ಸಾ.ರಾ.ಮಹೇಶ್ - ಬಿಜೆಪಿ ಮುಖಂಡರ ಭೇಟಿಯ ನಂತರದ ಬೆಳವಣಿಗೆಗಳು

Recommended Video

      ಸಾ ರಾ ಮಹೇಶ್ ಹಾಗು ಬಿಜೆಪಿ ಮುಖಂಡರ ಭೇಟಿ ನಂತರ ನಡೆದಿದ್ದೇನು?

      ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಮತ್ತು ಬಿಜೆಪಿ ಮುಖಂಡರಾದ ಮುರಳೀಧರ್ ರಾವ್, ಈಶ್ವರಪ್ಪ ಭೇಟಿಯ ವಿಚಾರ, ರಾಜ್ಯ ರಾಜಕಾರಣದಲ್ಲಿ ಭಾರಿ ಸದ್ದು ಮಾಡಿರುವುದು ಒಂದು ಕಡೆಯಾದರೆ, ಬಿಜೆಪಿ ವರಿಷ್ಠರ ವಲಯದಲ್ಲೂ ತೀವ್ರ ಚರ್ಚೆಗೆ ಗುರಿಯಾಗಿದೆ.

      ಸಚಿವ ಮಹೇಶ್, ತಮ್ಮ ಸುಪರ್ದಿಯಲ್ಲಿ ಬರುವ KSTDC ವ್ಯಾಪ್ತಿಯ ಕೆ ಕೆ ಗೆಸ್ಟ್ ಹೌಸಿನಲ್ಲಿ ಇಬ್ಬರು ಬಿಜೆಪಿ ಮುಖಂಡರ ಜೊತೆ ಚರ್ಚಿಸಿದ್ದರು. ಈ ಭೇಟಿ, ನಾಡಿನೆಲ್ಲಡೆ ಭಾರೀ ಸುದ್ದಿಯಾಗುತ್ತಿದ್ದಂತೆಯೇ, ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಇದಕ್ಕೆ ಸ್ಪಷ್ಟನೆಯನ್ನು ನೀಡಿದ್ದರು.

      ಜೊತೆಗೆ, ಸಚಿವರಿಗೆ ಮುಖ್ಯಮಂತ್ರಿಗಳು ಕ್ಲಾಸ್ ತೆಗೆದುಕೊಂಡಿದ್ದರು. ಇದೊಂದು ಆಕಸ್ಮಿಕ ಭೇಟಿಯೆಂದು ಎರಡೂ ಪಕ್ಷಗಳು ಸ್ಪಷ್ಟನೆಯನ್ನು ನೀಡಿದ್ದರೂ, ಅದರ ಹಿಂದೆ ಏನಾದರೂ ರಾಜಕೀಯ ಉದ್ದೇಶವಿತ್ತಾ ಎನ್ನುವುದು ಈಗಲೂ ಚರ್ಚೆಯ ವಿಷಯವಾಗಿದೆ.

      ಈಶ್ವರಪ್ಪನವರು ಹೇಳುವ ಪ್ರಕಾರ, ಸಚಿವರನ್ನು ನಾವು ಭೇಟಿಯಾಗಿದ್ದು ಎರಡೇ ನಿಮಿಷ, ಅಷ್ಟರಲ್ಲೇ ಕ್ಯಾಮರಾ ಕಳುಹಿಸುವ ವ್ಯವಸ್ಥೆ ಮಾಡಲಾಗಿತ್ತು, ನನ್ನ ಕ್ಷೇತ್ರದ ವ್ಯಾಪ್ತಿಯ ದೇವಾಲಯದ ಅಭಿವೃದ್ದಿಗೆ ಸಂಬಂಧಿಸಿದಂತೆ ಸಚಿವ ಮಹೇಶ್ ಅವರಲ್ಲಿ ಮನವಿ ಮಾಡಿದ್ದೆ.

      ನನ್ನ ಮತ್ತು ಮಹೇಶ್ ಭೇಟಿಯ ಹಿಂದೆ ರಾಜಕೀಯ ಏನೂ ಇರಲಿಲ್ಲ, ಈಶ್ವರಪ್ಪ

      ನನ್ನ ಮತ್ತು ಮಹೇಶ್ ಭೇಟಿಯ ಹಿಂದೆ ರಾಜಕೀಯ ಏನೂ ಇರಲಿಲ್ಲ, ಈಶ್ವರಪ್ಪ

      ನನ್ನ ಮತ್ತು ಮಹೇಶ್ ಭೇಟಿಯ ಹಿಂದೆ ರಾಜಕೀಯ ಏನೂ ಇರಲಿಲ್ಲ ಎಂದು ಈಶ್ವರಪ್ಪ ಹೇಳಿದರೂ, ಆ ಎರಡು ನಿಮಿಷದ ಭೇಟಿಯನ್ನು ರಾಜ್ಯದೆಲ್ಲಡೆ ತಲುಪಿಸವಲ್ಲಿ ಯಶಸ್ವಿಯಾದ ಶಿಸ್ತುಬದ್ದ ಕಾರ್ಯತಂತ್ರ ಏನು ಎನ್ನುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

      ದೊಡ್ಡ ಸುದ್ದಿಯಾಗುವುದನ್ನು ಮೈತ್ರಿ ಪಕ್ಷಗಳಲ್ಲಿ ಒಂದು ಪಕ್ಷ ಇದನ್ನು ಬಯಸಿತ್ತು

      ದೊಡ್ಡ ಸುದ್ದಿಯಾಗುವುದನ್ನು ಮೈತ್ರಿ ಪಕ್ಷಗಳಲ್ಲಿ ಒಂದು ಪಕ್ಷ ಇದನ್ನು ಬಯಸಿತ್ತು

      ಕೆಲವೊಂದು ಮೂಲಗಳ ಪ್ರಕಾರ, ಇದು ದೊಡ್ಡ ಸುದ್ದಿಯಾಗುವುದನ್ನು ಮೈತ್ರಿ ಪಕ್ಷಗಳಲ್ಲಿ ಒಂದು ಪಕ್ಷ ಬಯಸಿತ್ತು. ಅದಕ್ಕೆ ಕಾರಣ, ಬಿಜೆಪಿಗೆ ಹೋಗಬಹುದು ಎಂದು ಹೇಳಲಾಗುತ್ತಿರುವ ಅತೃಪ್ತ ಶಾಸಕರು. ಈ ಕಾರಣಕ್ಕಾಗಿಯೇ ಅಮಿತ್ ಶಾ ಗರಂ ಆಗಿರುವುದು ಎನ್ನುವ ಸುದ್ದಿಯೂ ಇದೆ.

      ಮುರಳೀಧರ್ ರಾವ್ ಅವರನ್ನು ಹೈದರಾಬಾದ್ ಗೆ ಕಳುಹಿಸಲಾಯಿತು

      ಮುರಳೀಧರ್ ರಾವ್ ಅವರನ್ನು ಹೈದರಾಬಾದ್ ಗೆ ಕಳುಹಿಸಲಾಯಿತು

      ನಮ್ಮ ಜೊತೆಗಿರುವ ಅತೃಪ್ತ ಶಾಸಕರಿಗೆ ಈ ಭೇಟಿಯಿಂದ ಏನು ಸಂದೇಶ ರವಾನೆಯಾಗುತ್ತದೆ ಎನ್ನುವ ಕಾಮನ್ ಸೆನ್ಸ್ ಬೇಡವೇ ಎಂದು ಶಾ ಗರಂ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಅಸಲಿಗೆ, ಜೆಡಿಎಸ್ ಕೂಡಾ ಅದನ್ನೇ ಬಯಸಿದ್ದು ಎನ್ನುವ ಮಾಹಿತಿಯಿದೆ.

      ಬೆಂಗಳೂರಿನ ಶಾಸಕರನ್ನು ತನ್ನತ್ತ ಮತ್ತೆ ಸೆಳೆಯಬಹುದು ಎನ್ನುವ ಲೆಕ್ಕಾಚಾರ

      ಬೆಂಗಳೂರಿನ ಶಾಸಕರನ್ನು ತನ್ನತ್ತ ಮತ್ತೆ ಸೆಳೆಯಬಹುದು ಎನ್ನುವ ಲೆಕ್ಕಾಚಾರ

      ಅತೃಪ್ತರಲ್ಲಿ ಬಿಜೆಪಿ ಬಗ್ಗೆ ಶಂಕೆ ಮೂಡಿದರೆ, ಮಂಗಳವಾರದೊಳಗೆ ಅವರನ್ನು ಮನವೊಲಿಸಲು ಸುಲಭವಾಗುತ್ತದೆ ಎನ್ನುವುದು ಮೈತ್ರಿಪಕ್ಷಗಳ ಲೆಕ್ಕಾಚಾರ. ಜೊತೆಗೆ, ಜೆಡಿಎಸ್ ಜೊತೆ ಉತ್ತಮ ಸಂಬಂಧವಿಲ್ಲದೇ ರಾಜೀನಾಮೆ ನೀಡಿರುವ ಬೆಂಗಳೂರಿನ ಶಾಸಕರನ್ನು ತನ್ನತ್ತ ಮತ್ತೆ ಸೆಳೆಯಬಹುದು ಎನ್ನುವ ಲೆಕ್ಕಾಚಾರವೂ ಇದೆ.

      ಬುಧವಾರದ ಹೊತ್ತಿಗೆ ಮೈತ್ರಿಪಕ್ಷ ಯಶಸ್ಸನ್ನು ಕಾಣಬಹುದು

      ಬುಧವಾರದ ಹೊತ್ತಿಗೆ ಮೈತ್ರಿಪಕ್ಷ ಯಶಸ್ಸನ್ನು ಕಾಣಬಹುದು

      ಆದರೆ, ಅತೃಪ್ತರು ತಮ್ಮ ನಿಲುವಿಗೆ ಅಂಟಿಕೊಂಡಿದ್ದರಿಂದ, ಸದ್ಯದ ತಮ್ಮ ನಿರ್ಧಾರಕ್ಕೆ ಅಚಲವಾಗಿರುವುದರಿಂದ ಇವರೆಲ್ಲಾ ಸರಕಾರದ ಪರವಾಗಿ ನಿಲ್ಲುವುದು ಡೌಟು. ಆದರೂ, ರಾಜೀನಾಮೆ ನೀಡಿರುವ ಶಾಸಕರನ್ನು ಮನವೊಲಿಸುವ ಕೆಲಸವನ್ನು ಡಿ ಕೆ ಶಿವಕುಮಾರ್, ಕುಮಾರಸ್ವಾಮಿ ಮತ್ತು ಪರಮೇಶ್ವರ್ ಮಾಡುತ್ತಿರುವುದರಿಂದ, ಬುಧವಾರದ ಹೊತ್ತಿಗೆ ಮೈತ್ರಿಪಕ್ಷ ಯಶಸ್ಸನ್ನು ಕಾಣಬಹುದು ಎಂದು ಹೇಳಲಾಗುತ್ತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+