Lok Sabha Election 2024: ಕರ್ನಾಟಕದಲ್ಲಿ ಹೇಗಿದೆ ಮೈತ್ರಿ ರಾಜಕಾರಣ: 25 ವರ್ಷಗಳಿಂದ ನಡೆದಿದ್ದು ಏನು?

ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಎಲ್ಲ ಪಕ್ಷಗಳು ಭರ್ಜರಿ ಪ್ರಚಾರವನ್ನು ಆರಂಭಿಸಿವೆ. ಲೋಕಸಭಾ ಚುನಾವಣೆಯಲ್ಲಿ ಕಳೆದ 25 ವರ್ಷಗಳ ಇತಿಹಾಸವನ್ನು ನೋಡಿದರೆ ಮೈತ್ರಿ ಮಾಡಿಕೊಳ್ಳುವುದು ಸಾಮಾನ್ಯ ಅಂಶವಾಗಿದೆ. ರಾಷ್ಟ್ರೀಯ ಪಕ್ಷಗಳು ಲೋಕಸಭಾ ಚುನಾವಣೆಯ ವೇಳೆ ಸ್ಥಳೀಯ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡಿವೆ.

ರಾಜಕೀಯ ಎಂದರೆನೇ ಹಾಗೆ ಇಲ್ಲಿ ಯಾರು ಪರ್ಮನೆಂಟ್‌ ಶತ್ರುಗಳಲ್ಲ. ಶಾಶ್ವತ ಮಿತ್ರರೂ ಅಲ್ಲ. ಕಾಲ ಕಾಲಕ್ಕೆ ಮೈತ್ರಿಗಳು ಬದಲಾಗುತ್ತಲೇ ಇರುತ್ತವೆ. ಈ ಬಾರಿಯೂ ಬಿಜೆಪಿ ಕರ್ನಾಟಕದಲ್ಲಿ ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಂಡಿದೆ. ಹಾಗಿದ್ದರೆ, ಕರ್ನಾಟಕದಲ್ಲಿ ಮೈತ್ರಿ ರಾಜಕೀಯದ ಚಿತ್ರಣ ಇಲ್ಲಿದೆ.

Lok Sabha Election 2024 Understanding Alliance Politics in Karnataka A 25-Year Retrospective

ಮೈತ್ರಿಗೆ ಮತದಾರ ಜೈ

1998 ರ ಲೋಕಸಭಾ ಚುನಾವಣೆಯಲ್ಲಿ, ಬಿಜೆಪಿ, ಕರ್ನಾಟಕದಲ್ಲಿ ಲೋಕಶಕ್ತಿಯೊಂದಿಗೆ ಕೈ ಜೋಡಿಸಿ ಅಖಾಡ ಪ್ರವೇಶಿಸಿತ್ತು. ಈ ಚುನಾವಣೆಯಲ್ಲಿ ಬಿಜೆಪಿ ತಾನು ಸ್ಪರ್ಧಿಸಿದ್ದ 18 ಕ್ಷೇತ್ರಗಳಲ್ಲಿ ಕಣಕ್ಕೆ ಇಳಿದು 13 ರಲ್ಲಿ ಜಯ ಸಾಧಿಸಿದರೆ, ಮಿತ್ರ ಪಕ್ಷ ಲೋಕಶಕ್ತಿ 10 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಮೂರು ಕ್ಷೇತ್ರಗಳಲ್ಲಿ ಗೆದ್ದು ಬೀಗಿತ್ತು. ಕಾಂಗ್ರೆಸ್ 9, ಮತ್ತು ಜನತಾದಳ 3 ಸ್ಥಾನಗಳನ್ನು ಗೆದ್ದಿದ್ದವು.

ಕಾಂಗ್ರೆಸ್‌ ಕೈ ಹಿಡಿದ ಮತದಾರ

ಇದಾದ ಒಂದೇ ವರ್ಷದಲ್ಲಿ ಮತ್ತೊಮ್ಮೆ ಲೋಕಸಭಾ ಚುನಾವಣೆಗಳು ನಡೆದವು. ಆಗ ಬಿಜೆಪಿ ಜನತಾದಳದೊಂದಿಗೆ ಕೈ ಜೋಡಿಸಿ ಅಖಾಡ ಪ್ರವೇಶಿಸಿತ್ತು. ಬಿಜೆಪಿ 19, ಜತದಾತಳ 9 ಸ್ಥಾನಗಳಲ್ಲಿ ಕಣಕ್ಕೆ ಇಳಿದವು. ಈ ಪೈಕಿ ಬಿಜೆಪಿ 7, ಜನತಾದಳ 3ರಲ್ಲಿ ಗೆಲುವು ಸಾಧಿಸಿತು. ಉಳಿದ 18 ಸ್ಥಾನಗಳನ್ನು ಕಾಂಗ್ರೆಸ್‌ ತನ್ನ ತೆಕ್ಕೆಗೆ ಹಾಕಿಕೊಂಡಿತ್ತು.

Lok Sabha Election 2024 Understanding Alliance Politics in Karnataka A 25-Year Retrospective

2004ರಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಮೈತ್ರಿ ಮಾಡಿಕೊಂಡವು. ಅಲ್ಲದೆ ಬಿಜೆಪಿ 24 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿ 18 ರಲ್ಲಿ ಗೆಲುವಿನ ನಗೆ ಬೀರಿತ್ತು. ಇನ್ನು ಮಿತ್ರ ಪಕ್ಷ ಜೆಡಿಎಸ್‌ 4ರಲ್ಲಿ ಎರಡು ಕ್ಷೇತ್ರಗಳನ್ನು ಉಳಿಸಿಕೊಳ್ಳುವಲ್ಲಿ ಸಫಲವಾಗಿತ್ತು. ಏಕಾಂಗಿಯಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್ 8 ಸ್ಥಾನವನ್ನು ಮಾತ್ರ ಗೆದ್ದುಕೊಂಡಿತ್ತು.

ಎರಡು ಬಾರಿ ಮೂರು ಪಕ್ಷಗಳ ಸ್ಪರ್ಧೆ

2009 ಮತ್ತು 2014 ರ ಚುನಾವಣೆಗಳಲ್ಲಿ ಕರ್ನಾಟಕ ರಾಜ್ಯದ ಪ್ರಮುಖ ಮೂರು ಪಕ್ಷಗಳು ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದವು. ಈ ಚುನಾವಣೆಗಳಲ್ಲಿ ಬಿಜೆಪಿಯು ಮೂರನೇ ಎರಡರಷ್ಟು ಸ್ಥಾನಗಳನ್ನು ಪಡೆದುಕೊಂಡಿತ್ತು. 2009ರ ಚುನಾವಣೆಯಲ್ಲಿ 19 ಮತ್ತು 2024ರ ಚುನಾವಣೆಯಲ್ಲಿ 17 ಸ್ಥಾನಗಳನ್ನು ಗೆದ್ದಿತ್ತು. 2009ರ ಚುನಾವಣೆಯಲ್ಲಿ ಕಾಂಗ್ರೆಸ್‌ 6, ಜೆಡಿಎಸ್‌ 3 ಸ್ಥಾನವನ್ನು ಪಡೆದಿದ್ದವು. 2014ರ ಚುನಾವಣೆಯಲ್ಲಿ ಕಾಂಗ್ರೆಸ್‌ 9, ಜೆಡಿಎಸ್‌ 2 ಲೋಕಸಭಾ ಸ್ಥಾನವನ್ನು ವಶಕ್ಕೆ ಪಡೆದಿದ್ದವು.

ದಾಖಲೆಯ ಗೆಲುವು

2019ರಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ಮೈತ್ರಿ ಮಾಡಿಕೊಂಡು, ಬಿಜೆಪಿ ವಿರುದ್ಧ ಸ್ಪರ್ಧಿಸಿದವು. ಕಾಂಗ್ರೆಸ್‌ 28 ಕ್ಷೇತ್ರಗಳಲ್ಲಿ 19ರಲ್ಲಿ ಸ್ಪರ್ಧಿಸಿ ಒಂದರಲ್ಲಿ ಗೆದ್ದರೆ, ಜೆಡಿಎಸ್ 9ರಲ್ಲಿ ಸ್ಪರ್ಧಿಸಿ ಹಾಸನವನ್ನು ತನ್ನ ಮಡಿಲಿಗೆ ಹಾಕಿಕೊಂಡಿತ್ತು. ಬಿಜೆಪಿ ಒಟ್ಟು 25 ಸ್ಥಾನಗಳನ್ನು ಗೆದ್ದು ನವ ಇತಿಹಾವನ್ನು ಕರ್ನಾಟಕದಲ್ಲಿ ಬರೆದಿತ್ತು.

ಈ ಬಾರಿ ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಕಾಂಗ್ರೆಸ್‌ ವಿರುದ್ಧ ಸೆಣಸಾಟ ನಡೆಸಲಿವೆ. ಈ ಬಾರಿಯ ಯಾರ ಕೈ ಮತದಾರ ಪ್ರಭು ಹಿಡಿಯಲಿದ್ದಾನೆ ಎಂಬುದನ್ನು ಕಾದು ನೋಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+