KSRTC Dasara Bus: ದಸರಾ ಪ್ರಯುಕ್ತ 2000 ಹೆಚ್ಚುವರಿ ಬಸ್, KIAಯಿಂದ ವಿಶೇಷ ಬಸ್‌ಗಳ ಸೇವೆ! ವೇಳಾಪಟ್ಟಿ
ಬೆಂಗಳೂರು, ಅಕ್ಟೋಬರ್ 07: ಇತ್ತಿಚೆಗೆ ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ 2024ಗೆ ಚಾಲನೆ ಸಿಕ್ಕಿದೆ. ಮೈಸೂರಿಗೆ ಬೇರೆ ಬೇರೆ ಕಡೆಯಿಂದ ಬರುವವರಿಗೆ ಅನುಕೂಲವಾಗಲೆಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಈ ನಾಲ್ಕು ದಿನಗಳ ಕಾಲ ಹೆಚ್ಚುವರಿ ಬಸ್‌ಗಳನ್ನು ಓಡಿಸಲಿದೆ. ಅದರಲ್ಲೂ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA) ನೇರ ವಿಶೇಷ ಬಸ್‌ಗಳನ್ನು ಕಾರ್ಯಾಚರಣೆಗೆ ನಿರ್ಧರಿಸಿದೆ.
KSRTC ನಿಗಮವು ಒಟ್ಟು 2000 ಹೆಚ್ಚುವರಿ ಬಸ್‌ಗಳನ್ನು ದಸರಾ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕೆ ಬಿಟ್ಟಿದೆ. ಇಷ್ಟು ಬಸ್‌ಗಳು ವಿಜಯದಶಮಿಯ ಕೊನೆಯ ಮೂರು ಮೈಸೂರಿಗೆ ಬರುವವರಿಗೆ ಸಾರಿಗೆ ಸೇವೆ ನೀಡಲಿವೆ. ಅಕ್ಟೊಬರ್ 09 ರಿಂದ 12ರವರೆಗೆ ಸೇವೆ ಲಭ್ಯ ಇರಲಿವೆ. ಆಯಾ ಘಟಕ, ನಿಲ್ದಾಣಗಳಿಂದ ಮೈಸೂರಿಗೆ ತೆರಳಲಿವೆ ಎಂದು ಕೆಎಸ್‌ಆರ್‌ಟಿಸಿ ಮಾಹಿತಿ ನೀಡಿದೆ.

ಕೆಇಎನಿಂದ ನೇರ ಮೈಸೂರಿಗೆ ಬಸ್ ವ್ಯವಸ್ಥೆ
ರಾಜ್ಯ ರಾಜಧಾನಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (KIA) ನೇರವಾಗಿ ಮೈಸೂರಿಗೆ ವಿಶೇಷ ಬಸ್‌ಗಳ ಸೇವೆ ಕಲ್ಪಿಸಲಾಗಿದೆ. ಮೈಸೂರಲ್ಲಿ ಜಲದರ್ಶಿನಿ, ಗಿರಿದರ್ಶಿನಿ ಹಾಗೂ ದೇವದರ್ಶಿನಿ ಎಂಬ ಪ್ರವಾಸ ಕಾರ್ಯಾಚದರಣೆ ಮಾಡಲಾಗಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆಗಳಿಂದ ನೀವು ಮೈಸೂರು ದಸರಾಗೆ ತೆರಳಬಹುದು. ಅಲ್ಲದೇ ಮೈಸೂರಿನಿಂದ ನೀವು ವಿವಿಧ ಕಡೆಗಳಲ್ಲಿ ವಿಶೇಷ ಬಸ್‌ಗಳಲ್ಲಿ ಪ್ರವಾಸಕ್ಕೂ ತೆರಳಬಹುದಾಗಿದೆ. ಈಗಾಗಲೇ ಇರುವ ಬಸ್‌ಗಳು ಅಕ್ಟೋಬರ್ 09ರ ನಂತರ ಭರ್ತಿಯಾಗುವ ಸಾಧ್ಯತೆ ಇದೆ. ಈ ವೇಳೆ ಸಾರ್ವಜನಿಕರಿಗೆ ತೊಂದರೆ ಆಗದಂತೆ ಈ ಹೆಚ್ಚುವರಿ ಬಸ್‌ಗಳ ಮೂಲಕ ಅನುಕೂಲ ಕಲ್ಪಿಸಲಾಗಿದೆ.
ಎಂದಿನಂತೆ ನೀವು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಅಧಿಕೃತ ವೆಬ್‌ಸೈಟ್ https://ksrtc.in/ ನಲ್ಲಿ ನೀವು ಟಿಕೆಟ್ ಬುಕ್ ಮಾಡಬಹುದಾಗಿದೆ. ಒಂದು ಕಡೆಗಿನ ನಾಲ್ಕು ಜನರ ಪ್ರಯಾಣದ ಆಸನ ಕಾಯ್ದಿರಿಸಿದರೆ ಶೇಕಡಾ 5ರಷ್ಟು ಹಾಗೂ ಇದೇ ಗುಂಪು ಎರಡು ಬದಿಯ ಆಸನ ಕಾಯ್ದಿರಿಸಿದರೆ ಅವರಿಗೆ ಶೇಕಡಾ 10ರಷ್ಟು ಟಿಕೆಟ್ ದರದಲ್ಲಿ ರಿಯಾಯಿತಿ ಸಿಗಲಿದೆ ಎಂದು ಕೆಎಸ್‌ಆರ್‌ಟಿಸಿ ಮಾಹಿತಿ ನೀಡಿದೆ.
ಕ್ಯಾಶ್‌ಲೆಸ್ ವ್ಯವಸ್ಥೆ ಜಾರಿ
ನವೆಂಬರ್ ತಿಂಗಳಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಎಲ್ಲ 8000ಕ್ಕೂ ಹೆಚ್ಚು ಬಸ್‌ಗಳಲ್ಲಿ ನಗರ ರಹಿತ ಪ್ರಯಾಣ ಸೇವೆ (ಕ್ಯಾಶ್‌ಲೆಸ್ ವ್ಯವಸ್ಥೆ) ಜಾರಿಗೆ ಬರಲಿದೆ. ಇನ್ಮುಂದೆ ಬಸ್‌ನಲ್ಲಿ ನಿರ್ವಾಹಕರು ಮತ್ತು ಪ್ರಯಾಣಿಕರ ಮಧ್ಯದ ಚಿಲ್ಲರೆ ವಾರ್ ನಿಲ್ಲಲಿದೆ. ಈ ಸಂಬಂಧ ಎಲೆಕ್ಟ್ರಿಕ್ ಟಿಕೆಟ್ ವಿತರಣಾ ಯಂತ್ರವನ್ನು ನಿರ್ವಾಹಕರು ಬಳಸಲಿದ್ದಾರೆ. ಪ್ರಯಾಣಿಕರು ಯುಪಿಐ, ಡೆಬಿಟ್ ಕಾರ್ಡ್, ಇನ್ನಿತರ ಆಪ್ ಮೂಲಕ ಟಿಕೆಟ್ ಹಣ ಪಾವತಿಸಬಹುದು. ಈ ಹೊಸ ವ್ಯವಸ್ಥೆಯು ನವೆಂಬರ್ 2024 ರಂದು ಜಾರಿಗೆ ಬರಲಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications