ಮಂತ್ರಾಲಯ ಮುಳುಗಡೆ ವದಂತಿ: ಮಠದ ಸ್ಪಷ್ಟನೆ ಹೀಗಿದೆ
ಮಂತ್ರಾಲಯ, ಜುಲೈ.15: ತುಂಗಭದ್ರಾ ಜಲಾಶಯದಿಂದ ಹೊರಹರಿವು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಂತ್ರಾಲಯ ಹಾಗೂ ಕರ್ನೂಲು ಜಿಲ್ಲೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಂಪಿ, ರಾಯಚೂರು ಜಿಲ್ಲೆಯ ಭಾಗಗಳಲ್ಲಿ ನದಿಯ ತಗ್ಗು ಪ್ರದೇಶಗಳಿಗೆ ಎಚ್ಚರಿಕೆ ನೀಡಲಾಗಿದೆ.
ದಕ್ಷಿಣ ಭಾರತಾದ್ಯಂತ ಅಪಾರ ಭಕ್ತರನ್ನು ಹೊದಿರುವ ರಾಘವೇಂದ್ರ ಸ್ವಾಮಿ ಮಠವು ಮಳೆಗಾಲದಲ್ಲಿ ಪ್ರವಾಹ ಭೀತಿ ಎದುರಿಸುವುದು ಸಾಮಾನ್ಯವಾಗಿದೆ. ಗುರುವಾರ ತುಂಗಭದ್ರಾ ಜಲಾಶಯಕ್ಕೆ 1.04 ಲಕ್ಷ ಕ್ಯೂಸೆಕ್ ಒಳಹರಿವು ಕಂಡುಬಂದಿದೆ ಮತ್ತು ಅಣೆಕಟ್ಟಿನಲ್ಲಿ 104 ಟಿಎಂಸಿ-ಅಡಿ ಸಾಮರ್ಥ್ಯಕ್ಕೆ ಹೋಲಿಸಿದರೆ 98.804 ಟಿಎಂಸಿ-ಅಡಿ ನೀರು ಇತ್ತು.
ತುಂಗಭದ್ರ ನದಿ ನೀರಿನ ಪರಿಣಾಮ ಜಲಾನಯನ ಪ್ರದೇಶಗಳು ಹಾನಿಗೊಳಗಾಗುವುದು ಸಾಮಾನ್ಯ. ಹೀಗಾಗಿ ಮಂತ್ರಾಲಯ ಮುಳುಗಡೆಯಾಗಿಲ್ಲ ಎಂದು ಮಠವು ತಿಳಿಸಿದೆ. ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ ಮುಂಗಾರು ಮಳೆಯು ಅಧಿಕ ಮಳೆಯನ್ನು ತರುತ್ತಿದ್ದು, ತುಂಗಭದ್ರ ನದಿ ಜಲನಯನ ಪ್ರದೇಶಗಳು ಭಾರಿ ಪರಿಣಾಮ ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಪರಿಹಾರ ಕಾರ್ಯಗಳು ನಡೆಯುತ್ತಿವೆ.

ಹೀಗಾಗಿ ಭಕ್ತಾಧಿಗಳು ಭಯಬೀಳುವ ಅಗತ್ಯವಿಲ್ಲ. ಖಂಡಿತವಾಗಿ ಅವರ ಸ್ವಾಮಿಯ ದರ್ಶನವನ್ನು ಪಡೆಯಬಹುದಾಗಿದ್ದು, ಯಾತ್ರೆಯ ಯೋಜನೆಯನ್ನು ಮುಂದುವರಿಸಬಹುದು. ಎಂದಿನಂತೆ ಸ್ವಾಮಿಯ ದರ್ಶನ, ಪ್ರಸಾದ ವ್ಯವಸ್ಥೆ ಹಾಗೂ ವಸತಿ ಸೌಲಭ್ಯಗಳು ಇರುತ್ತವೆ ಎಂದು ಮಠವು ಹೇಳಿದೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಿರಂತರವಾಗಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯದ ಎಲ್ಲಾ 30 ಕ್ರೆಸ್ಟ್ ಗೇಟ್‌ಗಳನ್ನು ತೆಗೆಯಲಾಗಿದ್ದು, 1.14 ಲಕ್ಷ ಕ್ಯೂಸೆಕ್ ಹೊರ ಹರಿವನ್ನು ಕೆಳಕ್ಕೆ ಬಿಡಲಾಗುತ್ತಿದೆ.
ಗುರುವಾರ ತುಂಗಭದ್ರಾ ಜಲಾಶಯಕ್ಕೆ 1.04 ಲಕ್ಷ ಕ್ಯೂಸೆಕ್ ಒಳಹರಿವು ಕಂಡುಬಂದಿದೆ ಮತ್ತು ಅಣೆಕಟ್ಟಿನಲ್ಲಿ 104 ಟಿಎಂಸಿ-ಅಡಿ ಸಾಮರ್ಥ್ಯಕ್ಕೆ ಹೋಲಿಸಿದರೆ 98.804 ಟಿಎಂಸಿ-ಅಡಿ ನೀರು ಇತ್ತು.

ಹೆಚ್ಚುವರಿ ನೀರನ್ನು ನದಿಯ ಕಡೆಗೆ ಮತ್ತು ಎಚ್‌ಎಲ್‌ಎಂಸಿ ಮತ್ತು ಎಲ್‌ಎಲ್‌ಸಿ ಕಾಲುವೆಗಳಿಗೆ ಮತ್ತು ವಿದ್ಯುತ್ ಉತ್ಪಾದನಾ ಘಟಕಗಳಿಗೆ ಬಿಡಲಾಗುತ್ತದೆ. ಕಳೆದ ವರ್ಷದ ಜುಲೈ ತಿಂಗಳ ಎರಡನೇ ವಾರಕ್ಕಿಂತ 50ಟಿಎಂಸಿ ಅಡಿಗೂ ಹೆಚ್ಚು ನೀರು ಸಂಗ್ರಹವಾಗಿದೆ ಎಂದು ಅಣೆಕಟ್ಟೆ ಕಾರ್ಯದರ್ಶಿ ನಾಗಮೋಹನ್ ತಿಳಿಸಿದ್ದರು. ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಮಠಾಧೀಶ ಶ್ರೀ ಸುಭುದೇಂದ್ರ ತೀರ್ಥ ಸ್ವಾಮೀಜಿ ಗುರುವಾರ ಮಠದ ಆವರಣದ ಸಮೀಪವಿರುವ ತುಂಗಭದ್ರಾ ನದಿಗೆ ಪೂಜೆ ಸಲ್ಲಿಸಿದ್ದರು.












Click it and Unblock the Notifications