ವೈರಲ್ ವಿಡಿಯೋ; ಕೊರೊನಾ, ಕೊರೊನಾ 20 ರೂ.ಗೆ ಕೊರೊನಾ!

ಬೆಂಗಳೂರು, ಮಾರ್ಚ್ 12 : ಕೊರೊನಾ ಭಾರತ ಸೇರಿದಂತೆ ವಿಶ್ವದ ವಿವಿಧ ದೇಶಗಳಲ್ಲಿ ಆತಂಕ ಸೃಷ್ಟಿ ಮಾಡಿದೆ. ಮಾರಣಾಂತಿಕ ವೈರಸ್‌ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 4,634ಕ್ಕೆ ಏರಿಕೆಯಾಗಿದೆ. ವಿವಿಧ ದೇಶಗಳಲ್ಲಿ ಸೋಂಕು ಪೀಡಿತತ ಸಂಖ್ಯೆ ಹೆಚ್ಚುತ್ತಲೇ ಇದೆ.

Recommended Video

      Man selling mask in the name of Corona | Corona 20 Rs/- | Oneindia Kannada

      ಕೊರೊನಾ ಹೆಸರು ಕೇಳಿದ ಕೂಡಲೇ ನೆನಪಾಗುವುದು ಮಾಸ್ಕ್. ಹೌದು, ಕೊರೊನಾ ವೈರಸ್ ಪತ್ತೆಯಾದ ಮೇಲೆ ಜನರು ಮಾಸ್ಕ್‌ಗಳ ಮೊರೆ ಹೋಗಿದ್ದಾರೆ. ಮಾರುಕಟ್ಟೆಯಲ್ಲಿ ಮಾಸ್ಕ್‌ಗಳ ಬೆಲೆಗಳು ಏರಿಕೆಯಾಗಿವೆ. ವಿವಿಧ ಮಾದರಿಯ, ವಿವಿಧ ದರಗಳ ಮಾಸ್ಕ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

      ವ್ಯಕ್ತಿಯೊಬ್ಬ ಮಾರುಕಟ್ಟೆಯಲ್ಲಿ ಕೊರೊನಾ ಹೆಸರು ಹೇಳಿ ಮಾಸ್ಕ್ ಮಾರಾಟ ಮಾಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾಸ್ಕ್ ತೆಗೆದುಕೊಳ್ಳಿ ಎಂದು ಆತ ಹೇಳದೇ ಕೊರೊನಾ ಕೊರೊನಾ ಬೀಸ್ ರೂಪಾಯಿ ಕೊರೊನಾ ಎಂದು ಮಾಸ್ಕ್ ಮಾರಾಟ ಮಾಡುತ್ತಿದ್ದಾನೆ.

      Viral Video Demand For Mask After Corona Case Found In Karnataka

      ಜನರಿಗೆ ಮಾಸ್ಕ್ ನೀಡಿ 20 ರೂ. ಪಡೆದು ಬೋಣಿಗೆ ಆಯಿತು ಎಂದು ಮಾಸ್ಕ್‌ಗೆ ನಮಸ್ಕರಿಸಿ ಪುನಃ ಕೊರೊನಾ ಕೊರೊನಾ ಬೀಸ್ ರೂಪಾಯಿ ಕೊರೊನಾ ಎಂದು ಮಾಸ್ಕ್ ಮಾರುತ್ತಿದ್ದಾನೆ. ಈ ವಿಡಿಯೋ ಎಲ್ಲಿಯದು ಎಂಬುದು ತಿಳಿದು ಬಂದಿಲ್ಲ, ಆದರೆ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

      Security Check Required

      null

      ಮಾರಣಾಂತಿಕ ಕೊರೊನಾ ವೈರಸ್ ಮೊದಲು ಚೀನಾದಲ್ಲಿ ಪತ್ತೆಯಾಗಿತ್ತು. ಇದುವರೆಗೂ ಅಲ್ಲಿ 80,796 ಪ್ರಕರಣಗಳು ದೃಢಪಟ್ಟಿವೆ. 3169 ಜನರು ಮೃತಪಟ್ಟಿದ್ದಾರೆ. ಇಟಲಿಯಲ್ಲಿ 827, ಇರಾನ್‌ನಲ್ಲಿ 354, ದಕ್ಷಿಣ ಕೊರಿಯಾದಲ್ಲಿ 66 ಜನರು ಮೃತಪಟ್ಟಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+