರವನ್ನು ನಿಗದಿ ಮಾಡಲಾಗಿದೆ.

ಬಂಡೀಪುರ ಪ್ಯಾಕೇಜ್ ವಿವರ

ಬಂಡೀಪುರ ಪ್ಯಾಕೇಜ್ ವಿವರ

'ಬಂಡೀಪುರ ಪ್ಯಾಕೇಜ್‌ ಅಡಿ ಸೋಮನಾಥಪುರ, ತಲಕಾಡು, ಗೋಪಾಲಸ್ವಾಮಿ ಬೆಟ್ಟ, ಬಂಡೀಪುರ ಹಾಗೂ ನಂಜನಗೂಡು ಒಳಗೊಂಡಿದೆ. ವಯಸ್ಕರಿಗೆ 1000 ಹಾಗೂ ಮಕ್ಕಳಿಗೆ 750 ರೂ. ದರವನ್ನು ನಿಗದಿ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+