Karnataka Lok Sabha Result Update: ಬಿಜೆಪಿಗೆ 17 ಸೀಟು, ಕಾಂಗ್ರೆಸ್ 9ಕ್ಕೆ ಇಳಿಕೆ, ಜೆಡಿಎಸ್ ಕಥೆ ಏನಿದೆ?
ಬೆಂಗಳೂರು, ಜೂನ್ 04: ಕರ್ನಾಟಕ ಲೋಕಸಭಾ ಚುನಾವಣೆ 2024 ಮತ ಎಣಿಕಗೆ ಇಂದು (ಜೂನ್ 4) ರಂದು ನಡೆಯುತ್ತಿದೆ. ಕರ್ನಾಟಕದ ಎಲ್ಲ 28 ಕ್ಷೇತ್ರಗಳ ಪೈಕಿ ಬೆಳಗ್ಗೆ 11.26 ಗಂಟೆ ಹೊತ್ತಿಗೆ ಯಾವ ಪಕ್ಷಗಳು ಯಾವ್ಯಾವ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ ಎಂಬ ಮಾಹಿತಿ ಇಲ್ಲಿದೆ.
ಕರ್ನಾಟಕ ಲೋಕಸಭಾ ಚುನಾವಣೆ ಮತ ಎಣಿಕೆಯಲ್ಲಿ ಬಿಜೆಪಿ ಜೊತೆಗಿನ ಮೈತ್ರಿ ಪಕ್ಷವಾಗಿರುವ ಜೆಡಿಎಸ್ 3 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡರೆ, ರಾಜ್ಯ ಆಡಳಿತ ಪಕ್ಷವು ಕಾಂಗ್ರೆಸ್ 08 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಉಳಿದ 17 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ ಎಂದು ಮತ ಎಣಿಕೆಯಿಂದ ತಿಳಿದು ಬಂದಿದೆ.

ಜೆಡಿಎಸ್ ಮುನ್ನಡೆ ಎಲ್ಲೆಲ್ಲಿ?
* ಕೋಲಾರ ಲೋಕಸಭಾ ಕ್ಷೇತ್ರ
* ಹಾಸನ ಲೋಕಸಭಾ ಕ್ಷೇತ್ರ
* ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮುನ್ನಡೆ ಕಾಯ್ದುಕೊಂಡಿದೆ.
ಕಾಂಗ್ರೆಸ್‌ಗೆ ಮುನ್ನಡೆ ಎಲ್ಲೆಲ್ಲಿ?
ಉಳಿದಂತೆ ಆಡಳಿತ ಪಕ್ಷ ಕಾಂಗ್ರೆಸ್ ಪಕ್ಷವು ಈ ಕೆಳಗಿನ ಏಳು ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
* ರಾಯಚೂರು
* ಬೀದರ್
* ಚಾಮರಾಜನಗರ
* ದಾವಣಗೆರೆ
* ಕಲಬುರಗಿ
* ಕೊಪ್ಪಳ
* ಬಳ್ಳಾರಿ
* ಚಿಕ್ಕೋಡಿ
ವಿಪಕ್ಷ ಸ್ಥಾನದಲ್ಲಿ ಕುಳಿತಿರುವ ಬಿಜೆಪಿಯು ಹಾವೇರಿ, ಬೆಳಗಾವಿ, ಚಿಕ್ಕಮಗಳೂರು, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಧಾರವಾಡ ಸೇರಿದಂತೆ ಇನ್ನಿತರ ಎಲ್ಲ ಹದಿನೆಟ್ಟು ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇಲ್ಲಿ ಹಾವು ಏಣಿ ಆಟ ಸಂಜೆ ವರೆಗೂ ಮುಂದುವರಿಯಲಿದೆ.
ಕೋಲಾರದಲ್ಲಿ ಜೆಡಿಎಸ್ ಮಲ್ಲೇಶಬಾಬು, ಮಂಡ್ಯದಲ್ಲಿ ಎಚ್‌ಡಿ ಕುಮಾರಸ್ವಾಮಿ, ಹಾಸನದಲ್ಲಿ ಜೆಡಿಎಸ್ ಪ್ರಜ್ವಲ್ ರೇವಣ್ಣ ಮುನ್ನಡೆ ಕಾಯ್ದುಕೊಂಡಿದ್ದಾರೆ. ಸಂಜೆ 6 ಗಂಟೆ ನಂತರ ನಿಖರ ಮಾಹಿತಿ ಹೊರ ಬೀಳಲಿದೆ.
ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ (ಸಂಜೆ 4 ಗಂಟೆವರೆಗೆ)ಎರಡಂಕಿ ಸ್ಥಾನ ತಲುಪಿ ಮರಳಿ ಒಂದಂಕಿಗೆ ಇಳಿಕೆ ಆಗಿದೆ. ಬಿಜೆಪಿ ಸದ್ಯ 17 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಜೆಡಿಎಸ್ ಮೂರು ಸ್ಥಾನ ಗಳಿಸಿದರೆ, ಆಡಳಿತ ಪಕ್ಷ ಕಾಂಗ್ರೆಸ್ 09 ಸ್ಥಾನಕ್ಕೆ ಇಳಿದಿದೆ. ಮಧ್ಯಾಹ್ನ ಹತ್ತು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿತ್ತು. ನಂತರ ಒಂದು ಸ್ಥಾನದಲ್ಲಿ ಹಿನ್ನಡೆ ಅನುಭವಿಸಿದೆ. ಸಂಜೆ ನಂತರ ಚುನಾವಣೆ ಆಯೋಗದಿಂತೆ ಅಧಿಕೃತ ಮಾಹಿತಿ ಹೊರ ಬೀಳಲಿದೆ.












Click it and Unblock the Notifications