ಅಮೆರಿಕದಲ್ಲಿ ದೇವಸ್ಥಾನ ಶಂಕುಸ್ಥಾಪನೆಗೆ ಹೊರಟ ಕುಮಾರಸ್ವಾಮಿ

Recommended Video

      ಅಮೆರಿಕಕ್ಕೆ ತೆರಳಿದ ಎಚ್.ಡಿ.ಕುಮಾರಸ್ವಾಮಿ | Oneindia Kannada

      ಬೆಂಗಳೂರು, ಜೂನ್ 28: ಅಮೆರಿಕದಲ್ಲಿ ಕಾಲಬೈರವೇಶ್ವರ್ ಸ್ವಾಮಿ ದೇವಸ್ಥಾನ ನಿರ್ಮಾಣದ ಶಂಕುಸ್ಥಾಪನೆಗೆ ಕುಮಾರಸ್ವಾಮಿ ಅವರು ಹೊರಟಿದ್ದು, ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನನಿಲ್ದಾಣದಿಂದ ಇಂದು ರಾತ್ರಿ ಪ್ರಯಾಣ ಬೆಳೆಸಿದ್ದಾರೆ.

      ಇದೊಂದು ಸರ್ಕಾರಿಯೇತರ ಕಾರ್ಯಕ್ರಮವಾಗಿದ್ದು, ಕುಮಾರಸ್ವಾಮಿ ಅವರು ತಮ್ಮ ಸ್ವಂತ ಖರ್ಚಿನಲ್ಲಿಯೇ ಅಮೆರಿಕದ ಪ್ರಯಾಣ ಬೆಳೆಸಿದ್ದಾರೆ. ಇದು ಒಂದು ವಾರದ ಭೇಟಿ ಆಗಿದ್ದು, ಜೂನ್ 5 ರಂದು ಅಮೆರಿಕದಿಂದ ಹೊರಟು ಜೂನ್ 6 ಕ್ಕೆ ಹಿಂದುರುಗಲಿದ್ದಾರೆ.

      ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಆಹ್ವಾನದ ಮೇರೆಗೆ ಕುಮಾರಸ್ವಾಮಿ ಅವರು ತೆರಳಿದ್ದು, ಜೂನ್ 30 ರಂದು ನ್ಯೂ ಜೆರ್ಸಿಯಲ್ಲಿ ಶ್ರೀ ಕಾಲಭೈರವೇಶ್ವರಸ್ವಾಮಿ ದೇವಾಲಯದ ಶಿಲಾನ್ಯಾಸ ನೆರವೇರಿಸಲಿದ್ದಾರೆ.

      Kumaraswamy went America for ground breaking ceremony of temple

      ಜುಲೈ 5 ರಂದು ಒಕ್ಕಲಿಗರ ಪರಿಷತ್ ಅಮೆರಿಕಾದ ಸಮಾವೇಶದಲ್ಲಿ ಭಾಗವಹಿಸಿ ಹಿಂದಿರುಗಲಿದ್ದಾರೆ. ಬರೋಬ್ಬರಿ ಎಂಟು ದಿನಗಳ ಸುದೀರ್ಘ ಸರ್ಕಾರಿಯೇತರ ಪ್ರವಾಸ ಇದಾಗಿದೆ.

      ವೆಸ್‌ಟರ್ನ್‌ ರಸ್ತೆ, ಸಮರ್‌ಸೆಟ್‌, ನ್ಯೂಜೆರ್ಸಿಯಲ್ಲಿ ಶಂಕುಸ್ಥಾಪನೆ ಕಾರ್ಯಕ್ರಮ ನಡೆಯಲಿದ್ದು, ನಿರ್ಮಲಾನಂದ ಮಹಾಸ್ವಾಮೀಜಿ, ಪರಮಾತ್ಮಾನಂದ ಸರಸ್ವತಿ ಮಹಾಸ್ವಾಮೀಜಿ, ಗಣಪತಿ ಸಚ್ಚಿದಾನಂದ ಮಹಾಸ್ವಾಮೀಜಿ ಅವರುಗಳು ದಿವ್ಯ ಸಾನಿಧ್ಯ ಇರಲಿದೆ.

      ಕುಮಾರಸ್ವಾಮಿ ಅವರು ಶಂಕು ಸ್ಥಾಪನೆ ನೆರವೇರಿಸಲಿದ್ದು, ಸಚಿವರಾದ ಸಿ.ಎಸ್.ಪುಟ್ಟರಾಜು, ಸಾ.ರಾ.ಮಹೇಶ್ ಅವರು ಅತಿಥಿಗಳ ಪಟ್ಟಿಯಲ್ಲಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+