ನನ್ನ ಭವಿಷ್ಯ ಮತ್ತೆ ನಿಜವಾಯಿತು ನೋಡಿ: ಕೋಡಿಮಠದ ಶ್ರೀ

Posted By:
Subscribe to Oneindia Kannada

ರಾಣೆಬೆನ್ನೂರು, ಸೆ 28: ಎರಡು ತಿಂಗಳ ಹಿಂದೆ ಗದಗದಲ್ಲಿ ನಾನು ನುಡಿದಿದ್ದ ಭವಿಷ್ಯ ನಿಜವಾಯಿತು ಎಂದು ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ. ಶಿವನಾಂದ ಶಿವಯೋಗಿ ರಾಜೇಂದ್ರ ಶ್ರೀಗಳು ನುಡಿದಿದ್ದಾರೆ.

ನಗರದಲ್ಲಿ ಮಾತನಾಡುತ್ತಿದ್ದ ಕೋಡಿಶ್ರೀಗಳು, ಅಧಿಕಾರಿಗಳ ತಪ್ಪಿಂದ ಕಾರ್ಯಾಂಗ ವ್ಯವಸ್ಥೆ ಹದೆಗೆಡಲಿದೆ ಎಂದು ನುಡಿದಿದ್ದೆ ಅದರಂತೆ, ರಾಜ್ಯ ಈಗ ಗಂಭೀರ ಕಾವೇರಿ ಸಮಸ್ಯೆ ಎದುರಿಸುತ್ತಿದೆ ಎಂದು ಶ್ರೀಗಳು ಹೇಳಿದ್ದಾರೆ.
(ಇನ್ನೆರಡು ತಿಂಗಳಲ್ಲಿ ವ್ಯವಸ್ಥೆ ಹದೆಗೆಡಲಿದೆ)

ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರಯತ್ನಗಳೂ ನಡೆಯುತ್ತಲೇ ಇರುತ್ತದೆ, ಆದರೆ ಈ ಯಾವ ಪ್ರಯತ್ನಕ್ಕೂ ಫಲ ಸಿಗದು ಎಂದು ನುಡಿದಿದ್ದೆ . ಕಾವೇರಿ ವಿಚಾರದಲ್ಲಿ ಮುಖ್ಯಮಂತ್ರಿ ಗಟ್ಟಿ ನಿರ್ಧಾರ ತೆಗೆದುಕೊಂಡರೂ ನ್ಯಾಯಾಂಗ ವ್ಯವಸ್ಥೆಯಿಂದ ತೊಂದರೆಯಾಗಬಹುದು.

ದುರ್ಮುಖಿ ನಾಮ ಸಂವತ್ಸರದಲ್ಲಿ ವಾತಾವರಣದಲ್ಲಿ ಏರುಪೇರು ಸಂಭವಿಸುವ ಸಾಧ್ಯತೆ ಹೆಚ್ಚಾದರೂ ರೈತರಿಗೆ ಒಳ್ಳೆಯ ದಿನಗಳು ಬರಲಿದೆ ಎಂದು ಕೋಡಿಶ್ರೀಗಳು ಹೇಳಿದ್ದಾರೆ.

ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಡುವಿನ ಸಂಬಂಧ ಹದೆಗೆಡಲಿದ್ದು, ಇದರಿಂದ ಜನಪ್ರತಿನಿಧಿಗಳು ಸಾರ್ವಜನಿಕರ ವಿಶ್ವಾಸಗಳಿಸುವಲ್ಲಿ ವಿಫಲರಾಗಲಿದ್ದಾರೆಂದು ಕೋಡಿಶ್ರೀಗಳು ಗದಗದಲ್ಲಿ ಎರಡು ತಿಂಗಳ ಹಿಂದೆ ಹೇಳಿದ್ದರು. ಸಿಎಂ ಕಣ್ಣೀರು (ಸಿದ್ದು ವಿರೋಧಿಗಳಿಗೆ ಮುಂದೆಯೂ ಆಷಾಢ)

ಕೋಡಿಮಠದ ಶ್ರೀಗಳ ಭವಿಷ್ಯ

ಕೋಡಿಮಠದ ಶ್ರೀಗಳ ಭವಿಷ್ಯ

ಎರಡು ತಿಂಗಳ ಹಿಂದೆ ರಾಜ್ಯಕ್ಕೆ ಸಂಕಷ್ಟ ಎದುರಾಗಲಿದೆ ಎಂದು ಹೇಳಿದ್ದೆ. ಅದರಂತೆ, ಕಾವೇರಿ ವಿಚಾರದಲ್ಲಿ ಸುಪ್ರೀಂಕೋರ್ಟ್ ತೀರ್ಪಿನಿಂದಾಗಿ ಕಾರ್ಯಾಂಗ ಕಳವಳಗೊಂಡಿದೆ.

ದುರ್ಮುಖಿ ನಾಮ ಸಂವತ್ಸರ

ದುರ್ಮುಖಿ ನಾಮ ಸಂವತ್ಸರ

ದುರ್ಮುಖಿ ನಾಮ ಸಂವತ್ಸರದಲ್ಲಿ ವಾತಾವರಣದಲ್ಲಿ ಏರುಪೇರು ಸಂಭವಿಸುವ ಸಾಧ್ಯತೆ ಹೆಚ್ಚು. ಬೆಂಕಿ, ಗಾಳಿಯಿಂದ ಅವಘಡ ಸಂಭವಿಸಬಹುದಾದರೂ, ಜನರಿಗೆ ತೊಂದರೆಯಾಗುವುದಿಲ್ಲ. ಇದರ ಜೊತೆಗೆ ರೈತರಿಗೆ ಒಳ್ಳೆಯ ದಿನಗಳು ಬರಲಿದೆ - ಕೋಡಿಶ್ರೀ

ಮಗನ ಸಾವು

ಮಗನ ಸಾವು

ರಾಜ್ಯದ ದೊರೆ ಕಣ್ಣೀರಿಡಲಿದ್ದಾರೆಂದು ನುಡಿದಿದ್ದೆ, ಅದರಂತೇ ಮುಖ್ಯಮಂತ್ರಿಗಳು ಪುತ್ರನನ್ನು ಕಳೆದುಕೊಂಡು ಕಣ್ಣೀರು ಹಾಕುವಂತಾಯಿತು ಎಂದು ಕೋಡಿಶ್ರೀಗಳು ಅಂದು ತಾನು ನುಡಿದಿದ್ದ ಭವಿಷ್ಯದ ವಿವರಣೆಯನ್ನು ಈಗ ನೀಡಿದ್ದಾರೆ.

ಕೈಕೊಟ್ಟ ಮುಂಗಾರು

ಕೈಕೊಟ್ಟ ಮುಂಗಾರು

ರಾಜ್ಯದ ಬಹುತೇಕ ಕಡೆ ಮುಂಗಾರು ಕೈಕೊಟ್ಟಿದೆ. ನಾಡಿನಲ್ಲಿ ಮುಂಗಾರು ವೈಫಲ್ಯಗೊಂಡಿದ್ದರೂ, ಹಿಂಗಾರು ಉತ್ತಮವಾಗಲಿದೆ. ರೈತಾಪಿ ವರ್ಗ ಆತಂಕ ಪಡಬೇಕಾಗಿಲ್ಲ ಎಂದು ಕೋಡಿಮಠದ ಶ್ರೀಗಳು ನುಡಿದಿದ್ದ ಭವಿಷ್ಯ ಏನಾಗುತ್ತದೆ ಎಂದು ಕಾದು ನೋಡಬೇಕು.

ಹಾಲುಮತಸ್ಥ ಸಮುದಾಯ

ಹಾಲುಮತಸ್ಥ ಸಮುದಾಯ

ಸಿದ್ದರಾಮಯ್ಯನವರಿಗೆ ಹಲವಾರು ತೊಂದರೆ ಎದುರಾಗಲಿದೆ. ಆದರೆ, ಹಾಲುಮತಸ್ಥ ಸಮುದಾಯಕ್ಕೆ ಭಗವಂತನ ಕೃಪೆಯಿರುವುದರಿಂದ ಎದುರಾಗುವ ಎಲ್ಲಾ ಸಮಸ್ಯೆಯಿಂದ ಸಿಎಂ ಹೊರಬರಲಿದ್ದಾರೆಂದು ಜುಲೈ ತಿಂಗಳಲ್ಲಿ, ಬಾಗಲಕೋಟೆಯಲ್ಲಿ ಕೋಡಿಶ್ರೀಗಳು ಭವಿಷ್ಯ ನುಡಿದಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
My prediction on Chief Minister Siddaramaiah has to face tough time and State administration failure on Cauvery issue becomes true, Kodimath Seer in Ranebennuru.
Please Wait while comments are loading...