ಡಿನ್ನರ್ ವಿಚಾರ : ಚಲುವರಾಯಸ್ವಾಮಿ, ದಿನೇಶ್ ಗುಂಡೂರಾವ್ ಭೇಟಿ

Recommended Video

      Mandya: ದಿನೇಶ್ ಗುಂಡೂ ರಾವ್ ರನ್ನ ಭೇಟಿ ಮಾಡಿದ ಎನ್ ಚಲುವರಾಯಸ್ವಾಮಿ

      ಬೆಂಗಳೂರು, ಮೇ 03 : ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಜೊತೆ ಕಾಂಗ್ರೆಸ್ ನಾಯಕರು ಔತಣ ನಡೆಸಿದ ಬಗ್ಗೆ ಬಾರಿ ಚರ್ಚೆ ನಡೆಯುತ್ತಿದೆ. ಈ ವಿಚಾರ ಈಗ ಕೆಪಿಸಿಸಿ ಕಚೇರಿಯನ್ನು ತಲುಪಿದೆ.

      ಶುಕ್ರವಾರ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಚಲುವರಾಯಸ್ವಾಮಿ ಅವರು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಮಾಡಿದರು. ಕೆಪಿಸಿಸಿ ಅಧ್ಯಕ್ಷರ ಸೂಚನೆಯಂತೆ ಈ ಭೇಟಿ ನಡೆಯಿತು. ಸಚಿವ ಜಮೀರ್ ಅಹಮದ್ ಖಾನ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

      ಸುಮಲತಾ ಜೊತೆಗಿನ ಔತಣಕೂಟದಲ್ಲಿ ಎನ್.ಚಲುವರಾಯಸ್ವಾಮಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಪಾಲ್ಗೊಂಡಿದ್ದರು. ಈ ಔತಣಕೂಟದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

      ಮಂಡ್ಯದ ಕಾಂಗ್ರೆಸ್ ನಾಯಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ. ಕೆಪಿಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿದ ಚಲುವರಾಯಸ್ವಾಮಿ ಅವರು ಔತಣಕೂಟದ ಬಗ್ಗೆ ವಿವರಣೆ ನೀಡಿದರು. ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದರು....

      ಏಕಿಷ್ಟು ಮಹತ್ವ ತಿಳಿದಿಲ್ಲ

      ಏಕಿಷ್ಟು ಮಹತ್ವ ತಿಳಿದಿಲ್ಲ

      ದಿನೇಶ್ ಗುಂಡೂರಾವ್ ಅವರ ಭೇಟಿ ಬಳಿಕ ಮಾತನಾಡಿದ ಚಲುವರಾಯಸ್ವಾಮಿ ಅವರು, 'ಊಟದ ವಿಚಾರಕ್ಕೆ ಏಕೆ ಎಷ್ಟು ಮಹತ್ವ ಎಂದು ತಿಳಿದಿಲ್ಲ. ನಾವು ಏನು ಹೇಳಬೇಕೋ ಅದನ್ನು ಹೇಳಿದ್ದೇವೆ.
      ವಿಡಿಯೋ ರಿಲೀಸ್ ಬಗ್ಗೆ ಚರ್ಚೆ ನಡೆದಿದೆ' ಎಂದು ಚಲುವರಾಯಸ್ವಾಮಿ ಹೇಳಿದರು.

      ಜೆಡಿಎಸ್‌ನಿಂದ ದೂರವಾಗಿದ್ದೇವೆ

      ಜೆಡಿಎಸ್‌ನಿಂದ ದೂರವಾಗಿದ್ದೇವೆ

      'ನಾವು ಚುನಾವಣೆ ಮುಗಿದ ಮೇಲೆ ಭೇಟಿ ಮಾಡಿದ್ದೇವೆ. ಹಿಂದಿನಿಂದಲೂ ನಾವು ಜೆಡಿಎಸ್‌ನಿಂದ ದೂರ ಉಳಿದಿದ್ದೇವೆ. ಅದನ್ನೂ ಪಕ್ಷದ ನಾಯಕರಿಗೆ ತಿಳಿಸಿದ್ದೇವೆ. ಅದು ಪಕ್ಷ ವಿರೋಧಿ ಚಟುವಟಿಕೆ ಹೇಗೆ ಆಗುತ್ತದೆ?' ಎಂದು ಚಲುವರಾಯಸ್ವಾಮಿ ಪ್ರಶ್ನಿಸಿದರು.

      ಊಟಕ್ಕೆ ನಾನು ಹೋಗುತ್ತಿದ್ದೆ

      ಊಟಕ್ಕೆ ನಾನು ಹೋಗುತ್ತಿದ್ದೆ

      ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಜಮೀರ್ ಅಹಮದ್ ಖಾನ್ ಅವರು, 'ಊಟಕ್ಕೆ ಕರೆದಿದ್ದರೆ ನಾನು ಹೋಗುತ್ತಿದ್ದೆ. ಊಟಕ್ಕೆ ಹೋಗಿದ್ದರಲ್ಲಿ ತಪ್ಫೇನಿದೆ?. ಮಂಡ್ಯ ಕಾಂಗ್ರೆಸ್ ನಾಯರಕ ವಿರುದ್ಧ ಕ್ರಮದ ಪ್ರಶ್ನೆಯೇ ಇಲ್ಲ' ಎಂದು ಹೇಳಿದರು.

      ಔತಣ ಕೂಟ ವಿವಾದ

      ಔತಣ ಕೂಟ ವಿವಾದ

      ಸುಮಲತಾ ಅಂಬರೀಶ್ ಅವರು ಏಪ್ರಿಲ್ 30ರಂದು ಆಯೋಜನೆ ಮಾಡಿದ್ದ ಔತಣಕೂಟದಲ್ಲಿ ಮಾಜಿ ಸಚಿವರಾದ ಚಲುವರಾಯಸ್ವಾಮಿ, ನರೇಂದ್ರ ಸ್ವಾಮಿ, ಮಳವಳ್ಳಿ ಶಿವಣ್ಣ, ರಘುವೀರ್ ಗೌಡ, ಮಾಗಡಿ ಬಾಲಕೃಷ್ಣ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು. ಈ ವಿಚಾರದ ಬಗ್ಗೆ ಈಗ ಬಾರಿ ಚರ್ಚೆ ನಡೆಯುತ್ತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+