ಹಬ್ಬದ ಸೀಸನ್ ನಲ್ಲಿ ಬಂಪರ್ ಕೊಡುಗೆಗಳ ಘೋಷಣೆ ಮಾಡಿದ ಯಮಹಾ ಮೋಟರ್ಸ್ : ಕೆಲವೇ ದಿನಗಳು ಮಾತ್ರ
ದೇಶದಲ್ಲಿ ಮತ್ತು ರಾಜ್ಯದಲ್ಲಿ ಹಬ್ಬದ ಸೀಸನ್ ಆರಂಭವಾಗಿದೆ. ಈ ಸಂದರ್ಭದಲ್ಲಿ ಖರೀದಿಗಳ ಭರಾಟೆ ಜೋರಾಗಿಯೇ ಇರುತ್ತದೆ. ಇದರ ಉಪಯೋಗವನ್ನು ಭರಪೂರವಾಗಿ ಪಡೆದುಕೊಳ್ಳುವ ಸಂಸ್ಥೆಗಳು ಹೊಸಹೊಸ ಆಫರ್ ಅನ್ನು ನೀಡುತ್ತದೆ.
ಸಾಮಾನ್ಯವಾಗಿ ದಸರಾ ಮತ್ತು ದೀಪಾವಳಿ ಹಬ್ಬದ ಸೀಸನ್, ವರ್ಷದ ಅತಿಹೆಚ್ಚು ವಹಿವಾಟು ನಡೆಯುವ ಸೀಸನ್ ಎಂದೇ ಬಿಂಬಿತವಾಗಿರುತ್ತದೆ. ಕೊರೊನಾ ಹೊಡೆತದಿಂದ ಉದ್ಯಮಗಳು ಸರಿದಾರಿಗೆ ಬರಲು ಆರಂಭಿಸಿದೆ.

ದ್ವಿಚಕ್ರ ವಾಹನದಲ್ಲಿ ಮಂಚೂಣಿಯಲ್ಲಿ ಬರುವ ಹೆಸರು ಯಮಹಾ, ಈಗ ಯಮಹಾ ಮೋಟರ್ಸ್ ಇಂಡಿಯಾ ದಸರಾ ಹಬ್ಬದ ಹಿನ್ನೆಲೆಯಲ್ಲಿ ವಿಶೇಷ ಕೊಡುಗೆಗಳನ್ನು ಘೋಷಿಸಿದೆ. ಈ ಕೊಡುಗೆಗಳು 31 ಅಕ್ಟೋಬರ್ 2023 ರವರೆಗೆ ಮಾತ್ರ ಲಭ್ಯವಿದೆ ಎನ್ನುವುದನ್ನು ಮರೆಯಬಾರದು.
ಹಾಗಾದರೆ, ಯಮಹಾ ಮೋಟರ್ಸ್ ತನ್ನ ಎಲ್ಲಾ ಪ್ರೊಡಕ್ಟ್ ಗಳಿಗೆ ಆಫರ್ ನೀಡುತ್ತಿದೆಯೇ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲ ಎನ್ನುವುದು. ಈ ಕೊಡುಗೆ 150cc FZ-X ಮತ್ತು 125 Fi Hybrid ಸ್ಕೂಟರ್ ಗಳಿಗೆ ಮತ್ತು RayZR ಮತ್ತು Fascino ಮಾತ್ರ ಅನ್ವಯವಾಗುತ್ತದೆ.
ಅದರ ಸಂಕ್ಷಿಪ್ತ ಮಾಹಿತಿ ಈ ರೀತಿಯಿದೆ:
1. 3,000/ ರೂಪಾಯಿಗಳ ಇನ್ ಸ್ಟಂಟ್ ಕ್ಯಾಶ್ ಬ್ಯಾಕ್
2. ಆಕರ್ಷಕ ಹಣಕಾಸು ಯೋಜನೆಗಳು ಮತ್ತು 2,999 ರೂಪಾಯಿಗಳಿಂದ ಆರಂಭವಾಗುವ ಅತ್ಯಂತ ಕಡಿಮೆ ಡೌನ್ ಪೇಮೆಂಟ್ ಸೌಲಭ್ಯ.
ಯಮಹಾದ ಪ್ರಸ್ತುತದ ವಾಹನಗಳ ವಿವರಗಳು:
ಬೈಕ್
YZF-R15 V4 (155cc)
YZF-R15S V3 (155cc)
MT-15 V2 (155cc)
FZS-FI ಆವೃತ್ತಿ 4.0 (149cc)
FZS-FI ಆವೃತ್ತಿ 3.0 (149cc)
FZ-FI (149cc)
FZ-X (149cc)
ಸ್ಕೂಟರ್
Aerox 155 (155cc)
Fascino 125 FI Hybrid (125cc)
Ray ZR 125 FI Hybrid (125cc)
Ray ZR Street Rally 125 FI Hybrid (125cc)












Click it and Unblock the Notifications