ಅಪ್ಪನಿಗೆ ಸಾಲ ಕೊಟ್ಟು ಮಗಳ ಮೇಲೆ ವಿಕೃತಿ ಮೆರೆದ !
ರಾಜ್ಯದವೇ ಬೆಚ್ಚಿಬೀಳುವ ಘಟನೆಯೊಂದು ನಡೆದಿದೆ. ತಂದೆ ಪಡೆದ ಸಾಲಕ್ಕೆ ಮಗಳ ಮೇಲೆ ಸಾಲನೀಡಿದವನೊಬ್ಬ ಅತ್ಯಂತ ದೊಡ್ಡ ವಿಕೃತಿಯನ್ನೇ ಮೆರೆದಿದ್ದಾರೆ. ಈ ವಿಷಯ ಕೇಳುವುದಕ್ಕೆ ಸಂಕಟವಾಗುವಂತಿದೆ. ಸಾಲ ನೀಡುವುದು, ಆ ಸಾಲ ಮರು ಪಾವತಿಯಾಗದೆ ಇದ್ದಾಗ ಸಾಲ ಪಡೆದವನನ್ನು ಬೈಯುವುದು ಅಥವಾ ಕೋಪ ಮಾಡಿಕೊಳ್ಳುವುದರಲ್ಲಿ ಅರ್ಥವಿದೆ ಎನ್ನಬಹುದೇನೋ. ಆದರೆ, ತಂದೆ ಪಡೆದ ಸಾಲಕ್ಕೆ ಇಲ್ಲೊಬ್ಬ ವಿಕೃತ ಸಾಲ ನೀಡಿದವನು, ಸಾಲಗರನ ಮಗಳ ಮೇಲೆ ವಿಕೃತಿ ಮೆರೆದಿದ್ದಾನೆ.
ಕೈಸಾಲ ಪಡೆದುಕೊಳ್ಳುವುದು ಮತ್ತು ಅದನ್ನು ಹಿಂದಿರುಗಿಸುವುದು ಸಾಮಾನ್ಯ ಸಂಗತಿ. ಕೆಲವೊಮ್ಮೆ ಈ ರೀತಿ ಸಾಲ ಪಡೆದುಕೊಂಡಾಗ ಅದನ್ನು ಹಿಂದಿರುಗಿಸುವುದು ತುಸು ತಡವೂ ಆಗಬಹುದು. ಹೆಚ್ಚೆಂದರೆ ಇದಕ್ಕೆ ಬೈಯಬಹುದು. ತೀರ ಅತಿ ಎನಿಸಿದರೆ ಕೈ - ಕೈ ಮಾಡಿಕೊಳ್ಳುವ ಹಂತಕ್ಕೂ ಇದು ಹೋಗಬಹುದು. ಆದರೆ, ಇಲ್ಲೊಬ್ಬ ಕೇವಲ 30,000 ಸಾವಿರ ರೂಪಾಯಿ ಸಾಲಕ್ಕಾಗಿ ಸಾಲ ಪಡೆದುಕೊಂಡಿದ್ದವನ ಮಗಳ ಮೇಲೆ ಅತ್ಯಾಚಾರವನ್ನೇ ಮಾಡಿದ್ದಾನೆ. ಅದು ಸಹ ಹಲವು ಬಾರಿ ಎನ್ನುವ ಆಘಾತಕಾರಿ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ.

ನಿಮ್ಮಪ್ಪನಿಗೆ ಸಾಲ ಕೊಟ್ಟಿದ್ದೆ. ವಾಪಸ್ ಕೊಡೋಕೆ ಹೇಳು ಎಂದು ಸಾಲ ಕೇಳಿಕೊಂಡು ಬರುತ್ತಿದ್ದ ಸಾಲ ನೀಡಿದನು, ಸಾಲಗಾರನ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ನಿರಂತರ ಅತ್ಯಾಚಾರ ಮಾಡಿದ್ದಾನೆ. ಈ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ತಂದೆಯ ಸಾಲಕ್ಕಾ ಮಗಳನ್ನು ಬಲಿಪಶು ಪಡೆಯಲಾಗಿದೆ. ಕೇವಲ 30 ಸಾವಿರ ರೂಪಾಯಿಗಾಗಿ ಸಣ್ಣ ಹುಡುಗಿಯ ಜೀವನವೇ ಹಾಳಾಗಿದೆ. 17 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಎಸಗಲಾಗಿದೆ. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಹಿನ್ನೆಲೆ ಏನು: ಆರೋಪಿ ರವಿಕುಮಾರ್ ಎನ್ನುವವನು ವ್ಯಕ್ತಿಯೊಬ್ಬನಿಗೆ 70 ಸಾವಿರ ರೂಪಾಯಿ ಸಾಲ ನೀಡಿದ್ದಾನೆ ಎಂದು ಹೇಳಲಾಗಿದೆ. ಈ ಸಾಲವನ್ನು ವಸೂಲಿ ಮಾಡುವುದಕ್ಕೆ ಸಾಲಗಾರನ ಮನೆಗೆ ಹೋಗುತ್ತಿದ್ದ. ಆದರೆ, ದಿನಕಳೆದಂತೆ ಇದನ್ನೇ ಕೆಟ್ಟದಾಗಿ ಬಳಸಿಕೊಂಡಿರುವ ವ್ಯಕ್ತಿ ಅಪ್ರಾಪ್ತೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಸಾಲ ಕೊಟ್ಟಿದ್ದೀನಿ ನಿಂಗೂ ಗೊತ್ತಲ್ವಾ ಅಂತ ಹೇಳಿ ಆಕೆಯೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾನೆ. ಸಾಲಗಾರನ ಮಗಳ ಮೈಮುಟ್ಟಿ ಕೆಟ್ಟ ರೀತಿಯಲ್ಲಿ ವರ್ತಿಸಿದ್ದಾನೆ.
ಅಲ್ಲದೇ ಈ ವಿಷಯವನ್ನು ನಿಮ್ಮ ಅಪ್ಪ ಇಲ್ಲ ಮನೆಯಲ್ಲಿ ಬೇರೆ ಯಾರಿಗಾದರೂ ಹೇಳಿದರೆ, ಹುಷಾರ್ ಎಂದು ಬೆದರಿಸಿದ್ದಾನೆ. ಅಲ್ಲದೇ ಸಾಲ ತೆಗೆದುಕೊಂಡಿರುವ ನಿಮ್ಮ ಅಪ್ಪನಿಗೆ ಕಷ್ಟ ಕೊಡ್ತೀನಿ, ಅವಮಾನಿಸ್ತೀನಿ ಎಂದೂ ಬೆದರಿಸಿದ್ದಾನೆ ಎಂದು ಹೇಳಲಾಗಿದೆ. ಇದನ್ನು ಕೇಳಿಸಿಕೊಂಡ ಹುಡುಗಿ ಭಯ ಬಿದ್ದು, ಏನು ನಡೆದರೂ ವಿಷಯವನ್ನು ಮನೆಯವರಿಗೆ ಹೇಳಿಲ್ಲ ಎನ್ನಲಾಗಿದೆ.
ವಿಡಿಯೋ ಮಾಡಿಕೊಂಡು ಬೆದರಿಕೆ: ಇನ್ನು ಅಪ್ರಾಪ್ತ ಹುಡುಗಿಯೊಂದಿಗೆ ಕೆಟ್ಟದಾಗಿ ವರ್ತಿಸಿ ಹಾಗೂ ಅತ್ಯಾಚಾರ ಮಾಡಿರುವ ವ್ಯಕ್ತಿ. ಬಾಲಕಿ ಮುತ್ತಿಟ್ಟಿರುವ ದೃಶ್ಯಗಳನ್ನು ಪೋಟೋ ಹಾಗೂ ವಿಡಿಯೋ ಮಾಡಿಕೊಂಡಿದ್ದಾನೆ. ಇದನ್ನು ಎಲ್ಲರಿಗೂ ತೋರಿಸುತ್ತೇನೆ. ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತೇನೆ ಎಂದು ಬೆದರಿಸಿದ್ದಾನೆ ಎನ್ನಲಾಗಿದೆ.
ಇನ್ನು ಬಾಲಕಿಯ ತಂದೆ ಆ ವ್ಯಕ್ತಿಯಿಂದ 70 ಸಾವಿರ ರೂಪಾಯಿ ಸಾಲ ತೆಗೆದುಕೊಂಡಿದ್ದು. ಈಗಾಗಲೇ 40 ಸಾವಿರ ರೂಪಾಯಿ ಹಣವನ್ನು ಹಿಂದಿರುಗಿಸಿದ್ದಾರೆ ಎಂದು ಹೇಳಲಾಗಿದೆ. ಇನ್ನು ಕೇವಲ 30 ಸಾವಿರ ರೂಪಾಯಿ ಮಾತ್ರ ಬಾಕಿ ಉಳಿದಿತ್ತು ಎನ್ನಲಾಗಿದೆ. ಈ ನಡುವೆ ಸಾಲ ನೀಡಿದವ ಈ ರೀತಿ ವಿಕೃತಿ ಮೆರೆದಿದ್ದಾನೆ. ಆರೋಪಿಯನ್ನು ಬಂಧಿಸಾಲಾಗಿದ್ದು, ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.












Click it and Unblock the Notifications