ಲೈಂಗಿಕ ಕಿರುಕುಳ ಆರೋಪ, ಮದರಸಾ ಶಿಕ್ಷಕ ಬಂಧನ

ಕಾಸರಗೋಡು, ಮೇ.9: ಇಲ್ಲಿನ ಸ್ಥಳೀಯ ಮದರಸಾವೊಂದರಲ್ಲಿ ಇಸ್ಲಾಂ ಧರ್ಮ ಬೋಧನೆ ಮಾಡುತ್ತಿದ್ದ ಶಿಕ್ಷಕನೊಬ್ಬ ತನ್ನ ವಿದ್ಯಾರ್ಥಿನಿ ಮೇಲೆ ಕಾಮದೃಷ್ಟಿ ಬೀರಿ, ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ. ಉಪ್ಪಳ ಮೂಲದ ವಿದ್ಯಾರ್ಥಿನಿ ನೀಡಿದ ದೂರಿನ ಮೇರೆಗೆ ಶಿಕ್ಷಕ ಹಸನ್ ಅವರನ್ನು ಮಂಜೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮುಳ್ಳೇರಿಯಾ ನಾಟೇಕಲ್ ಮೂಲದ 47 ವರ್ಷ ವಯಸ್ಸಿನ ಹಸನ್ ಅಲಿಯಾಸ್ ಹಸ್ಸೈನರ್ ಅವರು ಮೊಗ್ರಾಲ್ ಪುತ್ತೂರು ಪಂಜದ ನಿವಾಸಿಯಾಗಿದ್ದು, ಕಾಸರಗೋಡಿನ ಮಣಿಮಂಡ ಎಂಬ ಸ್ಥಳದಲ್ಲಿ ಇಸ್ಲಾಂ ಧರ್ಮ ಬೋಧಕರಾಗಿದ್ದರು.

ಉಪ್ಪಳ ಮೂಲದ ವಿದ್ಯಾರ್ಥಿನಿ ಜತೆ ಕಳೆದ 14 ದಿನಗಳಿಂದ ಅನುಚಿತವಾಗಿ ವರ್ತಿಸುತ್ತಿದ್ದ ಶಿಕ್ಷಕನ ಬಗ್ಗೆ ತನ್ನ ಗೆಳತಿಯಲ್ಲಿ ಹೇಳಿಕೊಂಡಿದ್ದಾಳೆ. ನಂತರ ಪೋಷಕರಿಗೆ ತಿಳಿದು ಮದರಸಾ ಮುಖ್ಯಸ್ಥರಿಗೆ ದೂರು ನೀಡಲಾಗಿತ್ತು. ಅಲ್ಲಿಂದ ದೂರಿನ ಪ್ರತಿ ಮದರಸಾ ಸಮಿತಿ ತಲುಪಿದೆ. ಆದರೆ, ಶಿಕ್ಷಕನ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಮಿತಿ ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಮಕ್ಕಳ ಕಲ್ಯಾಣಾ ಸಮಿತಿ ನೆರವಿನಿಂದ ಮಂಜೇಶ್ವರ ಠಾಣೆಗೆ ದೂರು ಸಲ್ಲಿಸಲಾಗಿದೆ.

Madarasa teacher arrested for sexually harassing female student at Uppala

ಪೋಷಕರು ಹಾಗೂ ಬಾಲಕಿಯನ್ನು ವಿಚಾರಣೆ ನಡೆಸಿದ ನಂತರ ಪೊಲೀಸರು ಶಿಕ್ಷಕರ ಹಸನ್ ನನ್ನು ಬಂಧಿಸಿದ್ದಾರೆ. ಪೊಲೀಸರು ಶಿಕ್ಷಕನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವುದನ್ನು ಒಪ್ಪಿಕೊಂಡಿದ್ದಾನೆ. ಹಸನ್ ವಿರುದ್ಧ ಇನ್ನೂ ಅನೇಕ ಸ್ಥಳಗಳಲ್ಲಿ ಇದೇ ರೀತಿ ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ. ಕಳೆದ ವರ್ಷ ಮಂಗಳೂರಿನ ಬೊಲಿಯಾರ್ ಸಮೀಪದಲ್ಲಿರುವ ಮದರಸಾದಲ್ಲಿ ಇದೇ ರೀತಿ ಘಟನೆ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು. ಏಳು ವರ್ಷ ಬಾಲಕಿ ಮೇಲೆ ಕಾಮದೃಷ್ಟಿ ಬೀರಿ, ಲೈಂಗಿಕ ಹಿಂಸೆ ನೀಡಿದ ಶಿಕ್ಷಕ ಅಬ್ದುಲ್ ಕರೀಂ ಎಂಬಾತನನ್ನು ಬಂಧಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+