ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟಕ್ಕೆ 400ಕ್ಕೂ ಹೆಚ್ಚು ಸ್ಥಾನಗಳು? ಕಾಂಗ್ರೆಸ್‌ಗೆ ಎಷ್ಟು ಸ್ಥಾನ?

ಲೋಕಸಭೆ ಚುನಾವಣೆ ಬಂದೇ ಬಿಟ್ಟಿದೆ, ನಾಳೆ ಅಥವಾ ನಾಡಿದ್ದು 2024 ರ ಲೋಕಸಭೆಗೆ ದಿನಾಂಕ ಘೋಷಣೆ ಆಗುವ ನಿರೀಕ್ಷೆ ಇದೆ. ಚುನಾವಣೆಗೆ ದಿನಾಂಕ ಘೋಷಣೆ ಆಗುವುದಕ್ಕೆ ಮೊದಲು ಇದೀಗ ಚುನಾವಣಾ ಪೂರ್ವ ಸಮೀಕ್ಷೆಗಳು ಸಂಚಲನ ಸೃಷ್ಟಿ ಮಾಡಿವೆ. ಬಿಜೆಪಿ ಪಕ್ಷ ಈ ಬಾರಿ ಹೊಸ ಇತಿಹಾಸ ನಿರ್ಮಾಣ ಮಾಡಲಿದೆ ಅಂತಿವೆ ಸಮೀಕ್ಷೆಗಳು. ಹಾಗಾದ್ರೆ ಸಮೀಕ್ಷೆಗಳ ಪ್ರಕಾರ ಬಿಜೆಪಿ ಪಕ್ಷಕ್ಕೆ ಸಿಗಲಿರುವ ಸ್ಥಾನಗಳು ಎಷ್ಟು? ಬನ್ನಿ ತಿಳಿಯೋಣ.

ಕಣ್ಣು ಮುಚ್ಚಿ ಕಣ್ಣು ಬಿಡುವುದರ ಒಳಗಾಗಿ 2024 ರ ಲೋಕಸಭೆ ಚುನಾವಣೆ ಬಂದೇ ಬಿಡುತ್ತೆ. ಯಾಕಂದ್ರೆ 2024ರ ಲೋಕಸಭೆ ಚುನಾವಣೆಗೆ ತುಂಬಾ ಕಡಿಮೆ ಸಮಯ ಇದೆ. ಹೀಗಾಗಿ ದೇಶದ ಚುಕ್ಕಾಣಿ ಹಿಡಿಯಲು ರಾಜಕೀಯ ಪಕ್ಷಗಳು ಪೈಪೋಟಿ ಶುರು ಮಾಡಿವೆ. ಎಲ್ಲಾ ರೀತಿ ತಯಾರಿ ನಡೆಯುತ್ತಿರುವ ಸಮಯದಲ್ಲೇ, ಚುನಾವಣಾ ಸಮೀಕ್ಷೆಗಳು 2024 ರ ಲೋಕಸಭೆ ಚುನಾವಣೆ ಬಗ್ಗೆ ಏನು ಭವಿಷ್ಯ ನುಡಿದಿವೆ? ಕೇಂದ್ರದಲ್ಲಿ ಗೆಲುವು ಯಾವ ಪಕ್ಷಕ್ಕೆ? ಬಿಜೆಪಿ ನೇತೃತ್ವದಲ್ಲಿ, ಎನ್‌ಡಿಎ ಒಕ್ಕೂಟ ಹ್ಯಾಟ್ರಿಕ್ ಬಾರಿಸುತ್ತಾ? ಮುಂದೆ ಓದಿ.

Lok Sabha Election 2024 This Poll Survey Saying That BJP Leading NDA Will Win Near 400 Seats

ಬಿಜೆಪಿ ನೇತೃತ್ವದ ಎನ್‌ಡಿಎಗೆ...

ಹೌದು TN-ETG ಸಮೀಕ್ಷೆ ಪ್ರಕಾರ, ಬಿಜೆಪಿ ಪಕ್ಷ ಸ್ವತಂತ್ರವಾಗಿ ಸರ್ಕಾರ ರಚಿಸುವ ಮುನ್ಸೂಚನೆ ಸಿಕ್ಕಿದೆ. ಬಿಜೆಪಿ ನೇತೃತ್ವದ ಎನ್‌ಡಿಎ 358 ರಿಂದ 398 ಸ್ಥಾನಗಳನ್ನು ಗೆದ್ದು, ಸರ್ಕಾರ ರಚಿಸಲಿದೆ ಎನ್ನಲಾಗಿದೆ. ಆದ್ರೆ ಕಾಂಗ್ರೆಸ್ ನೇತೃತ್ವದಲ್ಲಿ ಇಂಡಿಯಾ ಒಕ್ಕೂಟ ಕೇವಲ 110 ರಿಂದ 130 ಸ್ಥಾನ ಗೆಲ್ಲಬಹುದು ಎಂದು ಸಮೀಕ್ಷೆ ವರದಿ ಹೇಳುತ್ತಿದೆ. ಈ ಮೂಲಕ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ ಮತ್ತೊಮ್ಮೆ ಅಧಿಕಾರಕ್ಕೆ ಏರುವುದು ಪಕ್ಕಾ ಎನ್ನಲಾಗಿದೆ. ಹಾಗೇ ಹ್ಯಾಟ್ರಿಕ್ ಸಾಧನೆ ಮಾಡಲು ಪ್ರಧಾನಿ ಮೋದಿ ಪಡೆ ಇದೀಗ ಮುನ್ನುಗ್ಗುತ್ತಿದೆ.

ಮೋದಿ ಸರ್ಕಾರಕ್ಕೆ 10 ವರ್ಷದ ಸಂಭ್ರಮ

2014ರಲ್ಲಿ ಅಧಿಕಾರಕ್ಕೆ ಬಂದಿರುವ ಮೋದಿ ಅವರ ಸರ್ಕಾರ 10 ವರ್ಷ ಪೂರೈಸಿ, ಮತ್ತೊಂದು ದಶಕಕ್ಕೆ ಕಾಲಿಡುತ್ತಿದೆ. ಹೀಗಾಗಿ 2024 ಲೋಕಸಭೆ ಚುನಾವಣೆ ಅಖಾಡ ರಂಗೇರಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ 'ಎನ್‌ಡಿಎ' ಒಕ್ಕೂಟ ಗೆಲುವಿಗೆ ತಂತ್ರ ರೂಪಿಸುತ್ತಿದ್ದರೂ, ಮತ್ತೊಂದು ಕಡೆ ವಿರೋಧ ಪಕ್ಷಗಳು ಇಂಡಿಯಾ ಒಕ್ಕೂಟ ರಚಿಸಿವೆ. ಹೀಗಾಗಿ ಈ ಬಾರಿ 2 ಕಡೆ, ಜಿದ್ದಾಜಿದ್ದಿ ಜೋರಾದ ಸಮಯದಲ್ಲೇ 2024 ರ ಲೋಕಸಭೆ ಚುನಾವಣಾ ಸಮೀಕ್ಷೆ ಸಂಚಲನ ಸೃಷ್ಟಿಸಿದೆ. ಹಾಗೇ ಮೋದಿ ಅವರ ನೇತೃತ್ವದಲ್ಲಿ ಹ್ಯಾಟ್ರಿಕ್ ಗ್ಯಾರಂಟಿ ಎನ್ನುತ್ತಿವೆ ಸಮೀಕ್ಷೆಗಳು.

ದಕ್ಷಿಣ ಭಾರತದಲ್ಲಿ ಹೆಚ್ಚಿನ ನಿರೀಕ್ಷೆ

2024ರ ಲೋಕಸಭೆ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಸ್ಥಾನಗಳ ಟಾರ್ಗೆಟ್ ಮಾಡಿರುವ ಬಿಜೆಪಿ ದಕ್ಷಿಣ ಭಾರತದಲ್ಲಿ ಬಾವುಟ ನೆಟ್ಟು ಬಲ ಪ್ರದರ್ಶನ ಮಾಡಲು ಸಿದ್ಧತೆ ನಡೆಸಿದೆ. ಹೀಗಾಗಿಯೇ ದೇಶಾದ್ಯಂತ ಹೊಸ ಸ್ಟ್ರಾಟಜಿ ಶುರುವಾಗಿದೆ. ಇದಕ್ಕೆ ಪೂರಕವಾಗಿ ಇದೀಗ ಸಮೀಕ್ಷೆಗಳಲ್ಲೂ ಬಿಜೆಪಿಗೆ ಜಯ ಸಿಗುತ್ತಿದೆ. ಹಿಗಿದ್ದರು ಕೂಡ ಮತದಾರ ಪ್ರಭು ಯಾರ ಪರವಾಗಿ ಮತವನ್ನು ಹಾಕಲಿದ್ದಾನೆ? ಅನ್ನೋದನ್ನ ಕಾದು ನೋಡಬೇಕಿದೆ. ಇದೆಲ್ಲಾ ಏನೇ ಇದ್ರೂ ಚುನಾವಣೆ, ಅಖಾಡ ಮಾತ್ರ ಈಗ ಸಖತ್ ರಂಗೇರಿದೆ.

Lok Sabha Election 2024 This Poll Survey Saying That BJP Leading NDA Will Win Near 400 Seats

ಒಟ್ನಲ್ಲಿ ಈ ಬಾರಿ ಲೋಕಸಭೆ ಚುನಾವಣೆ ಇಡೀ ಜಗತ್ತಿನ ಗಮನ ಸೆಳೆದಿದೆ. ಅದರಲ್ಲೂ, ಅಮೆರಿಕ, ಯುರೋಪ್, ಚೀನಾ, ಜಪಾನ್ ಸೇರಿದಂತೆ ಜಗತ್ತಿನ ದೊಡ್ಡ ದೊಡ್ಡ ದೇಶದ ಮುಖ್ಯಸ್ಥರು ಕೂಡ ಭಾರತದ ಚುನಾವಣೆ ಬಗ್ಗೆ ಗಮನ ಹರಿಸಿದ್ದಾರೆ. ಯಾಕಂದ್ರೆ ಭಾರತ ಈಗ ಜಾಗತಿಕ ಶಕ್ತಿಯಾಗಿ ಬೆಳೆಯುತ್ತಿದೆ. ಹೀಗಾಗಿ ಭಾರತದಲ್ಲಿ ಯಾವ ಪಕ್ಷಕ್ಕೆ ಚುನಾವಣೆ ಅಖಾಡದಲ್ಲಿ ಗೆಲುವು ಸಿಗುತ್ತೆ? ಅಂತಾ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+