Karnataka Election Opinion Poll: ಪಬ್ಲಿಕ್ ಟಿವಿ ಸಮೀಕ್ಷೆಯಲ್ಲಿ ಸರ್ವಂ ಅತಂತ್ರಮಯ

ಬೆಂಗಳೂರು, ಮಾರ್ಚ್31: ರಾಜ್ಯ ವಿಧಾನಸಭಾ ಚುನಾವಣಾ ರಣಕಣ ರಂಗೇರಿದೆ. ಇತ್ತ 2023 ರ ವಿಧಾನಸಭಾ ಚುನಾವಣೆಯನ್ನ ಪ್ರತಿಷ್ಠೆಯ ಕಣವನ್ನಾಗಿ ತೆಗೆದುಕೊಂಡಿರುವ ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರವನ್ನ ನಡೆಸುತ್ತಿವೆ. ಚುನಾವಣಾ ಆಯೋಗ ರಾಜ್ಯ ಚುನಾವಣೆಗೆ ದಿನಾಂಕವನ್ನು ನಿಗದಿ ಪಡಿಸಿದ್ದು ಮೇ ಹತ್ತರಂದು ಚುನಾವಣೆ, ಮೇ ಹದಿಮೂರರಂದು ಮತಎಣಿಕೆ ನಡೆಯಲಿದೆ.

ಇತ್ತ ಗೆಲ್ಲುವ ತವಕದಲ್ಲಿರುವ ರಾಜಕೀಯ ಪಕ್ಷಗಳು ತಮ್ಮದೇ ಆದ ಸರ್ವೆಯನ್ನ ನಡೆಸಿದ್ದು, ಸರ್ವೆಯಿಂದಾಗಿ ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಅಘಾತವಾಗಿದ್ದು, ಯಾವ ಯಾವ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೊಸ ಪ್ಲಾನ್‌ ನಡೆಸಿದ್ದು, ಚುನಾವಣಾ ತಯಾರಿಯನ್ನು ಚುರುಕುಗೊಳಿಸಿವೆ.

Mood Of Karnataka : Opinion Poll By Public TV Ahead Of Assembly Election

ಇನ್ನೂ ಆಡಳಿತರೂಢ ಬಿಜೆಪಿ ಮಿಷನ್ 150 ಟರ್ಗೆಟ್‌ ಇಟ್ಟುಕೊಂಡಿದರೆ, ಇತ್ತ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಹಲವು ಭರವಸೆಗಳನ್ನ ರಾಜ್ಯದ ಜನರಿಗೆ ನೀಡುವ ಮೂಲಕ ಗೆಲ್ಲುವ ವಿಶ್ವಾಸವನ್ನ ಇಟ್ಟುಕೊಂಡಿದ್ದು, ಇದೀಗ ಪಬ್ಲಿಕ್‌ ಟಿವಿ ಸಮೀಕ್ಷೆ ಪ್ರಕಟಗೊಂಡಿದ್ದು, ರಾಜ್ಯ ನಾಯಕರಿಗೆ ಈ ಸರ್ವೆಯಿಂದ ಅಘಾತ ಉಂಟು ಮಾಡಿದೆ.

2023ರ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬರಲಿದೆ ಎಂದು ಪಬ್ಲಿಕ್‌ ಟಿವಿ ಸಮೀಕ್ಷೆ ಹೇಳಿದೆ. ಇದರಿಂದಾಗಿ ಆಡಳಿತರೂಢ ಬಿಜೆಪಿಗೆ ಆಘಾತವಾಗುವ ಸಾಧ್ಯತೆಯಿದೆ. ಪಬ್ಲಿಕ್‌ ಟಿವಿ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್‌ 98 ರಿಂದ 108 ಸ್ಥಾನಗಳು ಸಿಗಬಹುದು ಎಂದು ಅಂದಾಜಿಸಲಾಗಿದ್ದು, ಇನ್ನೂ ಬಿಜೆಪಿಗೆ 85 ರಿಂದ 95 ಸ್ಥಾನಗಳು ಸಿಕ್ಕರೆ, ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ ಗೆ 28 ರಿಂದ 33 ಸ್ಥಾನಗಳು ಸಿಗಬಹುದು ಎಂದು ಸರ್ವೆಯಿಂದ ತಿಳಿದು ಬಂದಿದೆ. 2 ಸ್ಥಾನವನ್ನ ಸ್ವತಂತ್ರ ಅಭ್ಯರ್ಥಿಗಳು ಗೆಲ್ಲಬಹುದು ಎನ್ನಲಾಗಿದೆ.

ಈಗಾಗಲೇ ಹಳೇ ಮೈಸೂರು ಭಾಗ, ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕದ ಸಮೀಕ್ಷೆ ಫಲಿತಾಂಶವನ್ನ ಪ್ರಕಟಿಸಿರುವ ಪಬ್ಲಿಕ್‌ ಟಿವಿ, ಇದೀಗ ಕಿತ್ತೂರು ಕರ್ನಾಟಕ ಹಾಗೂ ಮಲೆನಾಡು, ಮಧ್ಯ ಕರ್ನಾಟಕ ಸಮೀಕ್ಷೆಯನ್ನ ಪ್ರಕಟಿಸಿದೆ.

Mood Of Karnataka : Opinion Poll By Public TV Ahead Of Assembly Election

ಇನ್ನೂ 2018 ರಲ್ಲಿ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ ನೀಡಿದ್ದ ಕಿತ್ತೂರು ಕರ್ನಾಟಕದಲ್ಲಿ ಈ ಬಾರಿ ಹಿನ್ನಡೆಯಾಗುವ ಸಾಧ್ಯತೆಯಿದೆ ಎಂದು ಪಬ್ಲಿಕ್‌ ಟಿವಿಯ 'Mood Of Karnataka' ಸರ್ವೆಯಿಂದ ತಿಳಿದು ಬಂದಿದ್ದು, ಕಾಂಗ್ರೆಸ್‌ ಹೆಚ್ಚಿನ ಸ್ಥಾನ ಪಡೆದುಕೊಳ್ಳಲಿದೆ ಎಂದು ಅಂದಾಜಿಸಲಾಗಿದೆ.

ಕಳೆದ ಚುನಾವಣೆಗೆ ಹೋಲಿಸಿದರೆ ಈ ಚುನಾವಣೆಯಲ್ಲಿ ಬಿಜೆಪಿ 8 ಸ್ಥಾನ ಕಳೆದುಕೊಳ್ಳಲಿದ್ದರೆ ಕಾಂಗ್ರೆಸ್‌ 9 ಹೆಚ್ಚುವರಿ ಸ್ಥಾನಗಳನ್ನು ಪಡೆದುಕೊಳ್ಳುವ ಸಾಧ್ಯತೆಯಿದೆ. ಒಟ್ಟು ಕಿತ್ತೂರು ಕರ್ನಾಟಕ 50 ಕ್ಷೇತ್ರಗಳ ಪೈಕಿ, ಆಡಳಿತರೂಢ ಬಿಜೆಪಿ 22 ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂದು ಅಂದಾಜಿಸಲಾಗಿದೆ, ಇನ್ನೂ ಕಾಂಗ್ರೆಸ್‌ 26 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ ಜೆಡಿಎಸ್‌ 2 ಕ್ಷೇತ್ರಗಳಲ್ಲಿ ಜಯ ಗಳಿಸಲಿದೆ ಎಂದು ಅಂದಾಜಿಸಲಾಗಿದೆ.

ಬೆಳಗಾವಿ ಒಟ್ಟು ಕ್ಷೇತ್ರಗಳು 18

ಬಿಜೆಪಿ - 8
ಕಾಂಗ್ರೆಸ್‌ - 10
ಜೆಡಿಎಸ್‌ - 0

ಬಾಗಲಕೋಟೆ ಒಟ್ಟು ಕ್ಷೇತ್ರಗಳು 7

ಬಿಜೆಪಿ - 3
ಕಾಂಗ್ರೆಸ್‌ - 4
ಜೆಡಿಎಸ್‌ - 0

ವಿಜಯಪುರ ಒಟ್ಟು ಕ್ಷೇತ್ರಗಳು 8

ಬಿಜೆಪಿ - 3
ಕಾಂಗ್ರೆಸ್‌ -3
ಜೆಡಿಎಸ್‌ - 2

ಧಾರವಾಡ ಒಟ್ಟು ಕ್ಷೇತ್ರಗಳು 7

ಬಿಜೆಪಿ - 4
ಕಾಂಗ್ರೆಸ್‌ - 3
ಜೆಡಿಎಸ್‌ - 0

ಗದಗ ಒಟ್ಟು ಕ್ಷೇತ್ರಗಳು 4

ಬಿಜೆಪಿ - 2
ಕಾಂಗ್ರೆಸ್‌ - 2
ಜೆಡಿಎಸ್‌ - 0

ಹಾವೇರಿ ಒಟ್ಟು ಕ್ಷೇತ್ರಗಳು 6

ಬಿಜೆಪಿ - 2
ಕಾಂಗ್ರೆಸ್‌ - 4
ಜೆಡಿಎಸ್‌ - 0

ಮಲೆನಾಡು, ಮಧ್ಯ ಕರ್ನಾಟಕದಲ್ಲಿ ಯಾವ ಪಕ್ಷಕ್ಕೆ ಜನ?

ಮಲೆನಾಡು ಮತ್ತು ಮಧ್ಯ ಕರ್ನಾಟಕದಲ್ಲಿ ಈ ಬಾರಿ ಬಿಜೆಪಿಗೆ ಹಿನ್ನಡೆಯಾಗಲಿದ್ದು ಕಳೆದ ಬಾರಿಗಿಂತ ಕಾಂಗ್ರೆಸ್‌ ಹೆಚ್ಚಿನ ಸ್ಥಾನವನ್ನು ಪಡೆದುಕೊಳ್ಳುವ ಸಾಧ್ಯತೆಯಿದೆ ಇದೆ ಎಂದು ಪಬ್ಲಿಕ್‌ ಟಿವಿ ಸಮೀಕ್ಷೆಯಿಂದ ತಿಳಿದುಬಂದಿದೆ.

Mood Of Karnataka : Opinion Poll By Public TV Ahead Of Assembly Election

ಇನ್ನೂ 2018 ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಬಿಜೆಪಿ 4 ಸ್ಥಾನ ಕಳೆದುಕೊಳ್ಳಲಿದ್ದರೆ ಕಾಂಗ್ರೆಸ್‌ 4 ಸ್ಥಾನ ಹೆಚ್ಚುವರಿಯಾಗಿ ಪಡೆದುಕೊಳ್ಳಲಿದೆ. ಮಲೆನಾಡು ಮತ್ತು ಮಧ್ಯ ಕರ್ನಾಟಕ ಒಟ್ಟು 25 ಕ್ಷೇತ್ರಗಳ ಪೈಕಿ ಬಿಜೆಪಿ ಪಕ್ಷವೂ 16 ಕ್ಷೇತ್ರಗಳಲ್ಲಿ ಗೆಲವು ಸಾಧಿಸಲಿದ್ದು, ಕಾಂಗ್ರೆಸ್‌ 9 ಹಾಗೂ ಜೆಡಿಎಸ್‌ ಶೂನ್ಯ ಎಂದು ಪಬ್ಲಿಕ್‌ ಟಿವಿ ಸಮೀಕ್ಷೆಯಿಂದ ತಿಳಿದು ಬಂದಿದೆ.

ಶಿವಮೊಗ್ಗ ಒಟ್ಟು ಸ್ಥಾನಗಳು 7

ಬಿಜೆಪಿ - 5
ಕಾಂಗ್ರೆಸ್‌ - 2
ಜೆಡಿಎಸ್‌ - 0

ಚಿಕ್ಕಮಗಳೂರು ಒಟ್ಟು ಸ್ಥಾನಗಳು 5

ಬಿಜೆಪಿ - 3
ಕಾಂಗ್ರೆಸ್‌ - 2
ಜೆಡಿಎಸ್‌ - 0

ದಾವಣಗೆರೆ ಒಟ್ಟು ಸ್ಥಾನಗಳು 7

ಬಿಜೆಪಿ - 4
ಕಾಂಗ್ರೆಸ್‌ - 3
ಜೆಡಿಎಸ್‌ - 0(0)

ಚಿತ್ರದುರ್ಗ ಒಟ್ಟು ಸ್ಥಾನಗಳು 6

ಬಿಜೆಪಿ - 4

ಕಾಂಗ್ರೆಸ್‌ - 2

ಜೆಡಿಎಸ್‌ - 0

Disclaimer: ಈ ಲೇಖನವನ್ನು ಪಬ್ಲಿಕ್ ಟಿವಿ ನಡೆಸಿದ ಸಮೀಕ್ಷೆ ಅಂಕಿಅಂಶ ಆಧಾರದಲ್ಲಿ ಬರೆಯಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+