ವಿಜಯಪುರದ ಐನಾಪುರ ಗ್ರಾಮದಲ್ಲಿ ಭೂಕಂಪ
ವಿಜಯಪುರ, ಆಗಸ್ಟ್ 09 : ಜಿಲ್ಲೆಯ ಐನಾಪುರ ಗ್ರಾಮದಲ್ಲಿ ಇಂದು (ಬುಧವಾರ) ಭೂಮಿ ಕಂಪಿಸಿದ ಅನುಭವವಾಗಿದ್ದು, ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.
ವಿಜಯಪುರ ಜಿಲ್ಲೆಯ ಐನಾಪುರ ಗ್ರಾಮದಲ್ಲಿ 3ಸೆಕೆಂಡ್ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ಮನೆ ಬಿಟ್ಟು ಹೊರ ಓಡಿ ಬಂದಿದ್ದಾರೆ. ಕಂಪನ ಸಣ್ಣ ಪ್ರಮಾಣದಲ್ಲೇ ಆಗಿದ್ದರೂ ಗ್ರಾಮಸ್ಥರು ಭಯಗೊಳ್ಳುವಂತಾಗಿದೆ.

ಇನ್ನು ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.












Click it and Unblock the Notifications