ರಾಜ್ಯದ ವಿವಿಧ ಕಾರಾಗೃಹಗಳಲ್ಲಿರುವ 4916 ಕೈದಿಗಳಿಗಿದೆ ಮಾನಸಿಕ ಕಾಯಿಲೆ

ಬೆಂಗಳೂರು, ಫೆಬ್ರವರಿ 29: ರಾಜ್ಯದಲ್ಲಿ 4916 ಕೈದಿಗಳು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ ಎನ್ನುವ ವರದಿ ಬಹಿರಂಗವಾಗಿದೆ.

ರಾಜ್ಯದ ಜೈಲುಗಳಲ್ಲಿ ಒಟ್ಟು 4916 ಕೈದಿಗಳು ವಿವಿಧ ಮಾದರಿಯ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ರಾಜ್ಯ ಸರ್ಕಾರವು ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ವಕೀಲರ ವಾದವನ್ನು ಪರಿಗಣಿಸಿದ ನ್ಯಾಯಪೀಠ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಕೈದಿಗಳಿಗೆ ನೀಡಲಾಗುತ್ತಿರುವ ಚಿಕಿತ್ಸೆಯ ಕುರಿತು ಸಮಗ್ರ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿ ಏ.15ಕ್ಕೆ ವಿಚಾರಣೆಯನ್ನು ಮುಂದೂಡಿದೆ.

 ಮಾನಸಿಕ ಆರೋಗ್ಯ ಕಾಯ್ದೆ 2017

ಮಾನಸಿಕ ಆರೋಗ್ಯ ಕಾಯ್ದೆ 2017

ಮಾನಸಿಕ ಆರೋಗ್ಯ ಕಾಯ್ದೆ 2017 ಅನ್ನು ರಾಜ್ಯದಲ್ಲಿ ಸಮರ್ಪಕವಾಗಿ ಜಾರಿಗೊಳಿಸುವ ಸಂಬಂಧ ಹೈಕೋರ್ಟ್ ದಾಖಲಿಸಿಕೊಂಡಿದ್ದ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎಎಸ್ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

 ರಾಜ್ಯದ ಕಾರಾಗೃಹದಲ್ಲಿ ಸುಮಾರು 15 ಸಾವಿರ ಕೈದಿಗಳಿದ್ದಾರೆ

ರಾಜ್ಯದ ಕಾರಾಗೃಹದಲ್ಲಿ ಸುಮಾರು 15 ಸಾವಿರ ಕೈದಿಗಳಿದ್ದಾರೆ

ಸರ್ಕಾರದ ರ ವಕೀಲರು ಸಲ್ಲಿಸಿ, ರಾಜ್ಯದ ಕಾರಾಗೃಹಗಳಲ್ಲಿ ಸುಮಾರು 15 ಸಾವಿರ ಕೈದಿಗಳು ಇದ್ದಾರೆ. ಅದರಲ್ಲಿ ಒಟ್ಟು 4916ಕ್ಕೂ ಹೆಚ್ಚು ಕೈದಿಗಳು ವಿವಿಧ ಮಾದರಿಯ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಆ ಪೈಕಿ 237 ಕೈದಿಗಳು ಗಂಭೀರ ಸ್ವರೂಪದ ಅಸ್ವಸ್ಥತೆಗೆ ಒಳಗಾಗಿದ್ದಾರೆ.

 ಬೆಂಗಳೂರು ಕೇಂದ್ರ ಕಾರಾಗೃಹವೊಂದರಲ್ಲೇ 2023 ಕೈದಿಗಳು ಮಾನಸಿಕ ಅಸ್ವಸ್ಥರು

ಬೆಂಗಳೂರು ಕೇಂದ್ರ ಕಾರಾಗೃಹವೊಂದರಲ್ಲೇ 2023 ಕೈದಿಗಳು ಮಾನಸಿಕ ಅಸ್ವಸ್ಥರು

ಬೆಂಗಳೂರು ಕೇಂದ್ರ ಕಾರಾಗೃಹವೊಂದರಲ್ಲೇ 2023 ಕೈದಿಗಳು ಮಾನಸಿಕ ಅಸ್ವಸ್ಥತೆಗೆ ಒಳಗಾಗಿದ್ದಾರೆ. ಹಾಸನ ಜಿಲ್ಲಾ ಕಾರಾಗೃಹದಲ್ಲಿ 344, ಕಲಬುರಗಿಯಲ್ಲಿ 336 ಹಾಗೂ ತುಮಕೂರಿನಲ್ಲಿ 237 ಮತ್ತು ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ 235 ಕೈದಿಗಳು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

 36 ಜೈಲುಗಳಲ್ಲಿ ತಜ್ಞರ ಅಧ್ಯಯನ

36 ಜೈಲುಗಳಲ್ಲಿ ತಜ್ಞರ ಅಧ್ಯಯನ

36 ಜೈಲುಗಳಲ್ಲಿರುವ ಎಲ್ಲಾ ಕೈದಿಗಳ ಮಾನಸಿಕ ಸ್ಥಿತಿಯನ್ನು ತಜ್ಞರು ಅಧ್ಯಯನ ಮಾಡಿದ್ದಾರೆ. ಗದಗ ಮತ್ತು ಮಂಡ್ಯ ಜಿಲ್ಲೆ ಸೇರಿದಂತೆ ನಾಲ್ಕು ತಾಲೂಕು ಜೈಲುಗಳಲ್ಲಿ ಅಧ್ಯಯನ ಸದ್ಯ ಪ್ರಗತಿಯಲ್ಲಿದೆ. ಅದನ್ನೂ ಶೀಘ್ರವೇ ಪೂರ್ಣಗೊಳಿಸಲಾಗುವುದು ಎಂದು ವಕೀಲರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+