ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2015ರಲ್ಲಿ ಬರುವ ಸುದೀರ್ಘ ರಜೆಗಳ ಪಟ್ಟಿ: ಮಸ್ತ್ ಮಜಾ ಮಾಡಿ

|
Google Oneindia Kannada News

ವೈಕುಂಠ ಏಕಾದಶಿಯ ಪುಣ್ಯದಿನದ ಮೂಲಕ 2015ರ ಹೊಸ ವರ್ಷಾರಂಭವಾಗಿದೆ. ಈ ವರ್ಷವೂ ಹೆಚ್ಚಿನ ಹಬ್ಬ, ಹರಿದಿನಗಳು ವಾರಾಂತ್ಯಕ್ಕೆ ಹೊಂದಿಕೊಂಡು ಬಂದಿರುವುದು ರಜೆಯ ಸವಿಯನ್ನು ಇಮ್ಮಡಿಗೊಳಿಸಲಿದೆ.

ಒಂದು ದಿನ ರಜೆ ಹಾಕಿದರೆ ಎಷ್ಟು ದಿನ, ಎರಡು ದಿನ ಸಿಎಲ್ ಹಾಕಿದರೆ ಇನ್ನೆಷ್ಟು ದಿನ ರಜೆಯ ಸವಿ ಅನಿಭವಿಸಬಹುದು ಎನ್ನುವ ಒಂದು ಮಾಹಿತಿಯನ್ನು ನಮ್ಮ ಓದುಗರಿಗಾಗಿ ಕೆಳಗೆ ನೀಡಲಾಗಿದೆ.

ಜನವರಿ: ಸಂಕ್ರಾತಿ ಹಬ್ಬವನ್ನು ಹದಿನೈದನೇ ತಾರೀಕು ಗುರುವಾರದಂದು ಆಚರಿಸಲಾಗುತ್ತಿದೆ. ಐಟಿ ಉದ್ಯೋಗಿಗಳು ಒಂದು ದಿನ, ಇತರರು ಎರಡು ದಿನ ರಜೆ ಹಾಕಿದರೆ ಒಟ್ಟು ನಾಲ್ಕು ದಿನಗಳ ರಜಾ. ಇನ್ನು 26 ಗಣರಾಜ್ಯೋತ್ಸವ ಸೋಮವಾರದಂದು. ಮತ್ತೆ ಇಲ್ಲಿ ಎರಡು ಅಥವಾ ಮೂರು ದಿನಗಳ ರಜೆ. (2015ರ ಸಾಲಿನ ರಜಾದಿನಗಳ ಪಟ್ಟಿ)

Most of the Holidays in the year 2015, falls on close to weekends

ಫೆಬ್ರವರಿ : 17 ಮಂಗಳವಾರದಂದು ಮಹಾಶಿವರಾತ್ರಿ. ಇಲ್ಲಿ ಸೋಮವಾರ ಒಂದು ದಿನ ರಜೆ ಹಾಕಿದರೆ 2-3 ದಿನ ರಜೆ.

ಮಾರ್ಚ್ : 21 ಶನಿವಾರ, ಚಾಂದ್ರಮಾನ ಯುಗಾದಿ. ಐಟಿ ಉದ್ಯೋಗಿಗಳಿಗೆ ಶನಿವಾರ ಹೇಗೂ ರಜೆ, ಇತರರಿಗೆ ಎರಡು ದಿನ ಒಟ್ಟಿಗೆ ರಜೆ ಸಿಗಲಿದೆ.

ಎಪ್ರಿಲ್ : 2 (ಗುರುವಾರ, ಮಹಾವೀರ ಜಯಂತಿ, ಸರಕಾರೀ ರಜೆ) 3 (ಗುಡ್ ಫ್ರೈಡೆ) ಇಲ್ಲಿ ಶನಿವಾರ ಒಂದು ದಿನ ರಜೆ ಹಾಕಿದರೆ ಮತ್ತೆ ನಾಲ್ಕು ದಿನಗಳ ರಜೆಗಳ ಗೊಂಚಲು. 14 ಮತ್ತು 21 (ಮಂಗಳವಾರ) ಕ್ರಮವಾಗಿ ಅಂಬೇಡ್ಕರ್ ಜಯಂತಿ ಮತ್ತು ಬಸವೇಶ್ವರ ಜಯಂತಿ ಸರಕಾರೀ ರಜೆ ಕೂಡಾ ಇದೆ.

ಮೇ : ಕಾರ್ಮಿಕರ ದಿನ ಮೇ 1 ಶುಕ್ರವಾರ. ಇಲ್ಲಿ ಐಟಿ ಉದ್ಯೋಗಿಗಳಿಗೆ ಮೂರು ದಿನದ ಸಾಲು ರಜೆ, ಇತರರು ಶನಿವಾರ ಒಂದು ದಿನ ರಜೆ ಹಾಕಿದರೆ ಮೂರು ದಿನ ರಜೆ. ಇದಲ್ಲದೇ ಮೇ ನಾಲ್ಕು ಸೋಮವಾರ ಬುದ್ದಪೂರ್ಣಿಮಾ ಸರಕಾರೀ ರಜೆ ಕೂಡಾ ಇದೆ.

ಜುಲೈ : ಜುಲೈ 8, ಶನಿವಾರ ರಂಜಾನ್. ಇಲ್ಲಿ ಐಟಿಯೇತರರು ಒಂದು ದಿನ ರಜೆ ಅಪ್ಲೈ ಮಾಡಿದ್ದಲ್ಲಿ ಎರಡು ದಿನ ಒಟ್ಟಿಗೆ ರಜೆ.

ಆಗಸ್ಟ್: ಸ್ವಾತಂತ್ರ್ಯ ದಿನವನ್ನು ಮೂರನೇ ಶನಿವಾರ ಆಚರಿಸಲಾಗುತ್ತದೆ, ಇಲ್ಲಿ ಐಟಿಯೇತರರಿಗೆ ಎರಡು ದಿನದ ರಜಾ.

Most of the Holidays in the year 2015, falls on close to weekends

(ಚಿತ್ರ: ಪಿಟಿಐ)

ಸೆಪ್ಟಂಬರ್ : 17ರಂದು ಗುರುವಾರ ಗಣೇಶ ಹಬ್ಬ, ಬುಧವಾರ 16 ಗೌರೀ ಹಬ್ಬದ ನಿರ್ಭಂದಿತ ರಜೆ. ಇಲ್ಲಿ ಕೂಡಾ 1-2 ದಿನ ರಜೆ ಹಾಕಿದರೆ 4-5 ರಜಾ. ಅಲ್ಲದೇ 24 ಗುರುವಾರ ಬಕ್ರೀದ್ ಹಬ್ಬ ಕೂಡಾ ಇದೆ.

ಅಕ್ಟೋಬರ್ : 2 (ಶುಕ್ರವಾರ, ಗಾಂಧಿ ಜಯಂತಿ), 12 (ಸೋಮವಾರ, ಮಹಾಲಯ ಅಮವಾಸ್ಯೆ, ಸರಕಾರೀ ರಜೆ), 22 (ಗುರುವಾರ, ಆಯುಧಪೂಜೆ), 23 (ಶುಕ್ರವಾರ, ವಿಜಯದಶಮಿ), 24 (ಮೊಹರಂ, ಶನಿವಾರ, ಸರಕಾರೀ ರಜೆ) 27 (ಮಂಗಳವಾರ, ವಾಲ್ಮೀಕಿ ಜಯಂತಿ, ಸರಕಾರೀ ರಜೆ)

ನವೆಂಬರ್ : 10 (ನರಕ ಚತುರ್ದಶಿ, ಮಂಗಳವಾರ), 12 (ಗುರುವಾರ, ಬಲಿಪಾಡ್ಯಮಿ), 26 (ಕನಕದಾಸ ಜಯಂತಿ, ಗುರುವಾರ, ಸರಕಾರೀ ರಜೆ). ಕನ್ನಡ ರಾಜ್ಯೋತ್ಸವವನ್ನು ಭಾನುವಾರದಂದು ಆಚರಿಸಲಾಗುತ್ತದೆ.

ಡಿಸೆಂಬರ್ : 24 (ಈದ್ ಮಿಲಾದ್, ಗುರುವಾರ, ಸರಕಾರೀ ರಜೆ), 25 (ಶುಕ್ರವಾರ, ಕ್ರಿಸ್ಮಸ್)

English summary
Karnataka government holidays 2015 : Most of the Holidays in the year 2015, falls on close to weekends. Here is the list. Plan your holidays well in advance. Where do you want to go to spend holidays? Find destination here on Nativeplanet.com
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X