ಲಕ್ಕುಂಡಿಯಲ್ಲಿ ಮುಂದುವರಿದ ಉತ್ಖನನ: ಅಗೆದಷ್ಟು ಸಿಗುತ್ತಿವೆ ಪ್ರಾಚೀನ ಅವಶೇಷಗಳು
ಗದಗ: ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ನಿಧಿ ದೊರೆತ ಬಳಿಕ 'ಲಕ್ಕುಂಡಿ ಪಾರಂಪರಿಕ ಪ್ರದೇಶಾಭಿವೃದ್ಧಿ ಪ್ರಾಧಿಕಾರ'ದ ಅಧಿಕಾರಿಗಳು ಅಲ್ಲಿಯೇ ಬೀಡು ಬಿಟ್ಟಿದ್ದಾರೆ. ಉತ್ಖನನ ಕಾರ್ಯ ಮುಂದುವರಿಸಿದ್ದಾರೆ. ಇದೀಗ ಮತ್ತೊಂದು ಶಿಲಾಯುಗದ ಕೈಕೊಡಲಿ ಹಾಗೂ ಕಂಬದ ಬೋಧಿಗೆ ಪತ್ತೆ ಆಗಿದೆ. ಇದನ್ನು ವಶಕ್ಕೆ ಪಡೆದ ಅಧಿಕಾರಿಗಳು ಟ್ಯಾಗ್ ಹಾಕಿದ್ದು, ಪರಿಶೀಲಿಸುತ್ತಿದ್ದಾರೆ.
ಲಕ್ಕುಂಡಿಯಲ್ಲಿ ಸರ್ಕಾರದ ವತಿಯಿಂದ ಉತ್ಖನನ ಕಾರ್ಯ ಮುಂದುವರಿದಿದೆ. ಐದನೇ ದಿನದ ಉತ್ಖನನ ಕಾರ್ಯದಲ್ಲಿ ಸೋಮವಾರ ನವಶಿಲಾಯುಗದ ಕೈ ಕೊಡಲಿ ಮತ್ತು ಬೋಧಿಗೆ ಪ್ರಾಚ್ಯ ಅವಶೇಷ ದೊರೆತಿದೆ. ಕೈ ಕೊಡಲಿ ಆಕಾರದ ಕಲ್ಲು ಜೊತೆಗೆ ಕಂಬದ ಮೇಲೆ ಆಸೆರೆಯಾಗುವ (ದೇವಸ್ಥಾನಗಳಲ್ಲಿ ಕಂಬದ ಮೇಲೆ ಆಸೆರೆಗೆ ಅಳವಡಿಸಿರುವ ಅಗಲ ಆಕಾರದ ಶಿಲೆ) ಕಲ್ಲು ಬೋಧಿಗೆ ಪತ್ತೆ ಆಗಿದೆ. ಇದರ ಕುರಿತು ಪ್ರಾಚ್ಯವಸ್ತು ತಜ್ಞರು ತನಿಖೆ ನಡೆಸಿದ ಬಳಿಕ ಹೆಚ್ಚಿನ ಮಾಹಿತಿಗಳು ಸಿಗಲಿವೆ ಎಂದು 'ಲಕ್ಕುಂಡಿ ಪಾರಂಪರಿಕ ಪ್ರದೇಶಾಭಿವೃದ್ಧಿ ಪ್ರಾಧಿಕಾರ' ಸದಸ್ಯ ಸಿದ್ದು ಪಾಟೀಲ್ ಅವರು ತಿಳಿಸಿದ್ದಾರೆ.

ಉತ್ಖನನ ಕಾರ್ಯದ ನಾಲ್ಕನೇ ದಿನ ಭಾನುವಾರ (ಜನವರಿ 18) ರಂದು ನವ ಶಿಲಾಯುಗದಲ್ಲಿ ಬಳಕೆ ಆಗಿತ್ತು ಎನ್ನಲಾದ ಆಯುಧ ಮಾದರಿಯ ಕಲ್ಲು ಪತ್ತೆ ಆಗಿತ್ತು. ಈ ಕಲ್ಲಿನ ಬಳಕೆ, ಇತಿಹಾಸ ಪತ್ತೆಗೆ ತಜ್ಞರು ಮುಂದಾಗಿದ್ದಾರೆ.
ಮುಂದುವರಿದ ಲಕ್ಕುಂಡಿ ಉತ್ಖನನ ಕಾರ್ಯ
ಲಕ್ಕುಂಡಿಯ ವೀರಭದ್ರೇಶ್ವರ ದೇವಸ್ಥಾನ ಸಮೀಪದ ಗಂಗವ್ವ ರಿತ್ತಿ ಎಂಬುವವರು ಹೊಸ ಮನೆ ಕಟ್ಟಲು ಪಾಯ ಅಗೆಯುವ ವೇಳೆ ನಿಧಿ ಸಿಕ್ಕಿತ್ತು. ಅದಾದ ಬಳಿಕ ಮತ್ತೊಂದು ಗ್ರಾಮದ ಮತ್ತೊಂದು ಪ್ರದೇಶದಲ್ಲಿ ಮುತ್ತು, ಹವಳ ಸಿಕ್ಕಿದ್ದವು. ಬಳಿಕ ಸರ್ಕಾರ ಇಲ್ಲಿ ಮತ್ತಷ್ಟು ಪ್ರಾಚೀನ ವಸ್ತುಗಳು, ನಿಧಿ ಅಥವಾ ಅವಶೇಷಗಳು ಸಿಗುವ ವಿಶ್ವಾಸದಿಂದ ಉತ್ಖನನ ಕಾರ್ಯ ನಡೆಸಿದೆ. ಗ್ರಾಮದಲ್ಲಿ ಉತ್ಖನನ ಕೆಲಸಕ್ಕೆ ಸುಮಾರು 20ಕ್ಕೂ ಹೆಚ್ಚು ಮಹಿಳೆಯರು ಮತ್ತು 10ಕ್ಕೂ ಹೆಚ್ಚು ಮಂದಿ (ಒಟ್ಟು 35ಕ್ಕೂ ಅಧಿಕ ಕಾರ್ಮಿಕರು) ಕಾರ್ಮಿಕರಿಂದ ಉತ್ಖನನ ಕೆಲಸ ನಡೆಸಲಾಗುತ್ತಿದೆ.
ಮಹಿಳೆ ಹಾಗೂ ಪುರುಷ ಕಾರ್ಮಿಕರಿಗೆ ಪ್ರತಿ ದಿನಕ್ಕೆ 347 ರೂಪಾಯಿ ಯಂತೆ ಕೂಲಿ ನೀಡಲಾಗುತ್ತಿದೆ. ನಿತ್ಯ ಎಂಟು ಗಂಟೆಗಳ ಕಾಲ ದುಡಿಸಿಕೊಳ್ಳುತ್ತಾರೆ. ಇಷ್ಟು ಕಡಿಮೆ ಕೂಲಿ ಸಾಕಾಗುವುದಿಲ್ಲ. ಕೂಲಿ ಹಣವನ್ನು 600 ರೂಪಾಯಿಗೆ ಏರಿಕೆ ಮಾಡುವಂತೆ ಕಾರ್ಮಿಕರು ಆಗ್ರಹಿಸಿದ್ದಾರೆ. ಈ ಬಗ್ಗೆ ಪ್ರಾಧಿಕಾರವು ಯಾವುದೇ ತೀರ್ಮಾನ ಮಾಡಿಲ್ಲ. ಮುಂದಿನ ಎರಡು ತಿಂಗಳ ವರೆಗೆ ಲಕ್ಕುಂಡಿಯಲ್ಲಿ ಉತ್ಖನನ ಕಾರ್ಯ ಮುಂದುವರಿಯಲಿದೆ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications