ಡಿವೈಎಸ್‌ಪಿ ಎಂ.ಕೆ.ಗಣಪತಿ ಡೆತ್ ನೋಟ್ ಎಲ್ಲಿ?

Written By:
Subscribe to Oneindia Kannada

ಬೆಂಗಳೂರು, ಜುಲೈ, 08: ಮಂಗಳೂರು ಐಜಿ ಕಚೇರಿಯಲ್ಲಿ ಡಿವೈ ಎಸ್ ಪಿಯಾಗಿದ್ದ ಎಂಕೆ ಗಣಪತಿ ಆತ್ಮಹತ್ಯೆ ಪ್ರಕರಣ ಸಿಐಡಿ ಅಂಗಳಕ್ಕೆ ತಲುಪಿದೆ. ಇದರೊಂದಿಗೆ ಹಲವಾರು ಪ್ರಶ್ನೆಗಳು ತಲೆ ಎತ್ತಿವೆ. ಆತ್ಮಹತ್ಯೆಗೂ ಮುನ್ನ ಎಂಕೆ ಗಣಪತಿ ಡೆತ್ ನೋಟ್ ಬರೆದಿಟ್ಟಿದ್ದಾರೆ ಎನ್ನಲಾಗಿತ್ತು.

ಆದರೆ ಆತ್ಮಹತ್ಯೆ ಮಾಡಿಕೊಂಡು ಒಂದು ದಿನ ಕಳೆಯುತ್ತಾ ಬಂದಿದ್ದರೂ ಡೆತ್ ನೋಟ್ ಬಗ್ಗೆ ಪೊಲೀಸರು ಚಕಾರ ಎತ್ತಿಲ್ಲ. ಹಾಗಾದರೆ ಗಣಪತಿ ಡೆತ್ ನೋಟ್ ಬರೆದಿಟ್ಟಿಲ್ಲವೇ? ಅಥವಾ ಡೆತ್ ನೋಟ್ ಬಹಿರಂಗವಾದರೆ ಇನ್ನಷ್ಟು ಜನರ ಬಣ್ಣ ಬೀದಿಗೆ ಬರುತ್ತದೆ ಎಂಬ ಆತಂಕ ಪೊಲೀಸ್ ಇಲಾಖೆ ಮತ್ತು ಸರ್ಕಾರವನ್ನು ಕಾಡುತ್ತಿದ್ದೆಯೇ ಎಂಬ ಪ್ರಶ್ನೆ ಜನರಲ್ಲಿ ಮನೆಮಾಡಿದೆ.[ಸಚಿವ ಜಾರ್ಜ್ ಬಂಧನಕ್ಕೆ ಆಗ್ರಹಿಸಿ ಬೀದಿಗಿಳಿದ ಬಿಜೆಪಿ]

MK Ganapathi Suicide: Where is the Death note?

ಗಣಪತಿ ಮಡಿಕೇರಿಯ ವಿನಾಯಕ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಗುರುವಾರ ಮಧ್ಯಾಹ್ನ ಲಾಡ್ಜ್ ಗೆ ಆಗಮಿಸಿದ ಗಣಪತಿ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದರು.[ಸಮವಸ್ತ್ರದಲ್ಲೇ ನೇಣಿಗೆ ಶರಣಾದ ಡಿವೈಎಸ್ಪಿ ಗಣಪತಿ]

ಖಾಸಗಿ ವಾಹಿನಿಗಳಿಗೆ ನೀಡಿದ ಕೊನೆ ಸಂದರ್ಶನದಲ್ಲಿ ಸಚಿವ ಕೆ ಜೆ ಜಾರ್ಜ್ ಮತ್ತು ಗುಪ್ತಚರ ದಳದ ಎಡಿಜಿಪಿ ಎ ಎಂ ಪ್ರಸಾದ್ ಅವರ ಹೆಸರನ್ನು ಹೇಳಿದ್ದಾರೆ. ಹಿರಿಯ ಅಧಿಕಾರಿಗಳಿಂಕದ ಕಿರುಕುಳ ಆಗುತ್ತಿದೆ ಎಂದು ಸಹ ಹೇಳಿದ್ದರು. ಇದೀಗ ಆತ್ಮಹತ್ಯೆ ತನಿಖೆ ಸಿಐಡಿ ಅಂಗಳದಲ್ಲಿದ್ದೂ ಡೆತ್ ನೋಟ್ ನ್ನು ಮಾಧ್ಯಮಗಳಿಗೆ ನೀಡದಿರುವುದು ಯಾಕೆ ಎಂಬುದಕ್ಕೆ ಸರ್ಕಾರವೇ ಉತ್ತರ ಹೇಳಬೇಕಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mangaluru Deputy Superintendent of Police (DySP) M.K. Ganapathi committed suicide in Madikeri on July 7, 2016. After his suicide many questions raised towards his death note.
Please Wait while comments are loading...