ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಔಷಧಿ ಖರೀದಿಯಲ್ಲಿ ಅಕ್ರಮ : ಯು.ಟಿ.ಖಾದರ್ ಸ್ಪಷ್ಟನೆಗಳು

|
Google Oneindia Kannada News

ಬೆಂಗಳೂರು, ಮೇ 21 : 'ಆರೋಗ್ಯ ಇಲಾಖೆಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಅವ್ಯವಹಾರದ ಆರೋಪ ಮಾಡಿರುವವರಿಗೆ ನಿಮ್ಹಾನ್ಸ್ ಅಥವ ಕಂಕನಾಡಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಅಗತ್ಯ ವ್ಯವಸ್ಥೆಗಳನ್ನು ಬೇಕಾದರೆ ಮಾಡುತ್ತೇವೆ' ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದರು.

ಶನಿವಾರ ವಿಧಾನಸೌಧದಲ್ಲಿ ಸಚಿವ ಯು.ಟಿ.ಖಾದರ್ ಪತ್ರಿಕಾಗೋಷ್ಠಿ ನಡೆಸಿದರು. ಬಿಜೆಪಿ ನಾಯಕ ಎನ್.ಆರ್.ರಮೇಶ್ ಮಾಡಿರುವ ಆರೋಪಗಳಿಗೆ ಸ್ಪಷ್ಟನೆಗಳನ್ನು ಕೊಟ್ಟರು. 'ಅವ್ಯವಹಾರ ಆಗಿದೆ ಎಂಬುದು ಅವರ ವಾದ ವಾದರೆ ಯಾವುದೇ ತನಿಖೆಗೂ ಸಿದ್ಧ' ಎಂದು ಸಚಿವರು ತಿಳಿಸಿದರು. [ಔಷಧಿ ಖರೀದಿಯಲ್ಲಿ ಭಾರೀ ಅಕ್ರಮ : ಬಿಜೆಪಿ ಆರೋಪ]

ut khader

'ಔಷಧಿಗಳನ್ನು ಹೆಚ್ಚಿನ ಬೆಲೆಗೆ ಖರೀದಿ ಮಾಡಿಲ್ಲ. ಟೆಂಡರ್‌ನಲ್ಲಿ ಎಲ್ಲಾ ಪ್ರತಿಷ್ಠಿತ ಕಂಪನಿಗಳು ಭಾಗವಹಿಸಿದ್ದವು. ಔಷಧಿ ಖರೀದಿಯಲ್ಲಿ ಯಾವುದೇ ಅವ್ಯವಹಾರವಾಗಿಲ್ಲ. ಒಂದು ವಾರದೊಳಗೆ ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿ ಖರ್ಚಾದ ಹಣದ ಬಗ್ಗೆ ಶ್ವೇತ ಪತ್ರ ಹೊರಡಿಸುತ್ತೇವೆ' ಎಂದರು. [ಜನ ಸಾಮಾನ್ಯರಿಗೂ ಏರ್ ಆಂಬುಲೆನ್ಸ್ ಸೌಲಭ್ಯ ಇನ್ನೇನು ಲಭ್ಯ]

'ಎನ್‌ಆರ್ ರಮೇಶ್ ಅವರು ಮಾಡಿರುವ ಆರೋಪ ಆಧಾರ ರಹಿತವಾದದ್ದು. ಪ್ರಚಾರಕ್ಕಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಕೆಲವರಿಗೆ ದೇಹ ಮಾತ್ರ ಬೆಳೆಯುತ್ತದೆ, ಆದರೆ ಬುದ್ಧಿ ಬೆಳೆಯುವುದಿಲ್ಲ. ಇಂತಹವರಿಗೆ ನಿಮ್ಹಾನ್ಸ್ ಆಸ್ಪತ್ರೆ ಇದೆ, ಸೂಕ್ತ ಚಿಕಿತ್ಸೆ ಕೊಡಿಸುತ್ತೇವೆ. ದಶಕಗಳ ಇತಿಹಾಸವಿರುವ ಕಂಕನಾಡಿ ಆಸ್ಪತ್ರೆಯಲ್ಲೂ ಬೇಕಾದರೆ ಚಿಕಿತ್ಸೆ ಕೊಡಿಸುತ್ತೇವೆ' ಎಂದು ಲೇವಡಿ ಮಾಡಿದರು.

'2015-16ನೇ ಸಾಲಿನಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿ 1,247ಕೋಟಿ ಅನುದಾನ ಹಂಚಿಕೆಯಾಗಿದೆ. ಈ ಅನುದಾನದಲ್ಲಿ 75ರಷ್ಟನ್ನು ಬೇರೆ-ಬೇರೆ ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗಿದೆ. ಔಷಧಿ ಖರೀದಿಗಾಗಿ 1.91 ಕೋಟಿ ಮಾತ್ರ ಬಿಡುಗಡೆಯಾಗಿದೆ. ಇಲ್ಲಿ ಯಾವುದೇ ಅಕ್ರಮ ನಡೆದಿಲ್ಲ' ಎಂದು ಸಚಿವರು ಸ್ಪಷ್ಟಪಡಿಸಿದರು.

ಆರೋಪವೇನು? : ಬೆಂಗಳೂರಿನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ್ದ ಎನ್‌.ಆರ್.ರಮೇಶ್ ಅವರು, 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧ್ಯಕ್ಷರಾಗಿರುವ ರಾಜ್ಯ ಆರೋಗ್ಯ ಅಭಿಯಾನ ಮಂಡಳಿಯಿಂದ ಔಷಧಿ ಖರೀದಿ ಮಾಡಿದ ಹಾಗೂ ಆರೋಗ್ಯ ಸೇವೆ ಒದಗಿಸಿದ ಹೆಸರಿನಲ್ಲಿ ವಂಚನೆ ಮಾಡಲಾಗಿದೆ' ಎಂದು ಆರೋಪಿಸಿದ್ದರು.

ಕೇಂದ್ರ ಸರ್ಕಾರ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ರಾಜ್ಯಕ್ಕೆ ಕಳೆದ ವರ್ಷ 1,463 ಕೋಟಿ ಅನುದಾನ ನೀಡಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಮುಂತಾದ ಕಡೆ ರೋಗಿಗಳಿಗೆ ಚಿಕಿತ್ಸಾ ಸಾಮಾಗ್ರಿ ಮತ್ತು ಔಷಧಿಗೆ ವೆಚ್ಚ ಮಾಡಬೇಕಿದ್ದ ಹಣವನ್ನು ದುರ್ಬಳಕೆ ಮಾಡಲಾಗಿದೆ' ಎಂದು ದೂರಿದ್ದರು.

English summary
Karnataka health minister U.T.Khader denied the allegation of scam in drug purchase. Minister said white paper will be released soon regarding drug purchase.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X