ಮೈಸೂರು ದಸರಾ ವೈಭವ ಕಣ್ತುಂಬಿಕೊಳ್ಳಲು KSTDCಯಿಂದ ಅಂಬಾರಿ ಸೇವೆ ಸೇರಿ 7 ವಿಶೇಷ ಟೂರ್‌ ಪ್ಯಾಕೇಜ್

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಂಭ್ರಮ ಎಲ್ಲೆಡೆ ಕಳೆಗಟ್ಟುತ್ತಿದ್ದು, ನಾಡಹಬ್ಬವನ್ನ ಕಣ್ತುಂಬಿಕೊಳ್ಳಲು ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) ಭರ್ಜರಿ ಸಿದ್ಧತೆ ಮಾಡಿಕೊಂಡಿದೆ.

ಹೌದು ನೋಡಿ, ಪ್ರವಾಸಿಗರಿಗಾಗಿಯೇ 7 ವಿಶೇಷ ಟೂರ್‌ ಪ್ಯಾಕೇಜ್‌ಗಳು ಹಾಗೂ ಮೈಸೂರಿನ ವಿದ್ಯುತ್ ದೀಪಾಲಂಕಾರವನ್ನ ವೀಕ್ಷಿಸಲು ಅಂಬಾರಿ ಡಬಲ್ ಡೆಕ್ಕರ್ ಬಸ್ ಸೇವೆಯನ್ನ ಪರಿಚಯಿಸಲಾಗಿದೆ ಎಂದು ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.

KSTDC Offers 7 Different Special Tour Packages amp amp Ambaari Double Decker Bus For Mysuru Dasara 2026

ಅಂಬಾರಿ ಡಬಲ್ ಡೆಕ್ಕರ್ ಬಸ್ ಸೇವೆ

ಮೈಸೂರಿನ ಪ್ರಮುಖ ತಾಣಗಳು ಹಾಗೂ ದಸರಾ ದೀಪಾಲಂಕಾರವನ್ನ ವೀಕ್ಷಿಸಲು ಪ್ರವಾಸಿಗರ ಅಚ್ಚುಮೆಚ್ಚಿನ ಅಂಬಾರಿ ಓಪನ್ ರೂಫ್ ಡಬಲ್ ಡೆಕ್ಕರ್ ಬಸ್ ಸೇವೆ ಲಭ್ಯವಿರಲಿದೆ. ಹಗಲು ವೇಳೆಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಪ್ರತಿ ಒಂದು ಗಂಟೆಗೊಮ್ಮೆ ಈ ಬಸ್ ಸಂಚರಿಸಲಿದ್ದು, ಪ್ರತಿ ವ್ಯಕ್ತಿಗೆ 250 ರೂಪಾಯಿ ದರ ನಿಗದಿಪಡಿಸಲಾಗಿದೆ.

ದೀಪಾಲಂಕಾರ ವೀಕ್ಷಣೆಗೆ ವಿಶೇಷ ಸವಾರಿ

ಈ ಬಾರಿಯ ದಸರಾಕ್ಕೆ ಮೈಸೂರು ನಗರದಾದ್ಯಂತ ಬರೋಬ್ಬರಿ 146 ಕಿ.ಮೀ ಉದ್ದದ ಮಾರ್ಗಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿದೆ. ಈ ಝಗಮಗಿಸುವ ದೀಪಗಳ ಸೊಬಗನ್ನ ಸವಿಯಲು ಸಂಜೆ 6.30, ರಾತ್ರಿ 8.00 ಹಾಗೂ ರಾತ್ರಿ 9.30ಕ್ಕೆ ವಿಶೇಷ ಸವಾರಿಗಳನ್ನ ಆಯೋಜಿಸಲಾಗಿದೆ. ರಾತ್ರಿ ವೇಳೆಯ ಈ ಸವಾರಿಗೆ ಕೆಳಗಿನ ಡೆಕ್‌ಗೆ 250 ರೂಪಾಯಿ ಹಾಗೂ ಮೇಲಿನ ಡೆಕ್‌ಗೆ 500 ರೂಪಾಯಿ ನಿಗದಿಪಡಿಸಲಾಗಿದೆ.

ಕೆಎಸ್‌ಟಿಡಿಸಿಯ 7 ವಿಶೇಷ ಪ್ರವಾಸ ಪ್ಯಾಕೇಜ್‌ಗಳು

ಮೈಸೂರು ಹಾಗೂ ಅದರ ಸುತ್ತಮುತ್ತಲಿನ ಪ್ರಮುಖ ಪ್ರವಾಸಿ ತಾಣಗಳನ್ನ ಪರಿಚಯಿಸುವ ಉದ್ದೇಶದಿಂದ ಕೆಎಸ್‌ಟಿಡಿಸಿ ಏಳು ವಿಭಿನ್ನ ಪ್ರವಾಸ ಪ್ಯಾಕೇಜ್‌ಗಳನ್ನ ರೂಪಿಸಿದೆ.

1. ಊಟಿಯ ಎರಡು ದಿನಗಳ ಪ್ರವಾಸ

2. ಮೈಸೂರು ಸ್ಥಳೀಯ ಪ್ರವಾಸ

3. ಬೇಲೂರು-ಹಳೆಬೀಡು-ಶ್ರವಣಬೆಳಗೊಳ

4. ಕೊಡಗಿನ ಪ್ರಮುಖ ತಾಣಗಳು

5. ಶಿವನಸಮುದ್ರ ಮತ್ತು ಸುತ್ತಮುತ್ತಲಿನ ಪ್ರದೇಶಗಳು

6. ನಂಜನಗೂಡು ಸೇರಿ ವಿವಿಧ ಧಾರ್ಮಿಕ, ಐತಿಹಾಸಿಕ ಮತ್ತು ನೈಸರ್ಗಿಕ ಪ್ರವಾಸಿ ತಾಣಗಳನ್ನು ಒಳಗೊಂಡ ಒಂದು ಹಾಗೂ ಎರಡು ದಿನಗಳ ಪ್ರವಾಸ ಪ್ಯಾಕೇಜ್‌ಗಳು ಪ್ರವಾಸಿಗರಿಗೆ ಲಭ್ಯವಿವೆ ಎಂದು ಸಚಿವರು ವಿವರಿಸಿದ್ದಾರೆ.

ಬುಕಿಂಗ್ ಮತ್ತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಈ ವಿಶೇಷ ಟೂರ್‌ ಪ್ಯಾಕೇಜ್‌ಗಳು ಹಾಗೂ ಅಂಬಾರಿ ಬಸ್ ಸೇವೆಯ ಬುಕಿಂಗ್‌ಗಾಗಿ ಪ್ರವಾಸಿಗರು ಕೆಎಸ್‌ಟಿಡಿಸಿ ಸಹಾಯವಾಣಿ ಸಂಖ್ಯೆಗಳನ್ನ ಸಂಪರ್ಕಿಸಬಹುದು.

* ಸಹಾಯವಾಣಿ ಸಂಖ್ಯೆಗಳು: 080-4334 4334 / 0821-2423652 / 8970656400

* ವೆಬ್‌ಸೈಟ್: www.kstdc.co

* ಇ-ಮೇಲ್: [email protected]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+