Lok Sabha Election 2024: ರಾಜ್ಯದಲ್ಲಿ ಮತಗಳ ಅಂತರದ ಬಗ್ಗೆ ಬಿಜೆಪಿಗೆ ಆತಂಕವಾಗಿರುವುದು ಏಕೆ?

ಬೆಂಗಳೂರು, ಮೇ. 12: ರಾಜ್ಯದಲ್ಲಿ ಎರಡು ಹಂತಗಳಲ್ಲಿ ಲೋಕಸಭಾ ಚುನಾವಣೆಗೆ ಮತದಾನ ನಡೆದಿದೆ. ಲೋಕಸಭಾ ಚುನಾವಣಾ ಫಲಿತಾಂಶ ಜೂನ್ 4 ರಂದು ಪ್ರಕಟವಾಗಲಿದೆ. ಇದಕ್ಕೂ ಮುನ್ನ ರಾಜ್ಯದಲ್ಲಿ ಹಲವು ಘಟನೆಗಳು ಸಂಭವಿಸಿವೆ. ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಪ್ರಕರಣ ಕೂಡ ಒಂದು. ಹೀಗಾಗಿ ರಾಜ್ಯ ಬಿಜೆಪಿಯಲ್ಲಿ ಆತಂಕ ಆರಂಭವಾಗಿದೆ.

ಕರ್ನಾಟಕದ ಲೋಕಸಭಾ ಅಭ್ಯರ್ಥಿಗಳು ಚುನಾವಣಾ ಫಲಿತಾಂಶಕ್ಕಾಗಿ ಉಸಿರು ಬಿಗಿ ಹಿಡಿದು ಕಾಯುತ್ತಿದ್ದಾರೆ. ವಿಧನಸಭಾ ಫಲಿತಾಂಶ ಕೊಟ್ಟ ಶಾಕ್‌ನಿಂದ ಇನ್ನು ಹೊರಬಂದಿಲ್ಲ. ಇದರ ನಡುವೆ ಬಿಜೆಪಿ, ಮತಗಳ ಅಂತರದ ಬಗ್ಗೆ ಆತಂಕಗೊಂಡಿದೆ. ಇದು ಶನಿವಾರ ನಡೆದ ಪಕ್ಷದ ಆಂತರಿಕ ಸಭೆಯಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

Lok Sabha Elections 2024 BJP nervous about vote margins

ಬಿಜೆಪಿ ಆಂತರಿಕ ಸಭೆಯಲ್ಲಿ ಪದಾಧಿಕಾರಿಗಳು ಹೇಳಿದ್ದೇನು?

ರಾಜ್ಯದಲ್ಲಿ ಏಪ್ರಿಲ್ 26 ಮತ್ತು ಮೇ 7 ರಂದು ಎರಡು ಹಂತದಲ್ಲಿ ನಡೆದ ಲೋಕಸಭೆ ಚುನಾವಣಾ ಮತದಾನ ನಡೆದಿತ್ತು. ಚುನಾವಣೆಯ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದ ಕೆಲವು ಜಿಲ್ಲೆಗಳ ಪದಾಧಿಕಾರಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಮತಗಳ ಅಂತರವನ್ನು ಕಡಿಮೆ ಮಾಡಬಹುದು ಎಂದು ವರದಿ ಮಾಡಿದ್ದಾರೆ.

ಪಕ್ಷದ ಆಂತರಿಕ ಸಭೆಯಲ್ಲಿ ಯಾವ ಪದಾಧಿಕಾರಿಗಳು ಕೂಡ ಯಾವುದೇ ಕ್ಷೇತ್ರದಲ್ಲಿ ಬಿಜೆಪಿ ಸೋಲುವ ಭೀತಿಯನ್ನು ವ್ಯಕ್ತಪಡಿಸಿಲ್ಲ. ಆದರೆ 2019ರ ಚುನಾವಣೆಗೆ ಹೋಲಿಸಿದರೆ ಮತಗಳ ಅಂತರದಲ್ಲಿ ವ್ಯತ್ಯಾಸವಾಗಬಹುದು ಎಂದು ಪಕ್ಷದ ಚುನಾವಣಾ ನಿರ್ವಹಣಾ ಸಮಿತಿಯ ಸಂಚಾಲಕ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ ಸುನೀಲ್ ಕುಮಾರ್ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

2019 ರಲ್ಲಿ ಬಿಜೆಪಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ 25 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಕಾಂಗ್ರೆಸ್ ಒಂದು, ಜೆಡಿಎಸ್ ಒಂದು ಮತ್ತು ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ಅಂಬರೀಶ್ ಒಂದು ಸ್ಥಾನ ಗೆದ್ದುಕೊಂಡಿದ್ದರು. ವಿಧಾನಸಭಾ ಚುನಾವಣೆಯ ಭರ್ಜರಿ ಜಯದ ಗುಂಗಿನಲ್ಲಿರು ಕರ್ನಾಟಕ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿಯೂ ಕಮಾಲ್ ಮಾಡುವ ಆಸೆಯಲ್ಲಿದೆ.

Lok Sabha Elections 2024 BJP nervous about vote margins

ಮಹಿಳೆಯರ ಮೇಲೆ ಕಾಂಗ್ರೆಸ್ ನಂಬಿಕೆ

ಬಿಜೆಪಿಯ ಸರಾಸರಿ ಗೆಲುವಿನ ಅಂತರ 1.75 ಲಕ್ಷ ಮತಗಳಾಗಿದ್ದು, ಈ ಮತಗಳ ಅಂತರವನ್ನು ಸರಿದೂಗಿಸಲು ಕಾಂಗ್ರೆಸ್‌ಗೆ ಹೆಚ್ಚು ಮತಗಳ ಅಗತ್ಯವಿದೆ. ಕಾಂಗ್ರೆಸ್ ತನ್ನ ಗ್ಯಾರಂಟಿ ಯೋಜನೆಗಳ ಮೇಲೆ ಎಲ್ಲಾ ಭರವಸೆಗಳನ್ನು ಇಟ್ಟುಕೊಂಡಿದೆ. ಅದರಲ್ಲೂ, ವಿಶೇಷವಾಗಿ ಮಹಿಳೆಯರಿಂದ ಮತಗಳು ಬರುತ್ತದೆ ಎಂದು ಕಾಂಗ್ರೆಸ್ ನಂಬಿದೆ.

ಬಿಜೆಪಿ ಸಭೆಯಲ್ಲಿ, ಚಾಮರಾಜನಗರ, ದಾವಣಗೆರೆ ಮತ್ತು ಬೀದರ್ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಟಫ್ ಫೈಟ್ ನೀಡಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಸಭೆಯಲ್ಲಿ ಭಾಗವಹಿಸಿದ್ದ ಹಿರಿಯ ಬಿಜೆಪಿ ನಾಯಕರ ಪ್ರಕಾರ, ಚುನಾವಣಾ ನಿರ್ವಹಣೆಯಲ್ಲಿ ತೊಡಗಿರುವ ಪದಾಧಿಕಾರಿಗಳು, ಕಾಂಗ್ರೆಸ್ ಕೆಲವು ಸ್ಥಾನಗಳಲ್ಲಿ ಅಂತರವನ್ನು ಕಡಿಮೆಗೊಳಿಸಿದರೆ, ಕೆಲವು ಕ್ಷೇತ್ರಗಳಲ್ಲಿ ಮತಗಳ ಅಂತರವು 2019 ಕ್ಕಿಂತ ಹೆಚ್ಚಿರಬಹುದು ಎಂಬ ವರದಿ ನೀಡಿದ್ದಾರೆ.

ಲೋಕಸಭಾ ಚುನಾವಣೆಗಾಗಿ ಚುನಾವಣಾ ಪೂರ್ವದಲ್ಲಿ ಬಿಜೆಪಿ 650 ಸಾರ್ವಜನಿಕ ಸಭೆಗಳು ಮತ್ತು 180 ರೋಡ್‌ಶೋಗಳನ್ನು ನಡೆಸಿದೆ. ಬೂತ್ ಮಟ್ಟದಲ್ಲಿ ತಲಾ 50 ರಿಂದ 75 ಮತದಾರರನ್ನು ಒಳಗೊಂಡ 60,000 ಸಭೆಗಳು ನಡೆದಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+