ವಿಧಾನಪರಿಷತ್ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ
Recommended Video

ವಿಧಾನಪರಿಷತ್ ಚುನಾವಣೆ : ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ | Oneindia Kannada
ಬೆಂಗಳೂರು, ಮೇ 30: ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿಯು ಐವರು ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಈ ಬಾರಿ ಬಿಜೆಪಿಯು ಕೆಲವು ಹೊಸಬರಿಗೆ ಅವಕಾಶ ನೀಡಿದೆ.
ಹೊಸದಾಗಿ ಬಿಜೆಪಿ ಸೇರ್ಪಡೆಗೊಂಡಿರುವ ಕೆ.ಪಿ.ನಂಜುಂಡಿ ಅವರಿಗೆ ಅವಕಾಶ ನೀಡಲಾಗಿದೆ. ಜೊತೆಗೆ ಶಿವಮೊಗ್ಗ ನಗರ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿ ಆಗಿದ್ದ ಎಸ್.ರುದ್ರೇಗೌಡ ಅವರಿಗೂ ಅವಕಾಶ ನೀಡಲಾಗಿದೆ.

104 ಶಾಸಕರ ಬಲವನ್ನು ಹೊಂದಿರುವ ಅತಿ ದೊಡ್ಡ ಪಕ್ಷ ಬಿಜೆಪಿಯು ಅಭ್ಯರ್ಥಿಗಳನ್ನು ಅವಿರೋಧವಾಗಿ ಪರಿಷತ್‌ಗೆ ಆಯ್ಕೆ ಮಾಡುವ ಅವಕಾಶ ಹೊಂದಿದೆ.

ಜೂನ್ 17ರಂದು 11 ಸದಸ್ಯರು ನಿವೃತ್ತರಾಗಲಿದ್ದು, ಅವರ ಸ್ಥಾನವನ್ನು ಭರ್ತಿ ಮಾಡಲು ಜೂನ್ 11ರಂದು ಚುನಾವಣೆ ನಡೆಯಲಿದೆ.

ಬಿಜೆಪಿ ಅಭ್ಯರ್ಥಿಗಳು
* ಎಸ್.ರುದ್ರೇಗೌಡ
* ಕೆ.ಪಿ.ನಂಜುಂಡಿ
* ಎನ್.ರವಿಕುಮಾರ್
* ತೇಜಸ್ವಿನಿ ಗೌಡ
* ರಘುನಾಥ ಮಾಲಕಪುರೆ












Click it and Unblock the Notifications