Get Updates
Get notified of breaking news, exclusive insights, and must-see stories!

ವಿನಯ್ ಆತ್ಮಹತ್ಯೆ ಕೇಸ್‌ನಲ್ಲಿ ಪ್ರಭಾವಿಗಳ ಹಸ್ತಕ್ಷೇಪ: ಯತ್ನಾಳ್‌ ಹೇಳಿದ್ದೇನು?

ಬಿಜೆಪಿ ಕಾರ್ಯಕರ್ತ ವಿನಯ್‌ ಸೋಮಯ್ಯ ಆತ್ಮಹತ್ಯೆ ಪ್ರಕರಣವು ರಾಜಕೀಯವಾಗಿ ಮಹತ್ವ ಪಡೆದುಕೊಳ್ಳುತ್ತಿದೆ. ಡೆತ್‌ನೋಟ್‌ನಲ್ಲಿ ಕಾಂಗ್ರೆಸ್‌ ಶಾಸಕರ ಹೆಸರು ಇರುವ ಹಿನ್ನೆಲೆ ಬಿಜೆಪಿ ಇದನ್ನೇ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ. ಕೂಡಲೇ ಆ ಶಾಸಕರ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಆಗ್ರಹಿಸಿದೆ. ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್‌ ಯತ್ಮಾಳ್‌ ಕೂಡ ಈ ಪ್ರಕರಣದ ಬಗ್ಗೆ ಕಿಡಿಕಾರಿದ್ದು, ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ದುಷ್ಟ ಶಕ್ತಿಗಳು ಈ ಪ್ರಕರಣದಲ್ಲಿರುವ ಸಾಕ್ಷ್ಯಾಧಾರಗಳನ್ನು ನಾಶ ಮಾಡುವ ಮೊದಲು ಪ್ರಕರಣದ ತನಿಖೆಯನ್ನು ಕೂಡಲೇ ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ವರ್ಗಾಯಿಸಿ ಎಂದು ಆಗ್ರಹಿಸಿದ್ದಾರೆ.

MLA Basanagouda Patil Yatnal Demands CBI Probe In Vinay Suicide Case

ಶಾಸಕರಾದ ಮಂಥರ್ ಗೌಡ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರು ಬಲಾಢ್ಯರು ಹಾಗೂ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದಲ್ಲಿರುವುದರಿಂದ ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಈಗಾಗಲೇ ಎಫ್‌ಐಆರ್‌ನಲ್ಲಿ ಶಾಸಕರ ಹೆಸರನ್ನು ಉಲ್ಲೇಖ ಮಾಡದೆ, ಪೊಲೀಸರು ಪರೋಕ್ಷವಾಗಿ ತನಿಖೆ ಆರಂಭ ಆಗುವ ಮುನ್ನವೇ ಈ ಪ್ರಮುಖ ಆರೋಪಿಗಳಿಗೆ ದೋಷ ಮುಕ್ತಗೊಳಿಸಿದ್ದಾರೆ ಎಂದು ದೂರಿದ್ದಾರೆ.

ಕಾರ್ಯಕರ್ತ ವಿನಯ್ ಅವರ ಕುಟುಂಬಸ್ಥರು ನೀಡಿರುವ ದೂರಿನ ವಿಷಯದಲ್ಲೇ ಶಾಸಕರ ಪಾತ್ರ ಉಲ್ಲೇಖಿತವಾಗಿದೆ. ಬಡವರಿಗೆ ಒಂದು ನ್ಯಾಯ, ಅಧಿಕಾರಸ್ಥರಿಗೆ ಒಂದು ನ್ಯಾಯ ಆಗಬಾರದು. ಕಾರ್ಯಕರ್ತರು ಪಕ್ಷದ ಸೇನಾನಿಗಳು ಅವರನ್ನು ರಕ್ಷಿಸಬೇಕಾದದ್ದು ಪಕ್ಷದ ಕರ್ತವ್ಯ. ಸಮಯ ವ್ಯರ್ಥ ಮಾಡದೆ ಕೂಡಲೇ ಪ್ರಕರಣವನ್ನು ಸಿಬಿಐಗೆ ನೀಡಿದರೆ ಪ್ರಕರಣ ತಾರ್ಕಿಕ ಅಂತ್ಯ ಕಾಣಬಹುದು. ಇಲ್ಲದಿದ್ದರೆ ತನಿಖೆಯಲ್ಲಿ ಕೆಲ ಪ್ರಭಾವಿಗಳು ಹಸ್ತಕ್ಷೇಪ ಮಾಡುವ ಮೂಲಕ, ಸಾಕ್ಷ್ಯಾಧಾರಗಳನ್ನು ನಾಶ ಮಾಡಿ ಮುಚ್ಚಿಹಾಕುವ ಸಾಧ್ಯತೆ ಹೆಚ್ಚಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

MLA Basanagouda Patil Yatnal Demands CBI Probe In Vinay Suicide Case

ಬಿಜೆಪಿ ಕಾರ್ಯಕರ್ತ ವಿನಯ್ ಅವರ ಡೆತ್‌ನೋಟ್‌ನಲ್ಲಿರುವ ಶಾಸಕ ಎ.ಎಸ್.ಪೊನ್ನಣ್ಣ ಅವರು ಕೂಡಲೇ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು. ಏಕೆಂದರೆ ತಮ್ಮ ಸ್ಥಾನವನ್ನು ದುರಪಯೋಗಪಡಿಸಿಕೊಂಡು, ಅಮಾಯಕ ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರನ್ನು ಬಿಟ್ಟಿರುವ ಶಾಸಕರು ತಮ್ಮ ಪ್ರಭಾವ ಬಳಸಿ, ತನಿಖೆಯನ್ನು ದಿಕ್ಕನ್ನು ಬದಲಿಸುವ ಸಾಧ್ಯತೆಗಳು ಹೆಚ್ಚಿರುವುದರಿಂದ ಕೂಡಲೇ ರಾಜೀನಾಮೆ ಕೊಡಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿಗಳೇ ಅವರನ್ನು ವಜಾ ಮಾಡಿ ನೈತಿಕ ಮೇಲ್ಪಂಕ್ತಿ ಹಾಕಿಕೊಡಬೇಕು ಎಂದು ಯತ್ನಾಳ್‌ ಆಗ್ರಹಿಸಿದ್ದಾರೆ.

ಬಿಜೆಪಿ ನಾಯಕರಿಗೂ ತರಾಟೆ

ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಪ್ರಕರಣದ ವಿಚಾರವಾಗಿ ಯತ್ನಾಳ್‌ ಅವರು ಬಿಜೆಪಿ ನಾಯಕರನ್ನು ಕೂಡ ತರಾಟೆಗೆ ತೆಗೆದುಕೊಂಡಿದ್ದರು. ಇಷ್ಟೆಲ್ಲಾ ಆಗುತ್ತಿದ್ದರೂ ಬಿಜೆಪಿ ರಾಜ್ಯ ಘಟಕವು ವಿನಯ್ ಅವರಿಗೆ ಯಾವುದೇ ಕಾನೂನು ನೆರವು ನೀಡದೆ, ಈಗ ಟ್ವಿಟರ್‌ನಲ್ಲಿ ಆರ್ಭಟಿಸುತ್ತಿರುವುದು ಇವರ ಆದ್ಯತೆಗಳನ್ನು ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದ್ದರು. ಇದರಲ್ಲಿ ಆಡಳಿತಾರೂಢ ಪಕ್ಷದ ಇಬ್ಬರು ಹಾಲಿ ಶಾಸಕರ ಪಾತ್ರವಿದೆ ಎಂದು ಮೇಲ್ನೋಟಕ್ಕೆ ಗೊತ್ತಾಗಿದೆ. ವಿನಯ್ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಆತ್ಮಹತ್ಯೆಗೆ ಕಾರಣರಾದವರನ್ನು ಕೂಡಲೇ ಪೊಲೀಸರು ಬಂಧಿಸಿ ಅವರ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಲಿ. ಬಿಜೆಪಿ ನಾಯಕರು ಈಗಲಾದರೂ ಹೊಂದಾಣಿಕೆ ಮಾಡಿಕೊಳ್ಳದೆ ವಿನಯ್ ಆತ್ಮಕ್ಕೆ ಶಾಂತಿ ಸಿಗುವುದಕ್ಕಾಗಿ ಹೋರಾಟ ಮಾಡಲಿ ಎಂದು ಸಲಹೆ ನೀಡಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+