ನೀತಿ ಸಂಹಿತೆ ಉಲ್ಲಂಘನೆ, ಎಷ್ಟು ಪ್ರಕರಣ ದಾಖಲಾಗಿದೆ?

ಬೆಂಗಳೂರು, ಏಪ್ರಿಲ್ 08 : ಕರ್ನಾಟಕದಲ್ಲಿ ಮೇ 12ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. ಚುನಾವಣಾ ದಿನಾಂಕ ಘೋಷಣೆಯಾದ ದಿನದಿಂದ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ನಡೆಯುತ್ತಿವೆ.

1,156 ಫ್ಲೈಯಿಂಗ್ ಸ್ಕ್ವಾಡ್ಸ್ ಮತ್ತು 1,255 ಸ್ಟಾಟಿಕ್ ಸರ್ವೆಲೆನ್ಸ್ ಟೀಮ್‌ಗಳು ಮಾದರಿ ನೀತಿ ಸಂಹಿತೆ ಉಲ್ಲಂಘಟನೆ ಬಗ್ಗೆ ನಿಗಾವಹಿಸಲು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಮಾದರಿ ನೀತಿ ಸಂಹಿತೆ ಜಾರಿಗಾಗಿ ರಚಿಸಿದ ಫ್ಲೈಯಿಂಗ್ ಸ್ಕ್ವಾಡ್ಸ್ ಮತ್ತು ಇತರೆ ಮಾದರಿ ನೀತಿ ಸಂಹಿತೆ ತಂಡಗಳು 12537 ಗೋಡೆಬರಹಗಳು, 17693 ಪೋಸ್ಟರ್‌ಗಳು ಮತ್ತು 7,711 ಬ್ಯಾನರ್‌ಗಳನ್ನು ಸಾರ್ವಜನಿಕ ಸ್ಥಳಗಳಿಂದ ತೆಗೆದುಹಾಕಲಾಗಿದೆ.

Karnataka Open Places (Provision of Disfigurement) Act 1981ಪ್ರಕಾರ 6 ಪ್ರಕರಣಗಳನ್ನು ನೋಂದಾಯಿಸಲಾಗಿದೆ. ಖಾಸಗಿ ಜಾಗಗಳಲ್ಲಿ ಒಟ್ಟಾರೆ 6,866 ಗೋಡೆ ಬರಹ, 7,949 ಪೋಸ್ಟರ್‌ ಮತ್ತು 2,543 ಬ್ಯಾನರ್‌ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ತೆಗೆದುಹಾಕಲಾಗಿದೆ.

Model code of conduct violation case in Karnataka

ಕಳೆದ 24 ಗಂಟೆಗಳಲ್ಲಿ 1,63,30,350 ಲಕ್ಷ ರೂ.ಗಳನ್ನು, 1 ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆ, ಸ್ಟಾಟಿಕ್ ಸರ್ವೆಲೆನ್ಸ್ ತಂಡಗಳು 3,33,50,880 ನಗದು, 4.5 ಲೀಟರ್ ಮದ್ಯ, ವಾಹನಗಳು ಮತ್ತಿತರ ವಸ್ತುಗಳು ಸೇರಿದಂತೆ ರೂ.1,18,20,272 ಮೌಲ್ಯದ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿವೆ.

24 ಗಂಟೆಗಳಲ್ಲಿ ಫ್ಲೈಯಿಂಗ್ ಸ್ಕ್ವಾಡ್‍ಗಳು ರೂ.4,85,000/- ನಗದು, ರೂ.8000 ಮೌಲ್ಯದ 49 ಲೀ.ಮದ್ಯ , 2 ವಾಹನಗಳು, ರೂ. 30,000 ಮೌಲ್ಯದ 198 ದೋಸೆ ತವಾಗಳು, ರೂ.2.00 ಲಕ್ಷ ಮೌಲ್ಯದ ಅಡುಗೆ ಪಾತ್ರೆ ಮತ್ತು ಶಾಮಿಯಾನ ವಶಕ್ಕೆ ಪಡೆಯಲಾಗಿದೆ.

ಒಟ್ಟಾರೆ, ಫ್ಲೈಯಿಂಗ್ ಸ್ಕ್ವಾಡ್ ತಂಡಗಳು, ರೂ.47,04,100 ನಗದು, 270.465 ಲೀ ಮದ್ಯ, ರೂ.1,85,14,010 ಮೌಲ್ಯದ ಇತರೆ ವಸ್ತುಗಳು , ರೂ.76,90,710ಗಳ ಮೌಲ್ಯದ 17 ವಾಹನಗಳನ್ನು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಡಿ ವಶಪಡಿಸಿಕೊಳ್ಳಲಾಗಿದೆ .

ಕಳೆದ 24 ಗಂಟೆಗಳಲ್ಲಿ, ಫ್ಲೈಯಿಂಗ್ ಸ್ಕ್ವಾಡ್‍ಗಳ ತಂಡ ಮತ್ತು ಇತರೆ ಪೊಲೀಸ್ ಪ್ರಾಧಿಕಾರಗಳು ನಗದು ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಂಡಿರುವುದಕ್ಕೆ ಮತ್ತು ಇತರೆ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ 18 ಪ್ರಕರಣಗಳಲ್ಲಿ ಎಫ್‍ಐಆರ್ ದಾಖಲಿಸಿದೆ.

ಅಬಕಾರಿ ಇಲಾಖೆಯು 1209.76 ಲೀ. ಗಳಷ್ಟು ಐಎಂಎಲ್ ಮದ್ಯವನ್ನು ಮತ್ತು ರೂ.5,03,946 ಮೌಲ್ಯದ ಇತರೆ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ ಮತ್ತು 41 ಪ್ರಕರಣಗಳನ್ನು ದಾಖಲಿಸಿದೆ. ಮದ್ಯದ ಪರವಾನಿಗೆಯನ್ನು ಉಲ್ಲಂಘಿಸಿದ 51 ಪ್ರಕರಣಗಳನ್ನು ದಾಖಲಿಸಲಾಗಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ಕರ್ನಾಟಕ ಅಬಕಾರಿ ಕಾಯ್ದೆ 1965ರ ಪರಿಚ್ಛೇದ 15 (ಎ) ಅನ್ವಯ 69 ಪ್ರಕರಣಗಳನ್ನು ದಾಖಲಿಸಿದೆ. ರೂ.36,34,073.20/- ಮೌಲ್ಯದ ಐಎಂಎಲ್ ಹಾಗೂ ಇತರೆ ಮದ್ಯ ಸೇರಿ 8,177.112 ಲೀ.ಗಳಷ್ಟು ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.

ಮದ್ಯದ ಪರವಾನಿಗೆಯನ್ನು ಉಲ್ಲಂಘಿಸಿದ 462 ಪ್ರಕರಣಗಳು ಹಾಗೂ ಕರ್ನಾಟಕ ಅಬಕಾರಿ ಕಾಯ್ದೆ 1965ರ ಪರಿಚ್ಛೇದ 15 (ಎ) ಅನ್ವಯ 828 ಪ್ರಕರಣಗಳನ್ನು ಹಾಗೂ ಎನ್‍ಡಿಪಿಎಸ್ ಕಾಯ್ದೆಯಡಿ 2 ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು 121 ವಿವಿಧ ಮಾದರಿಯ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಾನೂನು ಮತ್ತು ಸುವ್ಯವಸ್ಥೆ : 3054 ಪರವನಾಗಿ ಹೊಂದಿದ ಶಸ್ತ್ರಾಸ್ರ್ತಗಳನ್ನು ದಾಸ್ತಾನು ಮಾಡಲಾಗಿದೆ. ಕಳೆದ 24 ಗಂಟೆಗಳಲ್ಲಿ 966 ವ್ಯಕ್ತಿಗಳಿಂದ ಮುಚ್ಚಳಿಕೆಯನ್ನು ಪಡೆಯಲಾಗಿದೆ ಹಾಗೂ 1807 ಜಾಮೀನು ರಹಿತ ವಾರೆಂಟ್‍ಗಳನ್ನು ಹೊರಡಿಸಲಾಗಿದೆ.

ಸಿಆರ್‌ಪಿಸಿ ಕಾಯ್ದೆಯಡಿ 756 ಪ್ರಕರಣಗಳನ್ನು, 797 ನಾಕಾಗಳನ್ನು ಕಾರ್ಯನಿರ್ವಹಿಸುವಂತೆ ಮಾಡಲಾಗಿದೆ. ಒಟ್ಟಾರೆ 90,204 ಶಸ್ತ್ರಾಸ್ರ್ತಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ. 02 ಶಸ್ತ್ರಾಸ್ತ್ರದ ಪರವಾನಿಗೆಯನ್ನು ರದ್ದುಗೊಳಿಸಲಾಗಿದೆ. 50 ಶಸ್ತ್ರಾಸ್ರ್ತಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಸಿಆರ್‌ಪಿಸಿ ಕಾಯ್ದೆಯಡಿಯಲ್ಲಿ 8844 ಪ್ರಕರಣಗಳನ್ನು ದಾಖಲಿಸಲಾಗಿದೆ ಹಾಗೂ 6582 ವ್ಯಕ್ತಿಗಳಿಂದ ಮುಚ್ಚಳಿಕೆಯನ್ನು ಪಡೆಯಲಾಗಿದೆ. 14028 ಜಾಮೀನು ರಹಿತ ವಾರೆಂಟ್‍ಗಳನ್ನು ಹೊರಡಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+