KSRTC ಬಸ್‌ನಲ್ಲೇ ವ್ಯಕ್ತಿಗೆ ಹೃದಯಾಘಾತ! ಆಸ್ಪತ್ರೆಗೇ ಬಸ್ ತಿರುಗಿಸಿದ ಚಾಲಕನ ಸಾಹಸಕ್ಕೆ ಭಾರೀ ಮೆಚ್ಚುಗೆ..Video
ತುಮಕೂರು: ಹೃದಯಘಾತ ಉಂಟಾಗಲು ಇಂತಿಷ್ಟು ವಯಸ್ಸಿನವರೇ ಆಗಬೇಕಂತಿಲ್ಲ. ಹದಿ ಹರೆಯದವರಲ್ಲೂ ಇತ್ತೀಚಿನ ದಿನಗಳಲ್ಲಿ ಹಾರ್ಟ್ ಅಟ್ಯಾಕ್ ಸಂಭವಿಸುತ್ತಿವೆ. ಬರೀ ವಯಸ್ಸಷ್ಟೇ ಅಲ್ಲ, ಇಂಥದ್ದೇ ಸ್ಥಳ ಅಂತಲೂ ಏನಿಲ್ಲ. ಯಾವುದೇ ಕೆಲಸ ಕಾರ್ಯದಲ್ಲಿ ತೊಡಗಿದ್ದಾಗಲೂ ಹೃದಯಾಘಾತ ಸಂಭವಿಸಿದ ಘಟನೆಗಳನ್ನು ನೋಡಿದ್ದೇವೆ. ಇದೀಗ KSRTC ಬಸ್‌ನಲ್ಲಿ ಸಂಚರಿಸುವಾಗ ವ್ಯಕ್ತಿಯೊಬ್ಬರಿಗೆ ಹೃದಯಾಘಾತವಾಗಿದ್ದು, ಸಹ ಪ್ರಯಾಣಿಕರನ್ನು ಬೆಚ್ಚಿ ಬೀಳಿಸಿದೆ. ಈ ವೇಳೆ ಬಸ್ ಚಾಲಕನ ತೋರಿದ ಸಾಹಸ, ಸಮಯ ಪ್ರಜ್ಞೆ, ಜವಾಬ್ದಾರಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಒಂದು ಸ್ಥಳದಿಂದ ಬೇರೊಂದು ಸ್ಥಳಕ್ಕೆ ಒಬ್ಬೋಬ್ಬರೆ ಹೋಗುವಾಗ ಹೀಗೆ ಬಸ್‌ನಲ್ಲಿ ಹೃದಯಾಘಾತ ಸಂಭವಿಸಿದರೆ ಗತಿ ಏನು? ಒಂದು ಕ್ಷಣ ಯೋಚಿಸಲು ಭಯವಾಗುತ್ತದೆ. ಆದರೆ ಇಂಥದ್ದೆ ಘಟನೆ ತುಮಕೂರು-ಮಧುಗಿರಿ ಮಾರ್ಗದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಬಸ್‌ನಲ್ಲಿ ನಡೆದಿದೆ. ಸಮಯಕ್ಕೆ ಸರಿಯಾಗಿ ತೆಗೆದುಕೊಂಡ ಚಾಲಕ ನಿರ್ಧಾರದಿಂದ ಸಕಾಲದಲ್ಲಿ ಹಠಾತ್ ಹೃದಯಾಘಾತಕ್ಕೆ ಒಳಗಾದ ವ್ಯಕ್ತಿಗೆ ತ್ವರಿತ ಚಿಕಿತ್ಸೆ ಸಿಕ್ಕಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಬಸ್‌ನಲ್ಲಿ ತುರ್ತು ಪರಿಸ್ಥಿತಿ!, ಆಸ್ಪತ್ರೆಗೆ ಬಸ್ ತಿರುಗಿಸಿದ ಚಾಲಕ
ತುಮಕೂರಿನಿಂದ ಮಧುಗಿರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನಿಗೆ ಹಠಾತ್ ಹೃದಯಾಘಾತ ಆಗಿದೆ ಎಂಬ ಸಂಗತಿ ತಿಳಿಯುತ್ತಿದ್ದಂತೆ ಬಸ್ ಚಾಲಕ ಸಮಯ ಪ್ರಜ್ಞೆ ಮೆರೆದಿದ್ದಾರೆ. ವ್ಯಕ್ತಿಯನ್ನು ಕಂಡು ಸಹ ಪ್ರಯಾಣಿಕರು ಆತಂಕಗೊಂಡಿದ್ದು, ಬಸ್‌ನಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಯಿತು. ಪ್ರಯಾಣಿಕರ ಸ್ಥಿತಿಯ ಗಂಭೀರತೆ ಅರಿತು ಚಾಲಕ ಕೂಡಲೇ ಂಸಮೀಪದ ತುಮಕೂರು-ಮಧುಗಿರಿ ರಸ್ತೆಯಲ್ಲಿರುವ ರಸ್ತೆಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ತಿರುಗಿಸಿದ್ದಾರೆ.
ಬಸ್ ಆಸ್ಪತ್ರೆ ಮುಂದೆ ಬರುತ್ತಿದ್ದಂತೆ ಪ್ರಯಾಣಿಕರು ದೌಡಾಯಿಸಿ ಆಸ್ಪತ್ರೆಗೆ ಒಳಗೆ ದೌಡಾಯಿಸುವ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ @karnatakaportf ಹಂಚಿಕೊಳ್ಳಲಾಗಿದೆ. ವಿಡಿಯೋ ಪ್ರಕಾರ, ಬಸ್ ಆಸ್ಪತ್ರೆಯ ಪ್ರವೇಶದ್ವಾರದ ಮುಂದೆ ವೇಗವಾಗಿ ಬಂದು ನಿಲ್ಲಿಸುತ್ತಿದ್ದಂತೆ ಪ್ರಯಾಣಿಕರು ತಡಮಾಡದೇ ಅನಾರೋಗ್ಯದ ವ್ಯಕ್ತಿಯನ್ನು ಸುರಕ್ಷಿತವಾಗಿ ಆಸ್ಪತ್ರೆಯೊಳಗೆ ಕರೆದೊಯ್ದಿದ್ದಾರೆ. ಕೂಡಲೇ ತುರ್ತು ಚಿಕಿತ್ಸೆ ನೀಡಲಾಗಿದ್ದು, ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಸಂಚಾರ ಸುರಕ್ಷತೆ ಜತೆಗೆ ಜೀವಕ್ಕೆ ಚಾಲಕನ ಆದ್ಯತೆ
ಸಕಾಲಕ್ಕೆ ವೈದ್ಯಕೀಯ ಆರೈಕೆ ನೀಡುವಲ್ಲಿ ಕಾರಣವಾದ ಚಾಲಕನ ತ್ವರಿತ ನಿರ್ಧಾರ, ಜವಾಬ್ದಾರಿ, ಪ್ರಯಾಣಿಕರ ಸುರಕ್ಷತೆಗೆ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಕೇವಲ ಪ್ರಯಾಣಿಕರಿಗೆ ಸುರಕ್ಷಿತ ಸಾರಿಗೆ ಸೇವೆ ನೀಡುವ ಜೊತೆಗೆ ಈ ಘಟನೆಯಲ್ಲಿನ ಚಾಲಕನ ಸಹಾನುಭೂತಿ, ವೃತ್ತಿಪರತೆ ಮತ್ತು ತ್ವರಿತ ಆಲೋಚನೆಯು ಪ್ರಯಾಣಿಕರ ಆರೋಗ್ಯಕ್ಕೆ ಒತ್ತು ನೀಡುತ್ತಾರೆ. ಸಂಚಾರ ಸುರಕ್ಷತೆ ಜೊತೆಗೆ ಜೀವ ಮುಖ್ಯ ಎಂಬುದಕ್ಕೆ ಅವರು ನೀಡಿದ ಆದ್ಯತೆಯ ಪ್ರದರ್ಶನವಾಗಿದೆ. ಚಾಲಕನಿಗೆ ತಕ್ಕಂತೆ ಸಹ ಪ್ರಯಾಣಿಕರು ಸಹಕರಿಸಿದ್ದಾರೆ. ಇವರೆಲ್ಲರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.
ತುಮಕೂರು-ಮಧುಗಿರಿ ಮಾರ್ಗಮಧ್ಯೆ ಪ್ರಯಾಣಿಕನಿಗೆ ಹೃದಯಾಘಾತ, ಸಮಯಕ್ಕೆ ಸರಿಯಾಗಿ ಆಸ್ಪತ್ರೆ ತಲುಪಿಸಿದ ಡ್ರೈವರ್!
— oneindiakannada (@OneindiaKannada) August 5, 2026
See more: https://t.co/BI2DK8Epoz#KSRTC #HeartAttackRescue #ViralWatch #OIKannada #OIReels #TumakuruNews #Madhugiri #RealHero pic.twitter.com/MqltpnNQAh


Click it and Unblock the Notifications
