2019ರ ಸಾರ್ವತ್ರಿಕ ರಜಾದಿನಗಳ ಪಟ್ಟಿ: ಭರಪೂರ ಸರಣಿ ರಜೆಯ ಸಂಭ್ರಮ
2019ರ ಸಾಲಿನ ಸರಕಾರೀ ರಜಾದಿನಗಳ ಪಟ್ಟಿಯನ್ನು ರಾಜ್ಯ ಸರಕಾರ, ಶುಕ್ರವಾರ (ನ 16) ಬಿಡುಗಡೆ ಮಾಡಿದೆ. ಕಡ್ಡಾಯ ರಾಷ್ಟ್ರೀಯ ರಜಾದಿನಗಳ ಪೈಕಿ, ಒಂದು ರಜೆ ಶನಿವಾರದಂದು ಬಂದಿದೆ.
ಮುಂದಿನ ವರ್ಷದ ಒಟ್ಟು 25 ರಾಜ್ಯ ಸರಕಾರೀ ರಜಾದಿನಗಳಲ್ಲಿ, ನಾಲ್ಕು ರಜೆಗಳು ಭಾನುವಾರದಂದು ಬಂದಿರುವುದು, ಸರಕಾರೀ ನೌಕರರ ಬೇಸರಕ್ಕೆ ಕಾರಣವಾಗಬಹುದು.

ಹೆಚ್ಚಿನ ರಜೆಗಳು, ವಾರಾಂತ್ಯಕ್ಕೆ ಹೊಂದಿಕೊಂಡು ಬಂದಿರುವುದರಿಂದ, 2019ರ ಸಾಲಿನಲ್ಲೂ ಸಾಲುಸಾಲು ಸರಣಿ ರಜೆಯ ಸವಿಯನ್ನು ಸವಿಯಬಹುದಾಗಿದೆ. ಕರ್ನಾಟಕ ಸರಕಾರ ಬಿಡುಗಡೆ ಮಾಡಿದ ಒಟ್ಟು 25ದಿನ ರಜಾಗಳ ಪಟ್ಟಿ ಇಂತಿದೆ:
| ಕ್ರ,ಸಂ | ದಿನಾಂಕ | ದಿನ | ಹಬ್ಬ/ ಜಯಂತಿ |
| 1 | 15.01.2019 | ಮಂಗಳವಾರ | ಮಕರ ಸಂಕ್ರಾಂತಿ |
| 2 | 26.01.2019 | ಶನಿವಾರ | ಗಣರಾಜ್ಯೋತ್ಸವ |
| 3 | 04.03.2019 | ಸೋಮವಾರ | ಮಹಾ ಶಿವರಾತ್ರಿ |
| 4 | 06.04.2019 | ಶನಿವಾರ | ಚಾಂದ್ರಮಾನ ಯುಗಾದಿ |
| 5 | 14.04.2019 | ಭಾನುವಾರ | ಡಾ. ಅಂಬೇಡ್ಕರ್ ಜಯಂತಿ/ ಸೌರಮಾನ ಯುಗಾದಿ |
| 6 | 17.04.2019 | ಬುಧವಾರ | ಮಹಾವೀರ ಜಯಂತಿ |
| 7 | 19.04.2019 | ಶುಕ್ರವಾರ | ಗುಡ್ ಫ್ರೈಡೇ |
| 8 | 01.05.2019 | ಬುಧವಾರ | ಕಾರ್ಮಿಕರ ದಿನಾಚರಣೆ |
| 9 | 07.05.2019 | ಮಂಗಳವಾರ | ಬಸವ ಜಯಂತಿ |
| 10 | 05.06.2019 | ಬುಧವಾರ | ರಂಜಾನ್ |
| 11 | 12.08.2019 | ಸೋಮವಾರ | ಬಕ್ರೀದ್ |
| 12 | 15.08.2019 | ಗುರುವಾರ | ಸ್ವಾತಂತ್ರ್ಯ ದಿನಾಚರಣೆ |
| 13 | 02.09.2019 | ಸೋಮವಾರ | ಗಣೇಶ ಚತುರ್ಥಿ |
| 14 | 10.09.2019 | ಮಂಗಳವಾರ | ಮೊಹರಂ |
| 15 | 28.09.2019 | ಶನಿವಾರ | ಮಹಾಲಯ ಅಮಾವಾಸ್ಯೆ |
| 16 | 02.10.2019 | ಬುಧವಾರ | ಗಾಂಧಿ ಜಯಂತಿ |
| 17 | 07.10.2019 | ಸೋಮವಾರ | ಮಹಾನವಮಿ, ಆಯುಧಪೂಜೆ |
| 18 | 08.10.2019 | ಮಂಗಳವಾರ | ವಿಜಯದಶಮಿ |
| 19 | 13.10.2019 | ಭಾನುವಾರ | ವಾಲ್ಮೀಕಿ ಜಯಂತಿ |
| 20 | 27.10.2019 | ಭಾನುವಾರ | ನರಕ ಚತುರ್ದಶಿ |
| 21 | 29.10.2019 | ಮಂಗಳವಾರ | ದೀಪಾವಳಿ, ಬಲಿಪಾಡ್ಯ |
| 22 | 01.11.2019 | ಶುಕ್ರವಾರ | ಕರ್ನಾಟಕ ರಾಜ್ಯೋತ್ಸವ |
| 23 | 10.11.2019 | ಭಾನುವಾರ | ಈದ್ ಮಿಲಾದ್ |
| 24 | 15.11.2019 | ಶುಕ್ರವಾರ | ಕನಕದಾಸ ಜಯಂತಿ |
| 25 | 25.12.2019 | ಬುಧವಾರ | ಕ್ರಿಸ್ಮಸ್ |












Click it and Unblock the Notifications