ಬಾಗಲಕೋಟೆ: ಮಕ್ಕಳ ಆರೋಗ್ಯ ಕೆಡಿಸಿದ ಶನಿವಾರದ ಬಿಸಿಯೂಟ
ಬಾಗಲಕೋಟೆ, ನವೆಂಬರ್. 21: ತಾಲೂಕಿನ ಬೊಮ್ಮಣಗಿ ಶಾಲೆಯಲ್ಲಿ ಶನಿವಾರ ಮಧ್ಯಾಹ್ನದ ಬಿಸಿಯೂಟ ಸೇವನೆ ಮಾಡಿದ 25 ಮಕ್ಕಳು ಅಸ್ವಸ್ಥರಾಗಿದ್ದಾರೆ. ಮಕ್ಕಳನ್ನು ಸಮೀಪದ ಸುತಗೊಂಡದ ಪ್ರಾಥಮಿಕ ವೈದ್ಯಕೀಯ ಕೇಂದ್ರಕ್ಕೆ ದಾಖಲಿಸಲಾಗಿದೆ.
ಮಧ್ಯಾಹ್ನದ ಬಿಸಿಯೂಟ ಸೇವಿಸದ ಮಕ್ಕಳಿಗೆ ವಾಂತಿ-ಬೇಧಿ ಕಾಣಿಸಿಕೊಂಡಿದೆ. ತಕ್ಷಣ ಎಚ್ಚೆತ್ತ ಶಾಲಾ ಶಿಕ್ಷಕರು ಮತ್ತು ಆಡಳಿತ ಮಂಡಳಿ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.[ಬೆಂಗಳೂರಲ್ಲೂ ಬಿಸಿಯೂಟ ಸೇವಿಇಸ 150 ಜನ ಅಸ್ವಸ್ಥರಾಗಿದ್ದರು]

ಆಹಾರಕ್ಕೆ ವಿಷ ಸೇರಲು ಏನು ಕಾರಣ ಎಂಬುದು ನಿಖರವಾಗಿ ಗೊತ್ತಿಲ್ಲ. ಆದರೆ ಮಕ್ಕಳ ಆರೋಗ್ಯ ಸದ್ಯಕ್ಕೆ ಸ್ಥಿರವಾಗಿದ್ದು ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.












Click it and Unblock the Notifications