ರೈಲ್ವೆ ಬಯೋ ಟಾಯ್ಲೆಟ್ ವ್ಯವಸ್ಥೆ: ಸ್ವಚ್ಛತೆಗೆ ಟೆಂಡರ್
ಬೆಂಗಳೂರು, ಮೇ 19: ರೈಲುಗಳಲ್ಲಿ ಅಳವಡಿಸಲಾಗಿರುವ ಶೌಚಾಲಯದ ಸಮರ್ಪಕವಾಗಿಲ್ಲ ಹಾಗಾಗಿ ಜೈವಿಕ ಶೌಚಾಲಯಗಳ ಟೆಂಡರ್ ಕರೆಯಲಾಗಿದೆ.
ಪ್ರತಿ ನಿಲ್ದಾಣದಲ್ಲೂ ಟೆಂಡರ್ ಪಡೆದಿರುವ ಸಿಬ್ಬಂದಿ ಸ್ವಚ್ಛಗೊಳಿಸುತ್ತಾರೆ. ಎಕ್ಸ್‌ಪ್ರೆಸ್ ರೈಲುಗಳಲ್ಲಿ ಆನ್‌ಬೋರ್ಡ್ ಹೌಸ್ ಕೀಪಿಂಗ್ ವ್ಯವಸ್ಥೆ ಇದ್ದು, ಸ್ವಚ್ಛತಾ ಸಿಬ್ಬಂದಿ ರೈಲಿನಲ್ಲೇ ಇದ್ದು ಸಮಸ್ಯೆ ಉಂಟಾದಾಗ ಪರಿಹಾರ ಒದಗಿಸುತ್ತಾರೆ. ಪ್ರಸ್ತುತ ಜೈವಿಕ ಶೌಚಾಯಲಗಳಲ್ಲಿ ಖಾಲಿ ಬಾಟಲಿಗಳು, ಸ್ಯಾನಿಟರಿ ಪ್ಯಾಡ್, ಸಿಗರೇಟ್ ತುಂಡುಗಳಿಂದ ತುಂಬಿಕೊಳ್ಳುತ್ತಿದೆ.
ಹೀಗಾಗಿ ಅದನ್ನು ನಿರ್ವಹಣೆ ಮಾಡುವುದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ನೈಋತ್ಯ ವಿಭಾಗ ರೈಲ್ವೆಯು ಎಪ್ಪತ್ತರಷ್ಟು ರೈಲುಗಳಲ್ಲಿ ಬಯೋ ಟಾಯ್ಲೆಟ್ ಅಳವಡಿಸಿದೆ. ಆದರೆ, ಅವುಗಳ ನಿರ್ವಹಣೆ ಬಗ್ಗೆ ಪ್ರಯಾಣಿಕರಿಗೆ ಅರಿವಿಲ್ಲ.

ರಾತ್ರಿ ವೇಳೆ ಪ್ರಯಾಣಿಕರು ಮದ್ಯ ಸೇವಿಸಿ ಖಾಲಿ ಬಾಟಲಿ ಹಾಗೂ ಸಿಗರೇಟಿನ ತುಂಡುಗಳನ್ನು ಶೌಚಾಲಯದದೊಳಗೆ ಹಾಕುತ್ತಾರೆ ಹೀಗೆ ಅವ್ಯವಸ್ಥೆಯ ಆಗರವಾಗಿದೆ. ಶೌಚಾಲಯ ಕುರಿತು ಸಾರ್ವಜನಿಕರು ತಿಳಿದುಕೊಂಡಲ್ಲಿ ಮಾತ್ರ ಸಮಸ್ಯೆ ನಿವಾರಣೆ ಸಾಧ್ಯ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications