ಮೇ.16 ಬೆಳಗ್ಗೆ 8ರಿಂದ ಫಲಿತಾಂಶ ನೋಡಿ

ಬೆಂಗಳೂರು , ಮೇ.12: ಲೋಕಸಭಾ ಚುನಾವಣಾ ಮುಕ್ತಾಯವಾದ ಬೆನ್ನಲ್ಲೆ ಮತ ಎಣಿಕೆ ಕಾರ್ಯಕ್ಕೆ ಚುನಾವಣಾ ಆಯೋಗ ಸಕಲ ಸಿದ್ದತೆಯನ್ನು ನಡೆಸಿದೆ.

ಮತ ಎಣಿಕೆಗೆ ಕಾರ್ಯ‌ಕ್ಕೆ ಇನ್ನು ನಾಲ್ಕು ದಿನ ಬಾಕಿ ಇದ್ದು ಚುನಾವಣಾ ಆಯೋಗದ ಆದೇಶದಂತೆ ರಾಜ್ಯದಲ್ಲಿ ಪ್ರತಿ ಕ್ಷೇತ್ರಕ್ಕೊಂದರಂತೆ ರಾಜ್ಯದಲ್ಲಿ 28 ಮತ ಎಣಿಕೆ ಕೇಂದ್ರಗಳನ್ನು ತೆರೆಯಲಾಗುತ್ತದೆ.

ಎಲ್ಲಾ ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ‌ ಮೇ. 16ರಂದು ಬೆಳಗ್ಗೆ ಎಂಟು ಗಂಟೆಗೆ ಆರಂಭವಾಗಲಿದೆ. ಮೊದಲಿಗೆ ಅಂಚೆ ಮತದಾನದ ಎಣಿಕೆ ನಡೆಯಲ್ಲಿದ್ದು ಬಳಿಕ ಇವಿಎಂ ಮತ ಎಣಿಕೆ ನಡೆಯಲಿದೆ.

ಮಧ್ಯಾಹ್ನದ ವೇಳೆಗೆ ಫಲಿತಾಂಶ ಪ್ರಕಟಗೊಳ್ಳುವಂತೆ ಆಯೋಗ ಮತ ಎಣಿಕಾ ಸಿಬ್ಬಂದಿಗೆ ಸೂಕ್ತ ತರಬೇತಿಯನ್ನು ನೀಡಿದೆ.ಮತದಾನವಾಗಿರುವ ಸಂಖ್ಯೆ ಅನುಗುಣವಾಗಿ 12 ರಿಂದ 14 ಟೇಬಲ್‌ಗಳನ್ನು ಮತ ಎಣಿಕೆ ಬಳಸಲು ಆಯೋಗ ನಿರ್ಧರಿಸಿದೆ. ಪ್ರತಿ ಎಣಿಕಾ ಕೇಂದ್ರದಲ್ಲಿ ವಿಡಿಯೋ ಚಿತ್ರಿಕರಣ ಮಾಡಲಾಗುತ್ತದೆ. ಪ್ರತಿ ಸುತ್ತಿನ ಫಲಿತಾಂಶವನ್ನು ಕೂಡಲೇ ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಆಯೋಗ ಸಿದ್ದತೆ ನಡೆಸಿಕೊಂಡಿದೆ.

strong room

ಮೇ 16ರಂದು ಮತ ಎಣಿಕೆ ನಡೆಯುವವರೆಗೆ ಎಲೆಕ್ಟ್ರಾನಿಕ್ ಮತಯಂತ್ರಗಳಿರುವ ಸ್ಟ್ರಾಂಗ್ ರೂಮ್ ಗಳಿಗೆ ಮೂರು ಹಂತದಲ್ಲಿ ಈಗಾಗಲೇ ಭದ್ರತೆ ಒದಗಿಸಲಾಗುತ್ತದೆ. ಮತಯಂತ್ರವಿರುವ ಕೊಠಡಿಯ ಹೊರಭಾಗದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಶಸ್ತ್ರ ಸಜ್ಜಿತ ಯೋಧರು ಕಾವಲಿದ್ದಾರೆ.[ಯಂತ್ರದಲ್ಲಿ ಭದ್ರವಾದ ಮತಗಳು ಈಗ ಎಲ್ಲಿವೆ?]

ಎಲೆಕ್ಟ್ರಾನಿಕ್ ಮತಯಂತ್ರವಿರುವ ಕಟ್ಟಡದ ಆವರಣವನ್ನು ಕೆಎಸ್ಆರ್ ಪಿ ಕಾವಲು ಕಾಯುತ್ತಿದೆ. ಕಟ್ಟಡದ ಆವರಣದ ಮುಂಭಾಗ, ರಸ್ತೆಗಳನ್ನು ಆಯಾ ನಗರ ಪೊಲೀಸರು ಕಾವಲು ಕಾಯುತ್ತಿದ್ದಾರೆ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸಿಆರ್ ಪಿಫ್ ಯೋಧರು ಸ್ಟ್ರಾಂಗ್ ರೂಮ್ ಗಳ ಭದ್ರತೆಯನ್ನು ಹೊಣೆಯನ್ನು ಹೊತ್ತಿದ್ದಾರೆ.[ಕರ್ನಾಟಕದಲ್ಲಿ ಒಟ್ಟು ಎಷ್ಟು ಮತದಾನವಾಗಿದೆ]

ಲೋಕಸಭಾ ಜೊತೆಗೆ ಏಕೀಕೃತ ಆಂಧ್ರ ಪ್ರದೇಶ(ತೆಲಂಗಾಣ, ಸೀಮಾಂದ್ರ), ಒಡಿಶಾ, ಸಿಕ್ಕಿಂ ರಾಜ್ಯಗಳ ವಿಧಾನಸಭೆಗಳಿಗೂ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ‌ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+