ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 607 ಮಕ್ಕಳಿಗೆ 10ಕ್ಕಿಂತ ಕಡಿಮೆ ಅಂಕ!

ಬೆಂಗಳೂರು, ಜೂ.2: ಯಾವುದೇ ಪರೀಕ್ಷಾ ಫಲಿತಾಂಶ ಪ್ರಕಟಗೊಂಡರೆ ನಮಗೆ ಯಶಸ್ಸು ಗಳಿಸಿದ ಹಲವು ವಿದ್ಯಾರ್ಥಿಗಳ ಯಶೋಗಾಥೆ ಗಮನಕ್ಕೆ ಬರುತ್ತದೆ. ಆದರೆ ಇದಕ್ಕಿಂತ ಎಷ್ಟೋ ಪಟ್ಟು ಮಕ್ಕಳು ಕನಿಷ್ಠ ಅಂಕಗಳನ್ನೂ ಗಳಿಸದೇ ಅವರ ಭವಿಷ್ಯ‌ ಅಂಧಕಾರಕ್ಕೆ ದೂಡಲ್ಪಡುತ್ತದೆ.

ಇಂತಹ ಮಕ್ಕಳನ್ನು ಪತ್ತೆಮಾಡಿ ಅವರ ಬದುಕನ್ನೂ ಹಸನುಗೊಳಿಸುವ ಬಗೆಗೆ ಇದೇ ಮೊದಲ ಬಾರಿಗೆ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಚಿಂತನೆ ನಡೆಸಿದೆ. ಈಚೆಗೆ ಪ್ರಕಟವಾದ ಎಸೆಸೆಲ್ಸಿ ಪರೀಕ್ಷೆ ಯಲ್ಲಿ 625 ಕ್ಕೆ 625 ಅಂಕಗಳನ್ನು ನಾಲ್ವರು ವಿದ್ಯಾರ್ಥಿಗಳು ಪಡೆದಿದ್ದರು. ಆದರೆ ರಾಜ್ಯದ ಸರಕಾರಿ ಹಾಗೂ ಖಾಸಗಿ ಶಾಲೆಗಳ 607 ವಿದ್ಯಾರ್ಥಿಗಳು ಆರೂ ವಿಷಯಗಳಲ್ಲಿ 10ಕ್ಕಿಂತ ಕಡಿಮೆ ಅಂಕ ಗಳಿಸಿದ್ದರು.

ಇಂತಹ ಅಂಕಿ ಅಂಶಗಳನ್ನು ಇದೇ ಮೊದಲ ಬಾರಿಗೆ ಪತ್ತೆ ಮಾಡಿರುವ ಪರೀಕ್ಷಾ ಮಂಡಳಿ ಇಂತಹ ವಿದ್ಯಾರ್ಥಿಗಳಿಗಾಗಿ ಯಾವ ರೀತಿಯ ಪರಿಹಾರವನ್ನು ಕಂಡು ಕೊಳ್ಳಬೇಕೆಂಬ ಯೋಜನೆ ರೂಪಿಸಲು ಮುಂದಾಗಿದೆ.

More than 600 students secured less than 10 marks in SSLC exams

ಶಿಕ್ಷಣ ತಜ್ಞರು ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಶಿಕ್ಷಣ ಇಲಾಖೆ, ಶಿಕ್ಷಕರು ಇದಕ್ಕೆ ಉತ್ತರ ನೀಡಲೇ ಬೇಕು ಎಂದು ಹೇಳಿದ್ದಾರೆ. ಕೆಎಸ್‌ಇಇಬಿ ನಿರ್ದೇಶಕಿ ವಿ. ಸುಮಂಗಲ ಅವರು, ಇದೇ ಮೊದಲ ಬಾರಿಗೆ ಈ ಅಂಕಿ ಅಂಶಗಳನ್ನು ಪಡೆದಿದ್ದೇವೆ.

ಕೆಲವೊಂದು ವಿದ್ಯಾರ್ಥಿಗಳು 625ಕ್ಕೆ 10 ಅಂಕ ಪಡೆದರೆ ಇನ್ನು ಕೆಲವು ವಿದ್ಯಾರ್ಥಿಗಳು ಶೂನ್ಯ ಗಳಿಸಿದ್ದಾರೆ ಇದು ನಮಗೂ ಆಶ್ಚರ್ಯ ಉಂಟುಮಾಡಿದೆ. ಇನ್ನು ಮುಂದಿನ ದಿನಗಳಲ್ಲಿ ಈ ರೀತಿಯಾಗದಂತೆ ನಿಗಾ ವಹಿಸಲಾಗುತ್ತದೆ ಎಂದಿದ್ದಾರೆ.

ರಾಜ್ಯಾದ್ಯಂತ ಇರುವ ಸರ್ಕಾರಿ ಶಾಲೆಗಳಲ್ಲಿ 280 ವಿದ್ಯಾರ್ಥಿಗಳು, ಅನುದಾನಿತ ಶಾಲೆಗಳಲ್ಲಿ 148 ವಿದ್ಯರ್ಥಿಗಳು, ಅನುದಾನರಹಿತಶಾಲೆಗಳ 179 ವಿದ್ಯಾರ್ಥಿಗಳು 10 ಕ್ಕಿಂತ ಕಡಿಮೆ ಅಂಕವನ್ನು ಗಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+