ಮಂ ವಿಮಾನದಲ್ಲಿ ಲೈಂಗಿಕ ಕಿರುಕುಳ: ಆರೋಪಿಗೆ ಜೈಲು

Malaysian student alleges sexual harassment on Bangalore-Mangalore flight
ಮಂಗಳೂರು, ಜ.29: ನಿನ್ನೆ ಮಂಗಳವಾರ ಬೆಳಗ್ಗೆ ಬೆಂಗಳೂರಿನಿಂದ ಬಂದ ವಿಮಾನದಲ್ಲಿ ವಿದೇಶಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಯುವಕನನ್ನು 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

* ಆರೋಪಿ ಅಂಕುರ್ ಕುಮಾರ್ ಅಗರವಾಲ್. 36 ವರ್ಷದ ಅಂಕುರ್ ಬೆಂಗಳೂರು ಕೋರಮಂಗಲದ ಎಚ್ಎಸ್ಆರ್ ಲೇಔಟಿನ ನಿವಾಸಿ.
* ಪ್ರಯಾಣ ಸಂದರ್ಭದಲ್ಲಿ ತಾನು ನಿದ್ದೆಯಲ್ಲಿದ್ದೆ. ಆಗ ಏನಾಯಿತೋ ನನಗೆ ತಿಳಿಯದಾಗಿದೆ ಎಂದು ಭದ್ರತಾ ಸಿಬ್ಬಂದಿಗೆ ತಿಳಿಸಿದ್ದಾನೆ.
* ವಿದ್ಯಾರ್ಥಿನಿ ದೇರಳಕಟ್ಟೆಯ ಖಾಸಗಿ ವೈದ್ಯಕೀಯ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿನಿ.

ಮಂಗಳವಾರದ ಸುದ್ದಿ: ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ವಿದೇಶಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ವರದಿಯಾಗಿದೆ. ಇಂದು ಮಂಗಳವಾರ ಬೆಂಗಳೂರು-ಮಂಗಳೂರು ಜೆಟ್ ಏರ್ ವೇಸ್ ವಿಮಾನದಲ್ಲಿ ಈ ಘಟನೆ ನಡೆದಿದೆ.

ಬಾಧಿತ ವಿದೇಶಿ (ಮಲೇಷ್ಯಾದವರು) ವಿದ್ಯಾರ್ಥಿನಿ ಮಂಗಳೂರಿನ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪಂಜಾಬ್ ಮೂಲದ ವ್ಯಕ್ತಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆಕೆ ದೂರಿದ್ದಾರೆ.

ಮಂಗಳೂರು ನಿಲ್ದಾಣದಲ್ಲಿ ಮಂಗಳವಾರ ಬೆಳಗ್ಗೆ 8.30ಕ್ಕೆ ವಿಮಾನ ಬಂದಿಳಿಯುತ್ತಿದ್ದಂತೆ ಆರೋಪಿ ಪ್ರಯಾಣಿಕ ವಿಮಾನದಿಂದಿಳಿದು ಕಾವೂರು ಕಡೆಗೆ ಹೊರಟುಹೋದರು. ಆದರೆ ತಾನು ಜೆಟ್ ಏರ್ ವೇಸ್ ಸಿಬ್ಬಂದಿಯನ್ನು ಭೇಟಿ ಮಾಡಿ, ಪ್ರಕರಣವನ್ನು ಅವರ ಗಮನಕ್ಕೆ ತಂದಿದ್ದಾಗಿ ಬಾಧಿತ ವಿದ್ಯಾರ್ಥಿನಿ ತಿಳಿಸಿದ್ದಾರೆ.

ದೂರು ದಾಖಲಾಗುತ್ತಿದ್ದಂತೆ ಸದರಿ ಪ್ರಯಾಣಿಕನನ್ನು ವಾಪಸ್ ಕರೆಸಲಾಗಿದ್ದು, ಆತನನ್ನು ವಿಚಾರಣೆಗೆ ಗುರಿಪಡಿಸಲಾಗಿದೆ ಎಂದು ಜೆಟ್ ಏರ್ ವೇಸ್ ಮೂಲಗಳು ಹೇಳಿವೆ. ಪೊಲೀಸರು ಸಹ ಸ್ಥಳಕ್ಕೆ ಭೇಟಿ ನೀಡಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+