ಸಾತನೂರು ಬಳಿ ಖಾಸಗಿ ಬಸ್ ಉರುಳಿ 6 ಮಂದಿ ಸಾವು

mandya-sathanur-udayaranga-private-bus-accident-6-passengers-dead
ಮಂಡ್ಯ, ಡಿ.28: ಮಂಡ್ಯ ಜಿಲ್ಲೆಯ ಸಾತನೂರು ಬಳಿ ಖಾಸಗಿ ಬಸ್ಸೊಂದು ಇಂದು ಶನಿವಾರ ಬೆಳಗ್ಗೆ 11.30ರಲ್ಲಿ ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದ ಬಳಿಕ ನಾಲೆಗೆ ಉರುಳಿ, ಆರು ಪ್ರಯಾಣಿಕರು ಮೃತಪಟ್ಟಿದ್ದಾರೆ.

ಬಸ್ಸಿನಲ್ಲಿ ಸುಮಾರು 50 ಮಂದಿಯಿದ್ದು, ಬಹುತೇಕ ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಮಂಡ್ಯ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ದ್ಯಾಪಸಂದ್ರದಿಂದ ಮಂಡ್ಯಕ್ಕೆ ಬರುತ್ತಿದ್ದ ಖಾಸಗಿ ಬಸ್ಸು (ಉದಯರಂಗ) ಸಾತನೂರು ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹಳ್ಳಕ್ಕೆ ಬಿದ್ದು ಅಪಘಾತ ಸಂಭವಿಸಿದೆ. ಮಿತಿಮೀರಿದ ವೇಗವೇ ಅಪಘಾತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಕೊಂದನಾ ಹುಲಿರಾಯರನು: ಗುಂಡ್ಲುಪೇಟೆ (ಚಾಮರಾಜನಗರ): ಬಂಡೀಪುರ ಅರಣ್ಯದಂಚಿನಲ್ಲಿ ನರಭಕ್ಷಕನ ಹಾವಳಿ ಮುಂದುವರಿದಿದ್ದು, ಹೆಬ್ಬುಲಿ ಮತ್ತೊಬ್ಬನ ರಕ್ತದ ರುಚಿ ನೋಡಿದೆ.

ಶುಕ್ರವಾರ ಬೆಳಗ್ಗೆ ಗುಂಡ್ಲುಪೇಟೆ ತಾಲೂಕಿನ ಉದ್ಯಾನದ ಮದ್ದೂರು ಅರಣ್ಯ ವಲಯದಲ್ಲಿ ಹುಲಿಯು ಮದ್ದೂರು ಕಾಲೋನಿಯ ನಿವಾಸಿ ಜವರಯ್ಯ (55) ಎಂಬವರನ್ನು ಕೊಂದು ತಿಂದಿದೆ. ಹುಲಿಗೆ ಆಹಾರವಾದ ಜವರಯ್ಯ ಬಾಲ್ಯದಿಂದಲೂ ದನಗಾಹಿಯಾಗಿದ್ದು, ಎಂದಿನಂತೆ ಶುಕ್ರವಾರ ಬೆಳಗ್ಗೆ ಜಾನುವಾರುಗಳನ್ನು ಮೇಯಿಸಲು ಮದ್ದೂರು ಅರಣ್ಯ ವಲಯದ ಕಾಡಂಚಿಗೆ ತೆರಳಿದ್ದರು.

ಗ್ರಾಮ ಹಾಗೂ ಕಾಡಿಗೂ ನಡುವೆ ಜಾನುವಾರುಗಳನ್ನು ಮೇಯಲು ಬಿಟ್ಟು, ಸ್ನೇಹಿತರೊಂದಿಗೆ ಕುಳಿತಿದ್ದರು. ಈ ವೇಳೆ ಏಕಾಏಕಿ ದಾಳಿ ನಡೆಸಿದ್ದು, ಆತನನ್ನು ಕಾಡಿನೊಳಗೆ ಎಳೆದುಕೊಂಡು ಹೋಗಿದೆ. ಇದರೊಂದಿಗೆ ಅರಣ್ಯ ಇಲಾಖೆ ಸೆರೆ ಹಿಡಿದ ಹುಲಿ ನರಭಕ್ಷಕ ಆಗಿರಲಾರದು. ನಿಜವಾದ ನರಭಕ್ಷಕ ಹುಲಿ ಅರಣ್ಯದಲ್ಲಿ ಈಗಲೂ ಸ್ವತಂತ್ರ್ಯವಾಗಿ ಓಡಾಡಿಕೊಂಡಿದೆಯೇ ಎಂಬ ಶಂಕೆಗೆ ಕಾರಣವಾಗಿದೆ.

ತಿಂಗಳ ಹಿಂದೆಯಷ್ಟೇ ಮೂವರನ್ನು ನರಭಕ್ಷಕ ಕೊಂದ ಘಟನೆ ಮಾಸುವ ಮುನ್ನ ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಮತ್ತೆ ಹುಲಿಯ ಕಾಟ ಆರಂಭಗೊಂಡಿದೆ. ಬಂಡೀಪುರ ಅರಣ್ಯದಂಚಿನಲ್ಲಿಯೇ ತಿಂಗಳ ಅಂತರದಲ್ಲಿ ಹುಲಿ ಬಾಯಿಗೆ ಸಿಲುಕಿದವರ ಸಂಖ್ಯೆ ನಾಲ್ಕಕ್ಕೆ ಏರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+