Liquor Price Hike: ಮದ್ಯ ಪ್ರಿಯರಿಗೆ ಇಷ್ಟರಲ್ಲಿ ಮತ್ತೊಂದು ಶಾಕ್!

Liquor Price Hike: ಕರ್ನಾಟಕದಲ್ಲಿ ಮದ್ಯಪ್ರಿಯರಿಗೆ ಮತ್ತೊಂದು ಶಾಕ್ ಎದುರಾಗುವ ಸಾಧ್ಯತೆ ಇದೆ. ಎರಡು ವರ್ಷದ ಅವಧಿಯಲ್ಲಿ ಮದ್ಯದ ಬೆಲೆಯು ಮೂರು ಬಾರಿ ಹೆಚ್ಚಳವಾಗಿದೆ. ಹೀಗಾಗಿ, ಮದ್ಯದ ಬೆಲೆ ಏರಿಕೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ಇದರ ನಡುವೆ ಮದ್ಯ ಪ್ರಿಯರಿಗೆ ಪರೋಕ್ಷವಾಗಿ ಹೊಸ ಶಾಕ್‌ವೊಂದು ಎದುರಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಮದ್ಯದ ಬೆಲೆ ಹಾಗೂ ಸೇವಾ ಶುಲ್ಕವೂ ಹೆಚ್ಚಳವಾಗುವ ಸಾಧ್ಯತೆ ಇದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಮೇಲೆ ಸತತವಾಗಿ ಮದ್ಯದ ಬೆಲೆ ಏರಿಕೆಯಾಗಿದೆ. ಮದ್ಯ ಹಾಗೂ ಬಿಯರ್ ಬೆಲೆ ಹಲವು ಬಾರಿ ಹೆಚ್ಚಳವಾಗಿದೆ. ಸಾಮಾನ್ಯವಾಗಿ ರಾಜ್ಯದಲ್ಲಿ ರಾಜ್ಯ ಸರ್ಕಾರಗಳು ಬಜೆಟ್ ಮಂಡನೆ ಮಾಡುವಾಗ ಮದ್ಯದ ಬೆಲೆ ಏರಿಕೆ ಮಾಡುವುದು ಇದೆ. ಆದರೆ ಇದೀಗ ಮತ್ತೊಂದು ಕಾರಣಕ್ಕೆ ರಾಜ್ಯದಲ್ಲಿ ಮದ್ಯ ಪ್ರಿಯರಿಗೆ ಶಾಕ್ ಎದುರಾಗುತ್ತಿದೆ. ಇನ್ನು ಮದ್ಯ ಕಂಪನಿಗಳ ವಿರೋಧದ ನಡುವೆಯೂ ಕಳೆದ ಬಾರಿ ಮದ್ಯದ ಬೆಲೆ ಏರಿಕೆಯಾಗಿತ್ತು. ಇದೀಗ ಬಾರ್ ಮತ್ತು ರೆಸ್ಟೋರೆಂಟ್, ಕ್ಲಬ್ ಉದ್ಯಮಿಗಳ ವಿರೋಧದ ನಡುವೆಯೂ ಬೆಲೆ ಏರಿಕೆಯಾಗಿದೆ. ಯಾವ ಬೆಲೆ ಏರಿಕೆ ಹಾಗೂ ಇದು ಮದ್ಯ ಪ್ರಿಯರ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವ ಸಂಪೂರ್ಣ ವಿವರ ನೋಡೋಣ.

liquor Price Hike in Karnataka Another shock for alcohol lovers

ಅಬಕಾರಿ ಲೈಸೆನ್ಸ್‌ಗಳ ನವೀಕರಣ ಶುಲ್ಕವನ್ನು ಕರ್ನಾಟಕ ಸರ್ಕಾರವು ಬರೋಬ್ಬರಿ ಶೇ 50ರಷ್ಟು ಹೆಚ್ಚಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಪರಿಷ್ಕೃತ ಶುಲ್ಕವು ಮುಂದಿನ ತಿಂಗಳು / ಜುಲೈ 1ರಿಂದಲೇ ಅನ್ವಯ ಆಗಲಿದೆ ಎಂದು ಹೇಳಲಾಗಿದೆ. ಇನ್ನು ಕರ್ನಾಟಕ ಸರ್ಕಾರವು ಒಂದೇ ಬಾರಿ ನವೀಕರಣ ಶುಲ್ಕವನ್ನು ಶೇ 100ರಷ್ಟು ಹೆಚ್ಚಿಸುವುದಕ್ಕೆ ಮುಂದಾಗಿತ್ತು. ಆದರೆ, ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಮದ್ಯದಂಗಡಿಗಳ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಈ ಹಿಂದಿನ ನಿರ್ಧಾರದಿಂದ ರಾಜ್ಯ ಸರ್ಕಾರವು ಹಿಂದೆ ಸರಿದಿದೆ. ಇನ್ನು ಇದು ಮದ್ಯ ಪ್ರಿಯರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಮದ್ಯ ಪ್ರಿಯರಿಗೆ ಶಾಕ್: ಇನ್ನು ಅಬಕಾರಿ ಲೈಸೆನ್ಸ್‌ ಹೆಚ್ಚಳವಾಗಿರುವುದರಿಂದ ಮುಂದಿನ ದಿನಗಳಲ್ಲಿ ಮದ್ಯ ಪ್ರಿಯರಿಗೆ ಶಾಕ್ ಕಾದಿದೆ ಎಂದು ಹೇಳಲಾಗುತ್ತಿದೆ. ಬಾರ್ & ರೆಸ್ಟೋರೆಂಟ್ ಮತ್ತು ಕ್ಲಬ್‌ಗಳ ನವೀಕರಣ ಶುಲ್ಕ ಹೆಚ್ಚಳವಾಗಿರುವುದರಿಂದ ಮುಂದಿನ ದಿನಗಳಲ್ಲಿ ಮದ್ಯದ ಬೆಲೆ ಹಾಗೂ ಸೇವಾ ಶುಲ್ಕ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಯಾವ ಪ್ರದೇಶದಲ್ಲಿ ಎಷ್ಟು ಶುಲ್ಕ ಹೆಚ್ಚಳ ?

ಪ್ರದೇಶ ಶುಲ್ಕ ವಿವರ

* 20 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಮಹಾನಗರ ಪಾಲಿಕೆ: 9 ಲಕ್ಷ ರೂಪಾಯಿ.

* ಇತರೆ ಮಹಾನಗರ ಪಾಲಿಕೆ ಪ್ರದೇಶದಲ್ಲಿ: 7.50 ಲಕ್ಷ ರೂಪಾಯಿ.

* ನಗರಸಭೆ ಪ್ರದೇಶದಲ್ಲಿ 6.75 ಲಕ್ಷ ರೂಪಾಯಿ.

* ಪಟ್ಟಣ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 6 ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ. ಇನ್ನು ಜನಸಂಖ್ಯೆಗೆ ಅನುಗುಣವಾಗಿ ಶುಲ್ಕ ಬದಲಾಗುವ ಸಾಧ್ಯತೆ ಇದೆ ಎಂದೂ ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+