ಮಂಡ್ಯ : ಕಾವೇರಿ ತೀರದಲ್ಲಿ ಕಾಮುಕನಿಗೆ ಚಪ್ಪಲಿ ಸೇವೆ

ಮಂಡ್ಯ, ಮಾ.8 : ಯುವತಿ ಬಟ್ಟೆ ಬದಲಾಯಿಸುವ ದೃಶ್ಯವನ್ನು ಕದ್ದು ಚಿತ್ರೀಕರಿಸುತ್ತಿದ್ದ ಕಾಮುಕನಿಗೆ ಯುವತಿ ಚಪ್ಪಲಿ ಸೇವೆ ಮಾಡಿದ ಘಟನೆ ಶ್ರೀರಂಗಪಟ್ಟಣದಲ್ಲಿ ನಡೆದಿದೆ. ಯವತಿ ಮತ್ತು ಪೋಷಕರು ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಿಲ್ಲ.

ಶನಿವಾರ ಬೆಂಗಳೂರಿನ ಯುವತಿಯರ ತಂಡ ಶ್ರೀರಂಗಪಟ್ಟಣದ ಸಂಗಮದಲ್ಲಿ ಪ್ರವಾಸಕ್ಕೆಂದು ಬಂದಿದ್ದರು. ಈ ವೇಳೆ ನೀರಿನಲ್ಲಿ ಸ್ನಾನ ಮಾಡಿನ ನಂತರ ಯುವತಿಯ ಬಟ್ಟೆ ಬದಲಾಯಿಸಲು ಸ್ನಾನ ಗೃಹದತ್ತ ಬಂದಿದ್ದಳು. ಆಗ ಯುವಕ ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿಯಲು ಪ್ರಯತ್ನಿಸುತ್ತಿದ್ದ.

mandya

ಯುವಕನನ್ನು ನೋಡಿದ ಯುವತಿ ತಕ್ಷಣ ಸ್ಥಳೀಯರ ಸಹಕಾರದಿಂದ ಆತನನ್ನು ಸೆರೆ ಹಿಡಿದಿದ್ದಾಳೆ. ನಂತರ ಚಪ್ಪಲಿ ತೆಗೆದುಕೊಂಡ ಯುವತಿ ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾಳೆ, ಸ್ಥಳೀಯರು ಆತನಿಗೆ ಸರಿಯಾಗಿಯೇ ಗೂಸಾ ಕೊಟ್ಟಿದ್ದಾರೆ.

ಯುವಕ ಎಲ್ಲಿಯವನು? ಎಂಬ ಮಾಹಿತಿ ಲಭ್ಯವಾಗಿಲ್ಲ. ಯುವತಿಯರ ತಂಡ ಆತನಿಗೆ ಥಳಿಸಿ ಅಲ್ಲಿಂದ ತೆರಳಿದ್ದಾರೆ. ಯುವತಿ ಮತ್ತು ಸ್ಥಳೀಯರು ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಿಲ್ಲ. [ಬೆಂಗಳೂರು: ಪುಂಡನಿಗೆ ಒದ್ದ ಯುವತಿ, ವಿಡಿಯೋ ನೋಡಿ]

ಅಂತರಾಷ್ಟ್ರೀಯ ಮಹಿಳಾ ದಿನವಾದ ಭಾನುವಾರ ಯುವತಿ ಚಪ್ಪಲಿ ಸೇವೆ ಮಾಡುವ ವಿಡಿಯೋ ಮಾಧ್ಯಮಗಳಿಗೆ ಲಭ್ಯವಾಗಿದೆ. ಕಾವೇರಿ ನದಿ ತೀರದಲ್ಲಿ ಕಾಮುಕರಿಗೆ ಯುವತಿ ಚೆನ್ನಾಗಿ ಬುದ್ಧಿ ಕಲಿಸಿದ್ದಾಳೆ. [ಚಿತ್ರ, ವಿಡಿಯೋ : ಪಬ್ಲಿಕ್ ಟಿವಿ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+