Lok sabha election 2024: ಮೈತ್ರಿ ಹೊರತಾಗಿಯೂ ಕರ್ನಾಟಕದ ಎಲ್ಲಾ 28 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧೆ

ಬೆಂಗಳೂರು, ಜುಲೈ 20: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ವಿರೋಧ ಪಕ್ಷಗಳು ಒಂದಾಗಿವೆ. ಇಂಡಿಯನ್‌ ನ್ಯಾಷನಲ್‌ ಡೆವೆಲಪ್‌ಮೆಂಟಲ್‌ ಇನ್‌ಕ್ಲೂಸಿವ್‌ ಅಲಯನ್ಸ್‌ (ಐಎನ್‌ಡಿಐಎ) ಅಡಿಯಲ್ಲಿ ವಿರೋಧ ಪಕ್ಷಗಳು ಎನ್‌ಡಿಎ ಮೈತ್ರಿಕೂಟವನ್ನು ಎದುರಿಸಲಿವೆ. ಪ್ರಮುಖವಾಗಿ ಕಾಂಗ್ರೆಸ್, ಎಎಪಿ, ಟಿಎಂಸಿ, ಡಿಎಂಕೆ ಸೇರಿದಂತೆ ಎಡಪಕ್ಷಗಳು ಒಟ್ಟಾಗಿವೆ. ಆದರೂ, ಕರ್ನಾಟಕದಲ್ಲಿನ 28 ಲೋಕಸಭಾ ಸ್ಥಾನಗಳಿಗೆ ಕಾಂಗ್ರೆಸ್‌ ಸ್ಪರ್ಧಿಸಲಿದೆ ಎಂದು ಮೂಲಗಳು ಹೇಳಿವೆ.

ಐಎನ್‌ಡಿಐಎ ಪಕ್ಷಗಳು ಸೀಟು ಹಂಚಿಕೆ ವಿಚಾರದಲ್ಲಿ ಇನ್ನೂ ನಿರ್ಧಾರಕ್ಕೆ ಬಂದಿಲ್ಲ. ಮುಂದಿನ ದಿನಗಳಲ್ಲಿ ಈ ಪಕ್ಷಗಳು ಯಾವ ನಿರ್ಧಾರಕ್ಕೆ ಬರಲಿವೆ ಎಂಬುದನ್ನು ಕಾದುನೋಡಬೇಕಿದೆ. ಆದರೆ, ಕರ್ನಾಟಕದ ಮಟ್ಟಿಗೆ ಕಾಂಗ್ರೆಸ್‌ ಎಲ್ಲಾ ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿದೆ ಎಂದು ಗೊತ್ತಾಗಿದೆ.

Lok sabha election 2024: Congress contest in all 28 Lok Sabha constituencies of Karnataka

ಎಎಎಪಿ ಉಪಸ್ಥಿತಿಯ ನಡುವೆಯೂ ಈ ನಿರ್ಧಾರಕ್ಕೆ ಬರುವುದು ಪಕ್ಕಾ ಆಗಿದೆ. ಕರ್ನಾಟಕದಲ್ಲಿ ಎಎಪಿ ಅಸ್ತಿತ್ವವನ್ನು ಹೊಂದಿದ್ದರೂ, ಗೆಲುವ ಸಾಧಿಸುವಷ್ಟು ಪ್ರಬಲವಾಗಲ್ಲ ಎಂಬುದು ಇದಕ್ಕೆ ಕಾರಣವಾಗಿದೆ.

ಹಿಂದಿನ ಚುನಾವಣೆಗಳಲ್ಲಿ ಪಕ್ಷಗಳ ಮತಗಳಿಕೆಯನ್ನು ಆಧರಿಸಿ ಸೀಟು ಹಂಚಿಕೆ ನಡೆಯಲಿದೆ ಎಂದು ಕಾಂಗ್ರೆಸ್ ಹಿರಿಯ ಕಾರ್ಯಕಾರಿ ಮತ್ತು ಎಂಎಲ್‌ಸಿ ಬಿಕೆ ಹರಿಪ್ರಸಾದ್ ಹೇಳಿದ್ದಾರೆ.

'ಈ ಮಾನದಂಡದ ಪ್ರಕಾರ ಕಾಂಗ್ರೆಸ್ ಕರ್ನಾಟಕದ ಎಲ್ಲಾ 28 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಅಲಯನ್ಸ್ ಪಾಲುದಾರರು ಇತರ ರಾಜ್ಯಗಳಲ್ಲಿ ಅವರ ಉಪಸ್ಥಿತಿಗೆ ಅನುಗುಣವಾಗಿ ಸ್ಥಾನಗಳನ್ನು ಪಡೆಯುತ್ತಾರೆ' ಎಂದು ತಿಳಿಸಿದ್ದಾರೆ.

Lok sabha election 2024: Congress contest in all 28 Lok Sabha constituencies of Karnataka

ಕರ್ನಾಟಕಕ್ಕೆ ಎಎಪಿ ಹೊಸ ಪಕ್ಷವಾಗಿದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ 209 ಕ್ಷೇತ್ರಗಳಲ್ಲಿ ( 224 ಸ್ಥಾನಗಳ ಪೈಕಿ) ಎಎಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆದರೆ, ಅದು ಕೇವಲ ಶೇ 0. 6 ಮತಗಳನ್ನು ಗಳಿಸುವಲ್ಲಿ ಸಫಲವಾಯಿತು. ಸಿಪಿಐ ಮತ್ತು ಸಿಪಿಐ (ಎಂ), ಕ್ರಮವಾಗಿ ಶೇ 0. 02 ಮತ್ತು ಶೇ 0. 06 ಪಡೆದಿವೆ. ಕಾಂಗ್ರೆಸ್ ಶೇ.43ರಷ್ಟು ಮತಗಳನ್ನು ಪಡೆದಿದೆ.

ಈ ಹಿನ್ನೆಲೆಯಲ್ಲಿ ನೋಡುವುದಾದರೆ, ಅಲಯನ್ಸ್‌ನಲ್ಲಿರುವ ಪಕ್ಷಗಳು ಕಾಂಗ್ರೆಸ್‌ಗೆ ಬೆಂಬಲ ನೀಡಬೇಕಾಗುತ್ತದೆ. ಇದನ್ನು ಮುಂದಿನ ದಿನಗಳಲ್ಲಿ ನಾಯಕರು ಚರ್ಚಿಸಿ ನಿರ್ಧಾರಕ್ಕೆ ಬರಲಿದ್ದಾರೆ. ಕಾಂಗ್ರೆಸ್‌ನ ನಾಯಕ ರಾಹುಲ್ ಗಾಂಧಿ ಅವರು ಬುಧವಾರ ಬೆಂಗಳೂರಿನಲ್ಲಿ ಚುನಾವಣಾ ಕಾರ್ಯತಂತ್ರದ ಕುರಿತು ಚರ್ಚಿಸಲು ರಾಜ್ಯ ಘಟಕದ ಹಿರಿಯ ಪದಾಧಿಕಾರಿಗಳ ಸಭೆಯನ್ನು ಕರೆದಿದ್ದರು. ಆದರೆ ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ನಿಧನದ ಕಾರಣ ಸಭೆಯನ್ನು ರದ್ದುಗೊಳಿಸಲಾಯಿತು.

Lok sabha election 2024: Congress contest in all 28 Lok Sabha constituencies of Karnataka

'I-N-D-I-A' ಮೈತ್ರಿಯಲ್ಲಿನ ಪಕ್ಷಗಳ ಪಟ್ಟಿ

ಕಾಂಗ್ರೆಸ್: ಕಾಂಗ್ರೆಸ್ 80 ಸಂಸದರೊಂದಿಗೆ (ಲೋಕಸಭೆಯಲ್ಲಿ 49 ಮತ್ತು ರಾಜ್ಯಸಭೆಯಲ್ಲಿ 31) ಮೈತ್ರಿಕೂಟದಲ್ಲಿ ಅತಿದೊಡ್ಡ ಪಕ್ಷವಾಗಿದೆ.

ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಟಿಎಂಸಿ)

ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ)

ಆಮ್ ಆದ್ಮಿ ಪಕ್ಷ (ಎಎಪಿ)

ಜನತಾ ದಳ (ಯುನೈಟೆಡ್)

ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ)

ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ)

ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ)

ಶಿವಸೇನೆ (ಯುಬಿಟಿ)

ಸಮಾಜವಾದಿ ಪಕ್ಷ (ಎಸ್‌ಪಿ)

ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ)

ಅಪ್ನಾ ದಳ (ಕಾಮೆರವಾಡಿ)

ಜಮ್ಮು ಮತ್ತು ಕಾಶ್ಮೀರ ರಾಷ್ಟ್ರೀಯ ಸಮ್ಮೇಳನ (ಎನ್‌ಸಿ)

ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ)

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ)

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ)

ಕ್ರಾಂತಿಕಾರಿ ಸಮಾಜವಾದಿ ಪಕ್ಷ (ಆರ್‌ಎಸ್‌ಪಿ)

ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್

ಮರುಮಲಾರ್ಚಿ ದ್ರಾವಿಡ ಮುನ್ನೇತ್ರ ಕಳಗಂ (ಎಂಡಿಎಂಕೆ)

ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ)

ಕೊಂಗುನಾಡು ಮಕ್ಕಳ್ ದೇಸಿಯಾ ಕಚ್ಚಿ (ಕೆಎಂಡಿಕೆ)

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್-ಲೆನಿನಿಸ್ಟ್) ಲಿಬರೇಶನ್

ಮನಿತನೇಯ ಮಕ್ಕಳ್ ಕಚ್ಚಿ (ಎಂಎಂಕೆ)

ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್‌)

ಕೇರಳ ಕಾಂಗ್ರೆಸ್ (ಎಂ)

ಕೇರಳ ಕಾಂಗ್ರೆಸ್ (ಜೋಸೆಫ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+