• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿದೇಶದಿಂದ ಕರ್ನಾಟಕಕ್ಕೆ ಬಂದವರಿಗೆ ಕಡ್ಡಾಯ ಕ್ವಾರಂಟೈನ್

|

ಬೆಂಗಳೂರು, ಮೇ 04 : ವಿದೇಶದಲ್ಲಿರುವ ಭಾರತೀಯರನ್ನು ಕರೆತರುವ ಪ್ರಕ್ರಿಯೆ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ತವರಿಗೆ ಬರುವವರಿಗೆ ಕ್ವಾರಂಟೈನ್‌ ಕಡ್ಡಾಯವಾಗಿದೆ. ವಿದೇಶದಿಂದ ಬಂದವರಿಂದ ಸೋಂಕು ಹರಡದಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ.

   ಜನರ ಕಷ್ಟ ಕೇಳಲು ಮೆಜೆಸ್ಟಿಕ್ ನಲ್ಲಿ ಕೆಂಪು ಬಸ್ ಹತ್ತಿದ ಸಿದ್ದರಾಮಯ್ಯ, DK ಶಿವಕುಮಾರ್ | DK Shivakumar

   ವಿದೇಶದಿಂದ ಬಂದವರು ಹೋಟೆಲ್ ಅಥವ ಹಾಸ್ಟೆಲ್‌ಗಳಲ್ಲಿ ಕಡ್ಡಾಯವಾಗಿ ಕ್ವಾರಂಟೈನ್‌ನಲ್ಲಿರಬೇಕು. ಕೊರೊನಾದ ಯಾವುದೇ ಲಕ್ಷಣಗಳು ಇಲ್ಲವಾದರೂ ಸರ್ಕಾರ ಸೂಚಿಸುವ ಸ್ಥಳದಲ್ಲಿ ಕ್ವಾರಂಟೈನ್‌ನಲ್ಲಿರುವುದು ಕಡ್ಡಾಯ.

   ದುಬೈನಿಂದ ಭಾರತಕ್ಕೆ ವಾಪಸ್ ಆಗಲು ನೋಂದಣಿ ಆರಂಭ

   ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿದೇಶದಿಂದ ಬಂದವರಿಗೆ ಕ್ವಾರಂಟೈನ್ ಕಡ್ಡಾಯಗೊಳಿದೆ. ಆದರೆ, ಎಷ್ಟು ದಿನದ ಕ್ವಾರಂಟೈನ್ ಎಂದು ನಿಗದಿ ಮಾಡಿಲ್ಲ. ಹಿಂದೆ ವಿದೇಶದಿಂದ ಬಂದವರಿಗೆ ಯಾವುದೇ ಲಕ್ಷಣಗಳು ಇಲ್ಲದಿದ್ದರೆ ಹೋಂ ಕ್ವಾರಂಟೈನ್‌ಗೆ ಸೂಚಿಸಲಾಗುತ್ತಿತ್ತು.

   ಕೇರಳ; ಐಸೋಲೇಷನ್ ವಾರ್ಡ್‌ ಆಗಲಿವೆ ಬೋಟ್‌ ಹೌಸ್‌

   ಆದರೆ, ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿ ತಿರುಗಾಡುವ ಪ್ರಕರಣಗಳು ವರದಿಯಾಗಿದ್ದವು. ಆದ್ದರಿಂದ, ನಿಯಮವನ್ನು ಬದಲಾವಣೆ ಮಾಡಲಾಗಿದೆ. ಹಾಗಾಗಿ ಈ ಬಾರಿ ವಿದೇಶದಿಂದ ಬಂದವರಿಗೆ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿದೆ.

   ಕೇರಳಕ್ಕೆ ವಾಪಸ್ ಆಗಲು 1 ಲಕ್ಷ ಜನರ ನೋಂದಣಿ

   ವಿದೇಶದಿಂದ ಬಂದ ಪ್ರಯಾಣಿಕರನ್ನು ಎ, ಬಿ, ಸಿ ಎಂದು ಮೂರು ಭಾಗ ಮಾಡಲಾಗುತ್ತದೆ. ಸೋಂಕಿನ ಲಕ್ಷಣಗಳು ಇದ್ದರೆ ಐಸೋಲೇಷನ್ ವಾರ್ಡ್‌ಗೆ ಹಾಕಲಾಗುತ್ತದೆ. ಬಿ ಮತ್ತು ಸಿ ವಿಭಾಗದಲ್ಲಿ ಇರುವವರನ್ನು ಕ್ವಾರಂಟೈನ್‌ಗೆ ಕಳಿಸಲಾಗುತ್ತದೆ.

   ಕರ್ನಾಟಕ ಸರ್ಕಾರ 10,800 ಜನರು ಆಗಮಿಸಬಹುದು ಎಂದು ಅಂದಾಜಿಸಿದೆ. ಆದರೆ, ಕೇಂದ್ರ ಸರ್ಕಾರ ವಿದೇಶಿಯರನ್ನು ಕರೆತರಲು ಮಾರ್ಗಸೂಚಿ ಸಿದ್ಧಪಡಿಸಲಿದೆ. ಬಳಿಕ ಈ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯೂ ಇದೆ.

   English summary
   Karnataka health department issued order that mandatory quarantine for foreign returnees to state. Government estimates there are about 10,800 people waiting to return Karnataka.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X