ಹಿಂದೂ ಮಗಳ ಮದುವೆಯನ್ನು ದೇವಸ್ಥಾನದಲ್ಲಿ ಮಾಡಿದ ಮುಸ್ಲಿಂ ದಂಪತಿ

ಕಾಸರಗೋಡು, ಫೆಬ್ರವರಿ 18: ಕೆಲವು ರಾಜಕೀಯ ಶಕ್ತಿಗಳು ಭಾರತವನ್ನು ಹಿಂದೂ-ಮುಸ್ಲಿಂ ಎಂದು ಭಾಗ ಮಾಡಲು ಪ್ರಯತ್ನ ಮಾಡುತ್ತಿರುವಾಗಲೇ ಭಾರತದ ಅಂತಃಶಕ್ತಿಯಾದ ಮಾನವೀಯತೆ ಮೇಲೆದ್ದು ಧರ್ಮಾಂಧತೆಯನ್ನು ಹಿಮ್ಮೆಟ್ಟಿಸುವ ಯತ್ನ ಮಾಡುತ್ತಿದೆ.

ಭಾರತದ ಧರ್ಮಾತೀತೆಗೆ, ಮಾನವೀಯತೆಗೆ, ಎಲ್ಲವುಗಳನ್ನೂ ಮೀರಿದ ಮಾನವೀಯತೆಗೆ ಉದಾಹರಣೆಯಾಗಿ ಕಾಸರಗೋಡಿನಲ್ಲಿ ಘಟನೆಯೊಂದು ನಡೆದಿದೆ. ತಮ್ಮ ಹಿಂದೂ ಮಗಳ ಮದುವೆಯನ್ನು ದೇವಸ್ಥಾನದಲ್ಲಿ ನೆರವೇರಿಸಿದ್ದಾರೆ ಮುಸ್ಲಿಂ ದಂಪತಿ.

ಹೌದು, ಅಬ್ದುಲ್ಲಾ ಮತ್ತು ಖಾಜಿಯಾ ದಂಪತಿ ತಮ್ಮ ಮಗಳಾದ ರಾಜೇಶ್ವರಿ ಯ ಮದುವೆಯನ್ನು ಫೆಬ್ರವರಿ 16 ರಂದು ಕಾಸಗೋಡಿನ ಸಮೀಪದ ಭಗವತಿ ದೇವಸ್ಥಾನದಲ್ಲಿ ಮಾಡಿದ್ದಾರೆ.

ಸಣ್ಣವಳಿದ್ದಾಗಲೇ ದತ್ತು ಪಡೆದಿದ್ದ ಅಬ್ದುಲ್ಲಾ ದಂಪತಿ

ಸಣ್ಣವಳಿದ್ದಾಗಲೇ ದತ್ತು ಪಡೆದಿದ್ದ ಅಬ್ದುಲ್ಲಾ ದಂಪತಿ

ಅಬ್ದುಲ್ಲಾ ಮತ್ತು ಖಾಜಿಯಾ ದಂಪತಿ ರಾಜೇಶ್ವರಿಯನ್ನು ಚಿಕ್ಕವಳಿದ್ದಾಗಲೇ ದತ್ತು ಪಡೆದಿದ್ದರು. ರಾಜೇಶ್ವರಿಯ ತಂದೆ ಅಬ್ದುಲ್ಲಾ ಅವರ ಜಮೀನಿನಲ್ಲಿ ದುಡಿಯುತ್ತಿದ್ದರು. ಅವರು ಮರಣಾನಂತರ ರಾಜೇಶ್ವರಿಯನ್ನು ಈ ದಂಪತಿ ದತ್ತು ಪಡೆದು, ತಮ್ಮ ಮೂವರು ಗಂಡುಮಕ್ಕಳೊಂದಿಗೆ ಸಾಕಿದ್ದಾರೆ. ರಾಜೇಶ್ವರಿಗೆ ಏಳು ವರ್ಷ ಆಗುವ ವೇಳೆಗೆ ಆಕೆಯ ತಾಯಿ ಸಹ ಆಕೆ ತೀರಿಕೊಂಡರು.

ಹಿಂದೂ ವರನನ್ನು ಹುಡುಕಿದ ಅಬ್ದುಲ್ಲಾ ದಂಪತಿ

ಹಿಂದೂ ವರನನ್ನು ಹುಡುಕಿದ ಅಬ್ದುಲ್ಲಾ ದಂಪತಿ

ಹದಿನೈದು ವರ್ಷಗಳಿಂದ ರಾಜೇಶ್ವರಿಯನ್ನು ಸಾಕಿದ ಅಬ್ದುಲ್ಲಾ ಮತ್ತು ಖದೀಜಾ ಆಕೆಗೆ ಸೂಕ್ತವಾದ ಹಿಂದೂ ವರ ವಿಷ್ಣುಪ್ರಸಾದ್ ನೊಂದಿಗೆ ಭಾನುವಾರ (ಫೆಬ್ರವರಿ 16) ರಂದು ಹಿಂದೂ ಸಂಪ್ರದಾಯದ ಅನುಗುಣವಾಗಿ ಮದುವೆ ಮಾಡಿದರು.

ಹಿಂದೂ ಸಂಪ್ರದಾಯದ ಅನುಸಾರ ಮದುವೆ

ಹಿಂದೂ ಸಂಪ್ರದಾಯದ ಅನುಸಾರ ಮದುವೆ

ರಾಜೇಶ್ವರಿಯ ತಂದೆ ತಾಯಿಯಾಗಿ ಮದುವೆಯ ವೇಳೆ ಹಿಂದೂ ಸಂಪ್ರದಾಯದ ಅನುಸಾರ ಏನೇನು ಮಾಡಬೇಕೊ ಎಲ್ಲವನ್ನೂ ಅಬ್ದುಲ್ಲಾ ಮತ್ತು ಖದೀಜಾ ಮಾಡಿದರು. ಅಂತೆಯೇ ರಾಜೇಶ್ವರಿ ತಮ್ಮ ಪೋಷಕರ ಕಾಲಿಗೆ ಎರಗಿ ಆಶೀರ್ವಾದ ಪಡೆದರು. ರಾಜೇಶ್ವರಿ ಆಶೀರ್ವಾದ ಪಡೆಯುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಒಡವೆ, ಸೀರೆ ಕೊಡಿಸಿದ್ದ ಅಬ್ದುಲ್ಲಾ ದಂಪತಿ

ಒಡವೆ, ಸೀರೆ ಕೊಡಿಸಿದ್ದ ಅಬ್ದುಲ್ಲಾ ದಂಪತಿ

ರಾಜೇಶ್ವರಿಗಾಗಿ ಸೀರೆ, ಒಡವೆಗಳನ್ನು ತಂದಿದ್ದ ಅಬ್ದುಲ್ಲಾ, ಖದೀಜಾ ದಂಪತಿ ಸರಳವಾಗಿ ಆದರೆ ಯಾವುದಕ್ಕೂ ಕೊರತೆ ಇರದಂತೆ ಮದುವೆ ಮಾಡಿದ್ದಾರೆ. ಇವರ ಮದುವೆಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+