ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಮುಖ್ಯಮಂತ್ರಿ ಆದಾಗಲೇ ಹೀಗಾಗೋದು ಯಾಕೇ?

By ಅನಿಲ್ ಬಾಸೂರ್
|
Google Oneindia Kannada News

ಬೆಂಗಳೂರು, ಡಿ. 20: ಅದ್ಯಾಕೊ ಗೊತ್ತಿಲ್ಲ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿರುವಾಗಲೇ ಇಂತಹ ಘಟನೆಗಳು ಆಗುತ್ತವೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯ ಲೋಪವಾಗುತ್ತದೆ. ಅವರು ಕಳೆದ ಬಾರಿ ಸಿಎಂ ಆಗಿದ್ದಾಗಲೂ ಕೂಡ ರಾಜ್ಯದಲ್ಲಿ ಅನೇಕ ಸಲ ಕಾನೂನು ವ್ಯವಸ್ಥೆ ಭಂಗವಾಗಿದ್ದ ಉದಾಹಣೆಗಳಿವೆ.

ಬಿಜೆಪಿ ಸರ್ಕಾರ ಆಡಳಿತದಲ್ಲಿ ಇದ್ದಾಗಲೇ ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್‌, ರಾಜ್ಯದ ವಿವಿಧೆಡೆ ಚರ್ಚ್‌ಗಳ ಮೇಲೆ ದಾಳಿಗಳಾಗಿದ್ದವು. ಇದೀಗ ಮತ್ತೆ ಮಂಗಳೂರಿನಲ್ಲಿ ಗೋಲಿಬಾರ್ ನಡೆದಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಕಾರಣ ಏನೇ ಇರಲಿ ಇದು ಸಹಜವಾಗಿಯೆ ಸಾರ್ವಜನಿಕರಲ್ಲಿ ಚರ್ಚೆ ಹಾಗೂ ಆತಂಕಕ್ಕೆ ಕಾರಣವಾಗಿದೆ.

ಹಾವೇರಿ ಗೋಲಿಬಾರ್‌ನಲ್ಲಿ ಮೃತಪಟ್ಟಿದ್ದ ಇಬ್ಬರು ರೈತರು

ಹಾವೇರಿ ಗೋಲಿಬಾರ್‌ನಲ್ಲಿ ಮೃತಪಟ್ಟಿದ್ದ ಇಬ್ಬರು ರೈತರು

ಹಿಂದೆ 2008 ರಲ್ಲಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ 8 ದಿನಗಳಲ್ಲಿಯೆ ರೈತರ ಮೇಲೆ ಗೋಲಿಬಾರ್ ಆಗಿತ್ತು. 2008 ಜೂನ್ 10 ರಂದು ಹಾವೇರಿಯಲ್ಲಿ ಬೀಜ-ಗೊಬ್ಬರ ವಿತರಣೆಗೆ ಸಂಬಂಧಿಸಿದಂತೆ ವಿವಿಧ ರೈತ ಸಂಘಟನೆಗಳು ದಿಢೀರ್ ಪ್ರತಿಭಟನೆಗೆ ಇಳಿದಿದ್ದವು. ಪ್ರತಿಭಟನೆ ನಡೆಯುತ್ತಿದ್ದಾಗ ಹಾವೇರಿ ಬಸ್‌ ನಿಲ್ದಾಣದ ಹತ್ತಿರ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪೊಲೀಸರು ರೈತರ ಮೇಲೆ ಗೋಲಿಬಾರ್ ಮಾಡಿದ್ದರು. ಪೊಲೀಸರ ಗೋಲಿಬಾರ್‌ನಿಂದ ಇಬ್ಬರು ರೈತರು ಮೃತಪಟ್ಟು 19 ರೈತರು ಗಂಭೀರವಾಗಿ ಗಾಯಗೊಂಡಿದ್ದರು.

ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ; ಯಡಿಯೂರಪ್ಪ ಮನವಿ ಏನು?ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ; ಯಡಿಯೂರಪ್ಪ ಮನವಿ ಏನು?

ನಂತರ ಬಿಜೆಪಿ ಸರ್ಕಾರ ನ್ಯಾ. ಜಗನ್ನಾಥ್ ಶೆಟ್ಟಿ ನೇತೃತ್ವದ ಆಯೋಗ ರಚಿಸಿ ವರದಿ ಕೊಡಲು ಸೂಚಿಸಿತ್ತು. ಆದರೆ ನ್ಯಾ. ಜಗನ್ನಾಥ್ ಶೆಟ್ಟಿ ಸರ್ಕಾರಕ್ಕೆ ವರದಿ ಸಲ್ಲಿಸುವ ಮೊದಲೇ ಸೋರಿಕೆ ಆಗಿತ್ತು. ಗೋಲಿಬಾರ್‌ನಿಂದ ಮೃತಪಟ್ಟುವರು ರೈತರೆ ಅಲ್ಲ, ಗೂಂಡಾಗಳು ಎಂದು ಆಯೋಗ ವರದಿ ಕೊಟ್ಟಿತ್ತು. ವರದಿ ವಿರುದ್ಧ ಇಡೀ ನಾಡಿನ ರೈತ ಸಮುದಾಯ ಸರ್ಕಾರದ ವಿರುದ್ಧ ಎದ್ದು ನಿಂತಿತ್ತು. ಮುಂದೆ ಕಾಂಗ್ರೆಸ್‌ ಸರ್ಕಾರ 2016ರಲ್ಲಿ ನ್ಯಾ. ಜಗನ್ನಾಥ್ ಶೆಟ್ಟಿ ಆಯೋಗದ ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸಿತ್ತು.

2008ರಲ್ಲಿ ರಾಜ್ಯದ ವಿವಿಧೆಡೆ ನಡೆದಿದ್ದ ದಾಳಿ

2008ರಲ್ಲಿ ರಾಜ್ಯದ ವಿವಿಧೆಡೆ ನಡೆದಿದ್ದ ದಾಳಿ

2008ರ ಜೂನ್ ತಿಂಗಳಲ್ಲಿ ರೈತರ ಗೋಲಿಬಾರ್ ಬಳಿಕ ಮುಂದೆ 2008 ಸೆಪ್ಟಂಬರ್ ತಿಂಗಳಿನಲ್ಲಿ ರಾಜ್ಯದಲ್ಲಿ ಮತ್ತೆ ಕಾನೂನು ಸುವ್ಯವಸ್ಥೆಗೆ ಭಂಗವಾಗಿತ್ತು. ಮಂಗಳೂರು, ಬೆಂಗಳೂರು, ಕೋಲಾರ, ಚಿಕ್ಕಮಗಳೂರು, ಬೆಳಗಾವಿ, ದಾವಣಗೇರೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಚರ್ಚ್‌ಗಳ ಮೇಲೆ ದಾಳಿ ನಡೆದಿತ್ತು. ಚರ್ಚ್‌ ಗೋಪುರ, ಏಸುಕ್ರಿಸ್ತರ ಮೂರ್ತಿಗಳನ್ನು ಭಂಗಮಾಡಲಾಗಿತ್ತು. ಇದರಿಂದ ಕ್ರಿಶ್ಚಿಯನ್ನರು ಬೀದಿಗಳಿದು ಪ್ರತಿಭಟನೆ ಆರಂಭಿದ್ದರು. ಆಗಲೂ ಕೂಡ ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ಆಗಿತ್ತು. ನಂತರ ಇಡೀ ಪ್ರಕರಣದ ತನಿಖೆ ನಡೆಸಲು ನ್ಯಾ. ಸೋಮಶೇಖರ್ ಆಯೋಗ ರಚನೆ ಮಾಡಿತ್ತು.

ಆದರೆ ನ್ಯಾ. ಸೋಮಶೇಖರ್ ಕೊಟ್ಟಿದ್ದ ವರದಿಯನ್ನು ಕ್ರಶ್ಚಿಯನ್ ಸಮುದಾಯ ಒಪ್ಪಿಕೊಂಡಿರಲಿಲ್ಲ. 'ಚರ್ಚ್‌ಗಳ ಮೇಲೆ ನಡೆದ ದಾಳಿ ಹಿಂದೆ ಸರ್ಕಾರ, ಆಡಳಿತ ಪಕ್ಷ-ಸಂಘ ಪರಿವಾರದ ಕೈವಾಡವಿಲ್ಲ' ಎಂದು ನ್ಯಾ. ಸೋಮಶೇಖರ್ ಕೊಟ್ಟಿದ್ದರು. ನಂತರ ಕಾಂಗ್ರೆಸ್‌ ಸರ್ಕಾರ ನ್ಯಾ. ಸೋಮಶೇಖರ್ ವರದಿಯನ್ನೂ ತಿರಸ್ಕರಿಸತ್ತು.

ಆದರೆ ಹೀಗೆ ಆಗೋದು ಯಾಕೇ?

ಆದರೆ ಹೀಗೆ ಆಗೋದು ಯಾಕೇ?

ಆಂತರಿಕವಾಗಿ ರಾಜಕೀಯ ವಿರೋಧಿಗಳು ಕೂಡ ಯಡಿಯೂರಪ್ಪ ಅವರನ್ನ ಜಾತ್ಯತೀತ ವ್ಯಕ್ತಿ ಎಂದೆ ಪರಿಗಣಿಸುತ್ತಾರೆ. ಆದರೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗಲೇ ಇಂತಹ ಪ್ರಕರಣಗಳು ನಡೆಯುತ್ತವೆ. ಕಾನೂನನ್ನು ಕೈಗೆತ್ತಿಕೊಳ್ಳಬಾರದು ಅಂತಾ ಸಿಎಂ ಯಡಿಯೂರಪ್ಪ ನಿನ್ನೆ ಮಧ್ಯಾಹ್ನ ಗೃಹ ಕಚೇರಿ ಕೃಷ್ಣಾದಲ್ಲಿ ಮಾದ್ಯಮಗಳ ಮೂಲಕ ಪೊಲೀಸರಿಗೆ ಎಚ್ಚರಿಕೆ ಕೊಟ್ಟಿದ್ದರು. ಅದಾದ ಬಳಿಕ ಮಂಗಳೂರಿನಲ್ಲಿ ಗೋಲಿಬಾರ್ ನಡೆಸಿದ್ದಾರೆ. ಹಾಗಾದರೆ ಯಡಿಯೂರಪ್ಪರ ಮಾತಿಗೆ ಪೊಲೀಸ್ ಇಲಾಖೆ ಮಹತ್ವ ಕೊಟ್ಟಿರಲಿಲ್ಲವಾ? ಮಹತ್ವ ಕೊಟ್ಟಿದ್ದರೂ ಹಿರಿಯ ಪೊಲೀಸ್ ಅಧಿಕಾರಿಗಳು ತಮ್ಮ ಸಿಬ್ಬಂದಿಗೆ ಸಂಯಮ ಕಾಪಾಡಿಕೊಳ್ಳುವಂತೆ ಸಂದೇಶ ರವಾನೆ ಮಾಡುವುದನ್ನು ಮರೆತರಾ?. ಎಂಬುದರ ಕುರಿತು ಈಗ ಚರ್ಚೆಗಳು ಆರಂಭವಾಗಿವೆ.

ಮಂಗಳೂರಿನಲ್ಲಿ ವಶಕ್ಕೆ ಪಡೆದಿದ್ದ 50 ಮಂದಿ ಕೇರಳ ಪತ್ರಕರ್ತರ ಬಿಡುಗಡೆಮಂಗಳೂರಿನಲ್ಲಿ ವಶಕ್ಕೆ ಪಡೆದಿದ್ದ 50 ಮಂದಿ ಕೇರಳ ಪತ್ರಕರ್ತರ ಬಿಡುಗಡೆ

ನಮ್ಮ ಕಾಲದಲ್ಲಿ ಬಂದೂಕು ನೆನಪಿಗೆ ಬಂದಿರಲಿಲ್ಲ: ಸಿದ್ದರಾಮಯ್ಯ

ನಮ್ಮ ಕಾಲದಲ್ಲಿ ಬಂದೂಕು ನೆನಪಿಗೆ ಬಂದಿರಲಿಲ್ಲ: ಸಿದ್ದರಾಮಯ್ಯ

ಉಪ ಚುನಾವಣೆ ಬಳಿಕ ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಿಡಿತ ಪಕ್ಷದಲ್ಲಿ ಭದ್ರವಾಗಿದೆ. ಸಂಘಟನೆ ಮೀರಿ ಯಡಿಯೂರಪ್ಪ ಬೆಳೆದಿದ್ದಾರೆ. ಹಿಂದೆ ಕೂಡ ಯಡಿಯೂರಪ್ಪ ಅವರನ್ನ ಹಿಡಿತದಲ್ಲಿ ಇಟ್ಟುಕೊಳ್ಳಲು ಇಂಥದ್ದೆ ಪಿತೂರಿ ನಡೆದಿತ್ತು. ಈಗ ಸಹ ಅಂಥದ್ದೆ ಪಿತೂರಿ ನಡೆದಿದೆ. ಮುಖ್ಯಮಂತ್ರಿಗಳು ಎಚ್ಚರಿಕೆ ಕೊಟ್ಟ ಮೇಲೂ ಗೋಲಿಬಾರ್ ಆಗಿದೆ. ಇದಲ್ಲದೆ ಬೆಂಗಳೂರಿನಲ್ಲಿ ಇತಿಹಾಸಕಾರ ರಾಮಚಂದ್ರ ಗುಹಾ ಅವರನ್ನೂ ಕೂಡ ಪೊಲೀಸರು ಸರಿಯಾಗಿ ನಡೆಸಿಕೊಂಡಿಲ್ಲ. ಇವೆಲ್ಲವನ್ನೂ ನೋಡಿದರೆ ಬೇರೆ ಏನೊ ಇದೆ ಎಂದು ಅನ್ನಿಸುತ್ತಿದೆ ಎಂದು ಬಿಜೆಪಿ ನಾಯಕರೊಬ್ಬರು ಮಾಹಿತಿ ಕೊಟ್ಟಿದ್ದಾರೆ.

'ಇಷ್ಟು ಗುಂಡು ಹಾರಿಸಿಯೂ ಒಬ್ಬನೂ ಸಾಯಲಿಲ್ಲವಲ್ಲ': ವೈರಲ್ ವಿಡಿಯೋ'ಇಷ್ಟು ಗುಂಡು ಹಾರಿಸಿಯೂ ಒಬ್ಬನೂ ಸಾಯಲಿಲ್ಲವಲ್ಲ': ವೈರಲ್ ವಿಡಿಯೋ

ಸಧ್ಯದ ಘಟನೆಯ ಬಗ್ಗೆ ವಿಪಕ್ಷಗಳು ಕಿಡಿ ಕಾರಿವೆ. ಮಾಜಿ ಸಿಎಂ ಸಿದ್ದರಾಮಯ್ಯ ನಮ್ಮ ಕಾಲದಲ್ಲಿ ಬಂದೂಕು ನೆನಪಿಗೆ ಬಂದಿರಲಿಲ್ಲ ಎಂದು ಹೇಳುವ ಮೂಲಕ ಕಬ್ಬು ಬೆಳೆಗಾರರ ಪ್ರತಿಭಟನೆಯನ್ನು ಪ್ರಸ್ತಾಪಿಸಿದ್ದಾರೆ. ಖಂಡಿತವಾಗಿಯೂ ಕೂಡ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಬಹುದೊಡ್ಡ ಪ್ರತಿಭಟನೆಯನ್ನು ರೈತರು ಮಾಡಿದ್ದರು. ವಿಷ ಕುಡಿದು ರೈತ ಆತ್ಮಹತ್ಯೆ ಮಾಡಿಕೊಂಡಿದ್ದು ಬಿಟ್ಟರೆ, ಗೋಲಿಬಾರ್ ನಂತಹ ಘಟನೆಗಳು ನಡೆದಿರಲಿಲ್ಲ, ಇದೀಗ ವಿಪಕ್ಷಗಳು ಹಾಲಿ ಹೈಕೋರ್ಟ್‌ ನ್ಯಾಯಮೂರ್ತಿಗಳಿಂದಲೇ ತನಿಖೆ ನಡೆಸಲು ಒತ್ತಾಯಿಸಿದ್ದಾರೆ.

ಹೈಕೋರ್ಟ್‌ ಹಾಲಿ ನ್ಯಾಯಮೂರ್ತಿಗಳಿಂದ ನಿಷ್ಟಕ್ಷಪಾತದ ತನಿಖೆ ನಡೆದರೇ ಘಟನೆಗೆ ನಿಜವಾದ ಕಾರಣ ಹೊರಗೆ ಬರಬಹುದು ಎಂಬುದು ನಾಡಿನ ಜನರ ಆಶಯವೂ ಆಗಿದೆ.

English summary
What is reason behind law and order falls in yediyurappa government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X